ನವದೆಹಲಿ: ಲೋಕಸಭಾ ಚುನಾವಣೆಗಾಗಿ ದೆಹಲಿಯ ಆರು ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಸೋಮವಾರ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಈಶಾನ್ಯ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಪೂರ್ವ ದೆಹಲಿಯಿಂದ ಅರ್ವಿಂದರ್ ಸಿಂಗ್ ಲವ್ಲಿ, ದೆಹಲಿ ಲೋಕಸಭಾ ಕ್ಷೇತ್ರದಿಂದ ಅಜಯ್ ಮಾಕೆನ್, ಚಾಂದಿನಿ ಚೌಕ್ ಕ್ಷೇತ್ರದಿಂದ ಜೆ.ಪಿ ಅಗರ್ವಾಲ್, ವಾಯವ್ಯ ದೆಹಲಿ (ಎಸ್ಸಿ) ಕ್ಷೇತ್ರದಿಂದ ರಾಜೇಶ್ ಲಿಲೋಥಿಯಾ ಮತ್ತು ಪಶ್ಚಿಮ ದೆಹಲಿಯಿಂದ ಮಹಾಬಲ್ ಮಿಶ್ರಾ ಸ್ಪರ್ಧಿಸಲಿದ್ದಾರೆ.
Congress releases list of candidates for 6 out of 7 Parliamentary constituencies in Delhi. Former Delhi CM Sheila Dikshit to contest from North East Delhi. #LokSabhaElections2019 pic.twitter.com/p62NehK1Vu
— ANI (@ANI) April 22, 2019
ಕಾಂಗ್ರೆಸ್ ಪಕ್ಷವು ದೆಹಲಿ ಮತ್ತು ಈಶಾನ್ಯ ದೆಹಲಿ ಕ್ಷೇತ್ರವನ್ನು ಎಎಪಿ ಬಿಟ್ಟುಕೊಡಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದೀಗ ಕಾಂಗ್ರೆಸ್ ಈ ಕ್ಷೇತ್ರಗಳಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ದೆಹಲಿಯಲ್ಲಿ ಏಕಾಂಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದೆ.