Cricket News in Kannada: ಟೀಂ ಇಂಡಿಯಾ 1997 ರಲ್ಲಿ ಸಚಿನ್ ತೆಂಡೂಲ್ಕರ್ ಅವರ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿತು. ಈ ಪ್ರವಾಸದಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ಬಾರ್ಬಡೋಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ 38 ರನ್ ಗಳ ಸೋಲನ್ನು ಎದುರಿಸಬೇಕಾಯಿತು. ಈ ಫಲಿತಾಂಶದಿಂದಾಗಿ ಟೀಂ ಇಂಡಿಯಾ ಅಂತಿಮವಾಗಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 0-1 ಅಂತರದಲ್ಲಿ ಕಳೆದುಕೊಂಡಿತು. ಬಾರ್ಬಡೋಸ್ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತ 120 ರನ್ ಗಳನ್ನು ಬೆನ್ನಟ್ಟಬೇಕಿತ್ತು.
ಇದನ್ನೂ ಓದಿ: ದ್ವಿಶತಕ ವೀರ Ishan Kishan ಪ್ರೇಯಸಿ ಮಿಸ್ ಇಂಡಿಯಾ ಫೈನಲಿಸ್ಟ್! ಬಾಲಿವುಡ್ ಬ್ಯೂಟಿಯನ್ನೇ ಮೀರಿಸುವ ಈ ಸುಂದರಿ ಯಾರು?
1997ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಈ ಪ್ರವಾಸದ ವೇಳೆ ಸಚಿನ್ ತೆಂಡೂಲ್ಕರ್ ಸೌರವ್ ಗಂಗೂಲಿಗೆ ತಮ್ಮ ವೃತ್ತಿಜೀವನವನ್ನು ಅಂತ್ಯಗೊಳಿಸುವುದಾಗಿ ಬೆದರಿಕೆ ಹಾಕಿದ್ದರಂತೆ.
ತೆಂಡೂಲ್ಕರ್ ಪಂದ್ಯವನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದರು ಮತ್ತು ವಿಜಯದ ನಂತರದ ಪಾರ್ಟಿಗಾಗಿ ಷಾಂಪೇನ್ ಅನ್ನು ಸಿದ್ಧಪಡಿಸುವಂತೆ ರೆಸ್ಟೋರೆಂಟ್ ಮಾಲೀಕರಿಗೆ ಸೂಚಿಸಿದ್ದರು. ಆದರೆ ಟೀಮ್ ಇಂಡಿಯಾ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 81 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಪಂದ್ಯದಲ್ಲಿ ಭಾರತ 38 ರನ್‌ಗಳಿಂದ ಸೋತಿತ್ತು.
ಸೋಲಿನ ನಂತರ ಸಚಿನ್ ತೆಂಡೂಲ್ಕರ್ ತುಂಬಾ ಕೋಪಗೊಂಡಿದ್ದರು. ಇದಾದ ನಂತರ ಸೌರವ್ ಗಂಗೂಲಿ ಅವರು ಸಚಿನ್ ತೆಂಡೂಲ್ಕರ್ ಅವರ ಕೋಪವನ್ನು ಶಮನಗೊಳಿಸಲು ಅವರ ಕೋಣೆಗೆ ತೆರಳಿದರು. ಮರುದಿನ ಬೆಳಗಿನ ತನ್ನೊಂದಿಗೆ ಬರುವಂತೆ ಸಚಿನ್ ಗಂಗೂಲಿಗೆ ಹೇಳಿದ್ದರು, ಆದರೆ ಗಂಗೂಲಿ ಅದಕ್ಕೆ ಬಂದಿರಲಿಲ್ಲ. ಸೌರವ್ ಗಂಗೂಲಿಯ ಈ ವರ್ತನೆಯನ್ನು ಸಚಿನ್ ತೆಂಡೂಲ್ಕರ್ ಇಷ್ಟಪಡಲಿಲ್ಲ, ಇದೇ ಕಾರಣದಿಂದ ಅವರು ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದರಂತೆ.
ಇದನ್ನೂ ಓದಿ: Team India Playing 11 ರೆಡಿ: ಈ ಸ್ಫೋಟಕ ಬ್ಯಾಟ್ಸ್’ಮನ್ ಕಂ ವಿಕೆಟ್ ಕೀಪರ್ ತಂಡದಿಂದ ಔಟ್!
ಸಚಿನ್ ತೆಂಡೂಲ್ಕರ್ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು, ಆದರೆ ನಾಯಕನಾಗಿ ಅವರ ದಾಖಲೆಯು ಹೆಚ್ಚು ಪ್ರಭಾವಶಾಲಿಯಾಗಿರಲಿಲ್ಲ. ಸಚಿನ್ ತೆಂಡೂಲ್ಕರ್ 1996 ರಿಂದ 2000 ರವರೆಗೆ ಟೀಮ್ ಇಂಡಿಯಾದ ನಾಯಕರಾಗಿದ್ದರು. ಸಚಿನ್ ತೆಂಡೂಲ್ಕರ್ ಅವರು 98 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು, ಅದರಲ್ಲಿ ಟೀಂ ಇಂಡಿಯಾ 27 ಪಂದ್ಯಗಳನ್ನು ಗೆದ್ದು 52 ಪಂದ್ಯಗಳಲ್ಲಿ ಸೋತಿದೆ. ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಭಾರತ 73 ಏಕದಿನ ಪಂದ್ಯಗಳ ಪೈಕಿ 23 ಪಂದ್ಯಗಳನ್ನು ಗೆದ್ದಿತ್ತು. ಟೆಸ್ಟ್’ನ 25 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಮಾತ್ರ ಗೆದ್ದಿದೆ. 2000ನೇ ಇಸವಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಸಚಿನ್ ಟೀಂ ಇಂಡಿಯಾ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಇದಾದ ಬಳಿಕ ಆಯ್ಕೆ ಸಮಿತಿ ಗಂಗೂಲಿ ಅವರನ್ನು ನೂತನ ನಾಯಕರನ್ನಾಗಿ ನೇಮಿಸಿತ್ತು. ಸೌರವ್ ಗಂಗೂಲಿ ಅವರು 49 ಟೆಸ್ಟ್ ಮತ್ತು 147 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ