Friday Remedies: ಧನ-ಸಂಪತ್ತಿಗಾಗಿ ಇಂದೇ ಮನೆಯಲ್ಲಿ ಈ ಕೆಲಸ ಮಾಡಿ

Friday Remedies: ಧರ್ಮ ಶಾಸ್ತ್ರಗಳ ಪ್ರಕಾರ, ವಾರದ ಪ್ರತಿ ದಿನವೂ ಒಂದೊಂದು ದೇವ-ದೇವತೆಗಳಿಗೆ ಮೀಸಲಾಗಿದೆ. ಅದರಂತೆ ಶುಕ್ರವಾರವನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಈ ದಿನ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಅಂತಹ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. 

Written by - Yashaswini V | Last Updated : Jul 28, 2023, 10:31 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರವಾರವನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ.
  • ಈ ದಿನ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ.
  • ಮಾತ್ರವಲ್ಲ, ಅಂತಹ ಮನೆಯಲ್ಲಿ ಸಂಪತ್ತು, ವೈಭವ, ಸಂತೋಷ ಸದಾ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
Friday Remedies: ಧನ-ಸಂಪತ್ತಿಗಾಗಿ ಇಂದೇ ಮನೆಯಲ್ಲಿ ಈ ಕೆಲಸ ಮಾಡಿ  title=

Friday Remedies: ಇಂದು ಶುಭ ಶುಕ್ರವಾರ. ಹಿಂದೂ ಧರ್ಮದಲ್ಲಿ ಶುಕ್ರವಾರಕ್ಕೆ ತುಂಬಾ ಮಹತ್ವವಿದೆ. ಈ ದಿನ ಸಂಪತ್ತಿನ ದೇವತೆಯಾದ ತಾಯಿ ಮಹಾಲಕ್ಷ್ಮಿಗೆ ಸಂಬಂಧಿಸಿದಂತೆ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಅಂತಹ ಮನೆಯಲ್ಲಿ ಸುಖ-ಸಂಪತ್ತಿಗೆ ಎಂದಿಗೂ ಕೊರತೆಯಾಗುವುದಿಲ್ಲ. ಮಾತ್ರವಲ್ಲ, ಇದರಿಂದ ಜಾತಕದಲ್ಲಿ ಸಂಪತ್ತು, ಐಷಾರಾಮಿ, ಸಂತೋಷ ಮತ್ತು ಪ್ರೀತಿಯ ಅಂಶವೆಂದು ಪರಿಗಣಿಸಲಾಗಿರುವ ಶುಕ್ರ ಗ್ರಹವನ್ನು ಕೂಡ ಬಳಪಡಿಸಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರವಾರ ಯಾವ ಕ್ರಮಗಳನ್ನು ಕೈಗೊಳ್ಳುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದು ತಿಳಿಯೋಣ... 

ಪ್ರತಿ ಶುಕ್ರವಾರ ಈ ಕೆಲಸ ಮಾಡುವುದರಿಂದ ಸಂಪತ್ತು ವೃದ್ಧಿ: 
ಜ್ಯೋತಿಷ್ಯ ಶಾಸ್ತ್ರ
ದ ಪ್ರಕಾರ, ಶುಕ್ರವಾರವನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಈ ದಿನ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಮಾತ್ರವಲ್ಲ, ಅಂತಹ ಮನೆಯಲ್ಲಿ ಸಂಪತ್ತು, ವೈಭವ, ಸಂತೋಷ ಸದಾ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. 

ಮನೆಯಲ್ಲಿ ಸುಖ-ಶಾಂತಿಗಾಗಿ ಶುಕ್ರವಾರದ ದಿನ ಈ ಕೆಲಸಗಳನ್ನು ತಪ್ಪದೇ ಮಾಡಿ: 
ಮನೆಯನ್ನು ಶುಚಿಯಾಗಿಡಿ: 

ಎಲ್ಲಿ ಶುಚಿತ್ವ ಇರುವುದಿಲ್ಲವೋ ಅಂಥಾ ಜಾಗದಲ್ಲಿ ತಾಯಿ ಲಕ್ಷ್ಮಿ ಕ್ಷಣ ಮಾತ್ರವೂ ಇರಲು ಬಯಸುವುದಿಲ್ಲ. ಹಾಗಾಗಿ, ಶುಕ್ರವಾರದಂದು ಮನೆ ಒಳಗೆ ಮಾತ್ರವಲ್ಲ, ಮನೆ ಹೊರಗಡೆಯೂ ಶುಚಿತ್ವದ ಬಗ್ಗೆ ನಿಗಾವಹಿಸಿ. 

ಇದನ್ನೂ ಓದಿ- Rahu: ನಿಮ್ಮ ಜಾತಕದಲ್ಲಿ ರಾಹು ಬಲವಾಗಿದ್ದಾನೆಯೇ? ಇಲ್ಲ ದುರ್ಬಲನೋ! ಈ ರೀತಿ ತಿಳಿಯಿರಿ

ಮುಖ್ಯ ಬಾಗಿಲಿನಲ್ಲಿ ಸ್ವಸ್ತಿಕ್: 
ಶುಕ್ರವಾರದ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಮನೆ ಶುಚಿಗೊಳಿಸಿ ಬಾಗಿಲಿಗೆ ರಂಗೋಲಿ ಬಿಡಿಸಿದ ಬಳಿಕ ಮನೆಯ ಮುಖ್ಯ ಬಾಗಿಲನ್ನೂ ಸ್ವಚ್ಛಗೊಳಿಸಿ ಸ್ವಸ್ತಿಕ್ ಅನ್ನು ಬರೆಯಿರಿ. ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ್ ಬರೆಯುವುದರಿಂದ ಮನೆಗೆ ಧನಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಅಂತಹ ಮನೆಯಲ್ಲಿ ಸದಾ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. 

ಕಮಲದ ಹೂವು: 
ಶುಕ್ರವಾರದ ದಿನ ಸಾಧ್ಯವಾದಷ್ಟು ತಾಯಿ ಲಕ್ಷ್ಮಿಯ ಪೂಜೆಯಲ್ಲಿ ಕಮಲದ ಹೂವನ್ನು ಬಳಸಿ. ಶುಕ್ರವಾರ ಬಿಳಿ ಬಟ್ಟೆ ತೊಟ್ಟು ಲಕ್ಷ್ಮಿಗೆ ಪೂಜಿಸುವಾಗ ಕಮಲದ ಹೂವನ್ನು ಅರ್ಪಿಸುವುದರಿಂದ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆಯಿದೆ. 

ಹಸುವಿಗೆ ಆಹಾರ: 
ಶುಕ್ರವಾರ ಪೂಜೆ ಬಳಿಕ ಹಸುವಿಗೆ ಒಂದಿಡಿ ಅಕ್ಕಿ, ಬೆಲ್ಲ, ಬೆಳೆಯನ್ನು ತಿನ್ನಿಸಿ. ಈ ರೀತಿ ಮಾಡುವುದರಿಂದ ಮನೆಯ ಸಂಕಷ್ಟಗಳೆಲ್ಲಾ ದೂರವಾಗಿ ಅಂತಹ ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Lucky Plants: ವೃತ್ತಿ-ವ್ಯವಹಾರದಲ್ಲಿ ಪ್ರಗತಿಗಾಗಿ ನಿಮ್ಮ ಮನೆಯಲ್ಲೂ ಇರಲಿ ಈ ಸಸ್ಯಗಳು

ಪೂಜೆ ಬಳಿಕ ಈ ಕೆಲಸ ಮಾಡಿ: 
ನೀವು ಆರ್ಥಿಕ ಸಂಕಷ್ಟಗಳಿಂದ ಬಳಸುತ್ತಿದ್ದರೆ ಇದರಿಂದ ಪರಿಹಾರ ಪಡೆಯಲು ಲಕ್ಷ್ಮಿ ದೇವಿಗೆ ಪೂಜಿಸುವಾಗ ಒಂದು ಹಳದಿ ವಸ್ತ್ರದಲ್ಲಿ 5 ನಾಣ್ಯಗಳನ್ನು ಇರಿಸಿ. ಸಾಧ್ಯವಾದರೆ ಇದರೊಂದಿಗೆ ಒಂದು ಬೆಳ್ಳಿಯ ನಾಣ್ಯವನ್ನೂ ಇಟ್ಟು ಪೂಜಿಸಿ. ಪೂಜೆಯ ನಂತರ ಇದನ್ನು ಗಂಟು ಕಟ್ಟಿ ನೀವು ಹಣ ಇಡುವ ಜಾಗದಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ಸಾಲಗಳಿಂದ ಮುಕ್ತಿ ದೊರೆತು ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ನೀವು ಬಹಳ ಬೇಗ ಶ್ರೀಮಂತರಾಗುತ್ತೀರಿ ಎನ್ನಲಾಗುವುದು. 

ತುಪ್ಪದ ದೀಪ: 
ನಿಮ್ಮ ಕೈಯಲ್ಲಿ ಸಾಧ್ಯವಾದರೆ ಶುಕ್ರವಾರದ ದಿನ ಮುಸ್ಸಂಜೆಯಲ್ಲಿ ಲಕ್ಷ್ಮಿ ಪೂಜೆಯ ವೇಳೆ ತುಪ್ಪಡ ದೀಪವನ್ನು ಬೆಳಗಿಸಿ. ಇದರಿಂದ ತಾಯಿ ಲಕ್ಷ್ಮಿ ತುಂಬಾ ಸಂತಸಗೊಳ್ಳುತ್ತಾಳೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News