Women's Health: ಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ಕುಡಿಯಲೇಬೇಕು ಈ 3 ಪಾನೀಯ

Women's Health Tips: ಈ ಫಾಸ್ಟ್ ಜೀವನ ಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಖಂಡಿತವಾಗಿಯೂ ಯಾವುದೇ ಸವಾಲಿಗಿಂತ ಕಡಿಮೆಯಿಲ್ಲ. ಅದರಲ್ಲೂ, ಮನೆಯಲ್ಲಿ, ಹೊರಗಡೆ ಹೀಗೆ ಸದಾ ಕಾರ್ಯೋನ್ಮುಖಳಾಗಿರುವ ಮಹಿಳೆಯರಿಗೆ ತಮ್ಮ ಆರೋಗ್ಯದ ಬಗ್ಗೆ ನಿಗಾವಹಿಸುವುದು ಕೂಡ ಬಹಳ ಕಷ್ಟ. ಆರೋಗ್ಯ ತಜ್ಞರ ಪ್ರಕಾರ, ಮೂರು ರೀತಿಯ ಜ್ಯೂಸ್ ಸೇವನೆಯಿಂದ ಮಹಿಳೆಯರ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Jul 27, 2023, 11:30 AM IST
  • ನಾವು ಆರೋಗ್ಯ ಕೆಟ್ಟ ಬಳಿಕ ಔಷಧಿಗಳ ಮೊರೆ ಹೋಗುವ ಬದಲಿಗೆ ನಿತ್ಯ ಜೀವನದಲ್ಲಿ ಕೆಲವು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
  • ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯರು ಪ್ರತಿ ದಿನ ಈ ಮೂರು ಬಗೆಯ ಜ್ಯೂಸ್‌ಗಳಲ್ಲಿ ಯಾವುದಾದರೊಂದು ಜ್ಯೂಸ್ ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.
Women's Health: ಉತ್ತಮ ಆರೋಗ್ಯಕ್ಕಾಗಿ ಮಹಿಳೆಯರು ಕುಡಿಯಲೇಬೇಕು ಈ 3  ಪಾನೀಯ  title=

Women's Health Tips: ಗಂಡ, ಮನೆ, ಮಕ್ಕಳು ಈ ಎಲ್ಲದರ ಜೊತೆಗೆ ಕಚೇರಿಯ ಕೆಲಸವನ್ನೂ ಸುಸೂತ್ರವಾಗಿ ನಡೆಸಿಕೊಂಡು ಹೋಗುವ ಅದೆಷ್ಟೋ ಮಹಿಳೆಯರು ನಮ್ಮ-ನಿಮ್ಮೆಲ್ಲರ ಮಧ್ಯೆ ಇದ್ದಾರೆ. ಮಹಿಳೆ ತಾಯಿಯಾಗಿ, ಮಡದಿಯಾಗಿ, ಮಗಳಾಗಿ, ಜೀವನಕ್ಕೆ ಉತ್ತಮ ಮಾರ್ಗದರ್ಶಿಯಾಗಿ ಕುಟುಂಬದ ಆರೋಗ್ಯವನ್ನು ಕಾಯುವ ಮಹಾತಾಯಿ. ಆದರೆ, ವಿಪರ್ಯಾಸವೆಂದರೆ, ಈ ಓಟದ ಜೀವನಶೈಲಿಯಲ್ಲಿ ಆಕೆಗೆ ತನ್ನ ಆರೋಗ್ಯದ ಬಗ್ಗೆಯೇ ಕಾಳಜಿವಹಿಸಲು ಸಮಯವಿರುವುದಿಲ್ಲ. 

ಅದರಲ್ಲೂ ವಿಶೇಷವಾಗಿ, 30ವರ್ಷ ದಾಟಿದ ಮಹಿಳೆಯರಲ್ಲಿ ದೇಹದ ಜೀವಕೋಶಗಳ ರಚನೆಯು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ದೀರ್ಘಾವಧಿಯಲ್ಲಿ ಇದು ಸ್ನಾಯುಗಳು, ಯಕೃತ್ತು, ಮೂತ್ರಪಿಂಡಗಳು ಸೇರಿದಂತೆ ದೇಹದ ಪ್ರಮುಖ ಅಂಗಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಮಾತ್ರವಲ್ಲ, ಪುರುಷರಿಗೆ ಹೊಲಿಸಿದರೆ ಮಹಿಳೆಯರ ಮೂಳೆಗಳು ಬಹಳ ಬೇಗ ದುರ್ಬಲಗೊಳ್ಳುತ್ತವೆ. 

ನಾವು ಆರೋಗ್ಯ ಕೆಟ್ಟ ಬಳಿಕ ಔಷಧಿಗಳ ಮೊರೆ ಹೋಗುವ ಬದಲಿಗೆ ನಿತ್ಯ ಜೀವನದಲ್ಲಿ ಕೆಲವು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯರು ಪ್ರತಿ ದಿನ ಈ ಮೂರು ಬಗೆಯ ಜ್ಯೂಸ್‌ಗಳಲ್ಲಿ ಯಾವುದಾದರೊಂದು ಜ್ಯೂಸ್ ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Vitamin C Deficiency: ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಈ 2 ಹಣ್ಣುಗಳು ಸಾಕು

ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ ಈ ಮೂರು ರೀತಿಯ ಆರೋಗ್ಯಕರ ಜ್ಯೂಸ್‌ಗಳು: 
ಮಹಿಳೆಯರು ತಮ್ಮ ಸೌಂದರ್ಯದ ಬಗ್ಗೆ ಎಷ್ಟೇ ಕಾಳಜಿ ವಹಿಸಿದರು ಮದುವೆ ಬಳಿಕ ಅದರಲ್ಲೂ ಮಕ್ಕಳಾದ ಬಳಿಕ ಅವರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವುದು ತುಂಬಾ ಅಗತ್ಯವಾಗಿದೆ. ಮಹಿಳೆ ಆರೋಗ್ಯವಾಗಿದ್ದಾಗ ಮಾತ್ರ ಆಕೆಯ ಮನೆ ಸುತ್ತಮುತ್ತಲ ಪರಿಸರವೂ ಉತ್ತಮವಾಗಿರುತ್ತದೆ. ಇದಕ್ಕಾಗಿ, ಮಹಿಳೆಯರು ತಮ್ಮ ನಿತ್ಯದ ಡಯಟ್ನಲ್ಲಿ ಉತ್ತಮ ಆಹಾರದ ಜೊತೆ ಜೊತೆಗೆ ಕೆಲವು ಆರೋಗ್ಯಕರ ಪಾನೀಯಗಳನ್ನು ಕೂಡ ಸೇವಿಸಬೇಕು. ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯರು ಪ್ರತಿ ದಿನ ಈ ಮೂರು ಪಾನೀಯಗಳಲ್ಲಿ ಯಾವುದೇ ಒಂದನ್ನು ಸೇವಿಸಿದರೂ ಕೂಡ ಅವರ ಆರೋಗ್ಯ ಸುಧಾರಿಸುತ್ತದೆ. ಅಂತಹ ಪಾನೀಯಗಳು ಯಾವುವೆಂದರೆ... 

ಎಳನೀರು: 
ನೈಸರ್ಗಿಕ ಪಾನೀಯವಾದ ಎಳನೀರು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಆದರೆ, ದುಬಾರಿ ಬೆಲೆಯಿಂದಾಗಿ ಪ್ರತಿನಿತ್ಯ ಇದನ್ನು ನಿಮಗೆ ಕೊಳ್ಳಲು ಸಾಧ್ಯವಾಗದೇ ಇರಬಹುದು. ಆದಾಗ್ಯೂ, ಮಹಿಳೆಯರು ವಾರದಲ್ಲಿ ಒಮ್ಮೆಯಾದರೂ ಎಳನೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ದೇಹವನ್ನು ಹೈಡ್ರೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ರಕ್ತದೊತ್ತಡದಂತಹ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿ ಎಂದು ಸಾಬೀತುಪಡಿಸಲಿದೆ. 

ಇದನ್ನೂ ಓದಿ- ಎಚ್ಚರಿಕೆ..! ವೇಗವಾಗಿ ಆಹಾರ ತಿನ್ನುತ್ತೀರಾ..? ಗಂಭೀರ ಆರೋಗ್ಯ ಸಮಸ್ಯೆ ಬರುತ್ತೆ

ಮಿಕ್ಸ್ ಫ್ರೂಟ್ಸ್ ಜ್ಯೂಸ್: 
ಆರೋಗ್ಯ ತಜ್ಞರ ಪ್ರಕಾರ, ಯಾರೇ ಆದರೂ ಕೂಡ ಋತುಮಾನದ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಣ್ಣುಗಳಲ್ಲಿ ಹಲವು ವಿಧದ ವಿಟಮಿನ್ ಗಳು ಮತ್ತು ಮಿನರಲ್ ಗಳು ಕಂಡುಬರುವುದರಿಂದ ಅವು ದೇಹಕ್ಕೆ ಮಾತ್ರವಲ್ಲ ಮೆದುಳಿಯ ಆರೋಗ್ಯಕ್ಕೂ ಉತ್ತಮವಾಗಿರಲಿದೆ. ಅದರಲ್ಲೂ ಮಹಿಳೆಯರು ಸಾಧ್ಯವಾದಷ್ಟು ಮಿಕ್ಸ್ ಫ್ರೂಟ್ಸ್ ಸೇವಿಸುವುದರಿಂದ ಹೃದಯದ ಕಾಯಿಲೆಗಳಿಂದ ದೂರ ಉಳಿಯಬಹುದು. ಮಾತ್ರವಲ್ಲ, ಇದು ಕಣ್ಣುಗಳು, ಕೂದಲಿನ ಆರೋಗ್ಯ ಹಾಗೂ ಚರ್ಮದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಎಂದು ಸಾಬೀತು ಪಡಿಸಲಿದೆ. 

ತರಕಾರಿ ಜ್ಯೂಸ್: 
ಯಾರಿಗೆ ಆದರೂ ಆರೋಗ್ಯ ಚೆನ್ನಾಗಿರಬೇಕು ಎಂದರೆ ಪ್ರತಿ ನಿತ್ಯ ತರಕಾರಿಗಳನ್ನು ಸೇವಿಸುವುದು ತುಂಬಾ ಅಗತ್ಯ. ಆರೋಗ್ಯ ತಜ್ಞರ ಪ್ರಕಾರ, ನಿಮ್ಮ ಮನೆಯಲ್ಲಿರುವ ತರಕಾರಿಗಳನ್ನು ಬಳಸಿ ಅದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಮಹಿಳೆಯರಿಗೆ ಉತ್ತಮ ಪ್ರಮಾಣದ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಮ್, ಸತು ಮತ್ತು ಕ್ಯಾರೊನೈಡ್ಗಳಂತಹ ಪೋಷಕಾಂಶಗಳು ಲಭಿಸುತ್ತವೆ. ಇದು ನಿಮ್ಮನ್ನು ರಕ್ತಹೀನತೆ, ಹೈ ಬಿಪಿ, ಚರ್ಮದ ಸಮಸ್ಯೆಗಳಿಂದ ದೂರ ಉಳಿಯಲು ಸಹಾಯಕವಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News