/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

Rana Naved Ul Hasan Controversial Statement: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ರಾಣಾ ನಾವೇದ್-ಉಲ್-ಹಸನ್ ಭಾರತದ ವಿರುದ್ಧ ಹೇಳಿಕೆ ನೀಡುವ ಮೂಲಕ ಭಾರೀ ಚರ್ಚೆಗೆ ಸಿಲುಕಿದ್ದಾರೆ. ಏಕದಿನ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ತಂಡವನ್ನು ಭಾರತೀಯ ಮುಸ್ಲಿಮರು ಬೆಂಬಲಿಸುತ್ತಾರೆ ಎಂದು ರಾಣಾ ನಾವೇದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾವೇದ್ ಪಾಡ್‌ ಕ್ಯಾಸ್ಟ್‌ ನಲ್ಲಿ ಈ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: 22ರ ಹರೆಯದ ಈ ಕ್ರಿಕೆಟಿಗನಿಗೆ ಮರುಜೀವ ಕೊಟ್ಟ BCCI: ಕೊಹ್ಲಿ ಗೆಳೆಯನಿಗೆ Team Indiaದಲ್ಲಿ ಸಿಕ್ಕೇಬಿಡ್ತು ಸ್ಥಾನ!

45ರ ಹರೆಯದ ನಾವೇದ್ ಪಾಕಿಸ್ತಾನ ಪರ 9 ಟೆಸ್ಟ್, 74 ODI ಮತ್ತು 4 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಪಾಡ್‌ ಕ್ಯಾಸ್ಟ್‌ ನಲ್ಲಿ ಮಾತನಾಡಿದ ನಾವೇದ್, “ಭಾರತವು ತನ್ನದೇ ದೇಶದಲ್ಲಿ ಆಡುತ್ತಿದ್ದರೆ ಅದು ನೆಚ್ಚಿನದಾಗಿರುತ್ತದೆ. ಪಾಕಿಸ್ತಾನ ತಂಡವೂ ಕಡಿಮೆ ಇಲ್ಲ. ಆದರೆ ವಿಶ್ವಕಪ್‌ ನಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತದ ಮುಸ್ಲಿಮರು ಹೆಚ್ಚಿನ ಬೆಂಬಲವನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಅನೇಕ ಮುಸ್ಲಿಮರಿದ್ದಾರೆ” ಎಂದು ಹೇಳಿದ್ದಾರೆ.

ರಾಣಾ ನವೇದ್ ಉಲ್ ಹಸನ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ನವೇದ್ ಉಲ್ ಹಸನ್ ಪಾಕಿಸ್ತಾನದ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ಸೇರಿದಂತೆ ಒಟ್ಟು 132 ವಿಕೆಟ್‌ ಗಳನ್ನು ಕಬಳಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವು ODI ಸ್ವರೂಪದಲ್ಲಿ ಸೇರಿವೆ.

ಭಾರತದ ವಿರುದ್ಧ ದಾಖಲೆ ಹೇಗಿದೆ?

ರಾಣಾ ನವೇದ್ ಉಲ್ ಹಸನ್ ಭಾರತದ ವಿರುದ್ಧ ಒಟ್ಟು 16 ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾವೇದ್ 16 ODIಗಳಲ್ಲಿ 23.69 ಸರಾಸರಿಯಲ್ಲಿ ಒಟ್ಟು 16 ವಿಕೆಟ್‌ ಗಳನ್ನು ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ, ಭಾರತದ ವಿರುದ್ಧ ಕೇವಲ ಎರಡು ವಿಕೆಟ್‌ ಗಳನ್ನು ಪಡೆಯಲು ಸಾಧ್ಯವಾಗಿದೆ.

2010ರಲ್ಲಿ ಪಾಕಿಸ್ತಾನ ಪರ ಕೊನೆಯ ಬಾರಿಗೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದ ನಾವೇದ್ ಅಂದಿನಿಂದ ತಂಡದಲ್ಲಿ ಸ್ಥಾನ ಸಿಗದೇ ನಿವೃತ್ತಿ ಘೋಷಿಸಿದ್ದರು.

ಇನ್ನು ರಾಣಾ ನವೇದ್ ಉಲ್ ಹಸನ್ ಭಾರತದಲ್ಲಿ ನಿಷೇಧಿತ ಇಂಡಿಯನ್ ಕ್ರಿಕೆಟ್ ಲೀಗ್‌ ನಲ್ಲಿ ಆಡಿದ್ದಾರೆ. ತನ್ನ ಪಾಡ್‌ಕ್ಯಾಸ್ಟ್‌ ನಲ್ಲಿ ICL ಬಗ್ಗೆ ಮಾತನಾಡಿದ ಹಸನ್, “ICL ನಲ್ಲಿ ಆಡಲು ಹೋದಾಗ, ಪಾಕಿಸ್ತಾನಿ ಆಟಗಾರರಿಗೆ ಭಾರತೀಯ ಮುಸ್ಲಿಮರಿಂದ ಸಾಕಷ್ಟು ಬೆಂಬಲವಿತ್ತು” ಎಂದು ಹೇಳಿದರು.

ಇದನ್ನೂ ಓದಿ: ಚೊಚ್ಚಲ ಟೆಸ್ಟ್ ಶತಕದ ಬೆನ್ನಲ್ಲೇ ಹೊಸ ಮನೆ ಖರೀದಿಸಿದ ಜೈಸ್ವಾಲ್: ಹೇಗಿದೆ ನೋಡಿ ‘ಕನಸಿನ ಅರಮನೆ’

ಬಿಸಿಸಿಐ ಐಸಿಎಲ್ ಲೀಗ್‌ ನಲ್ಲಿ ಆಡುವ ಆಟಗಾರರನ್ನು ನಿಷೇಧಿಸಿತ್ತು. ಐಸಿಎಲ್ ಅನ್ನು ನಿಷೇಧಿಸಿದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಯಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Cricket News: Pakistan Cricketer Rana Naved Ul Hasan Controversial Statement on Indian Muslims
News Source: 
Home Title: 

“ವಿಶ್ವಕಪ್ ಪಂದ್ಯದಲ್ಲಿ ಭಾರತದ ಮುಸ್ಲಿಮರು ನಮ್ಮನ್ನು ಬೆಂಬಲಿಸುತ್ತಾರೆ”: ಪಾಕ್ ಆಟಗಾರ

“ವಿಶ್ವಕಪ್ ಪಂದ್ಯದಲ್ಲಿ ಭಾರತದ ಮುಸ್ಲಿಮರು ನಮ್ಮನ್ನು ಬೆಂಬಲಿಸುತ್ತಾರೆ”: ಪಾಕ್ ಆಟಗಾರನ ವಿವಾದಾತ್ಮಕ ಹೇಳಿಕೆ
Caption: 
Rana Naved Ul Hasan
Yes
Is Blog?: 
No
Tags: 
Facebook Instant Article: 
Yes
Highlights: 
  • ನಾವೇದ್-ಉಲ್-ಹಸನ್ ಭಾರತದ ವಿರುದ್ಧ ಹೇಳಿಕೆ ನೀಡಿದ್ದಾರೆ
  • “ವಿಶ್ವಕಪ್‌ ನಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತದ ಮುಸ್ಲಿಮರು ಹೆಚ್ಚಿನ ಬೆಂಬಲವನ್ನು ನೀಡುತ್ತಾರೆ”
  • ನಾವೇದ್ ಪಾಡ್‌ ಕ್ಯಾಸ್ಟ್‌ ನಲ್ಲಿ ಈ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ
Mobile Title: 
“ವಿಶ್ವಕಪ್ ಪಂದ್ಯದಲ್ಲಿ ಭಾರತದ ಮುಸ್ಲಿಮರು ನಮ್ಮನ್ನು ಬೆಂಬಲಿಸುತ್ತಾರೆ”: ಪಾಕ್ ಆಟಗಾರ
Bhavishya Shetty
Publish Later: 
No
Publish At: 
Sunday, July 16, 2023 - 08:41
Created By: 
Bhavishya Shetty
Updated By: 
Bhavishya Shetty
Published By: 
Bhavishya Shetty
Request Count: 
1
Is Breaking News: 
No
Word Count: 
291