ಉತ್ತರ ಪ್ರದೇಶ: ಚಲಿಸುತ್ತಿದ್ದ ಕಾರಿನಲ್ಲಿಯೇ ಮಹಿಳೆ ಮೇಲೆ ಗ್ಯಾಂಗ್ ರೇಪ್

ಉತ್ತರ ಪ್ರದೇಶದ ಲಕ್ನೋ ಶಾಹಿದ್ ಪಥ್ ಪ್ರದೇಶದಲ್ಲಿ ಚಲಿಸುವ ಕಾರಿನಲ್ಲಿ ಮಹಿಳೆಯೊಬ್ಬರ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ನಡೆದಿದೆ.ಇದಾದ ನಂತರ ಆಕೆಯನ್ನು ತೆಲಿಬಾಗ್ ರಸ್ತೆಯಲ್ಲಿ ಬಿಡಲಾಗಿದೆ ಎಂದು ತಿಳಿದುಬಂದಿದೆ.

Last Updated : Apr 13, 2019, 01:26 PM IST
ಉತ್ತರ ಪ್ರದೇಶ: ಚಲಿಸುತ್ತಿದ್ದ ಕಾರಿನಲ್ಲಿಯೇ ಮಹಿಳೆ ಮೇಲೆ ಗ್ಯಾಂಗ್ ರೇಪ್  title=
ಸಾಂದರ್ಭಿಕ ಚಿತ್ರ

ನವದೆಹಲಿ: ಉತ್ತರ ಪ್ರದೇಶದ ಲಕ್ನೋ ಶಾಹಿದ್ ಪಥ್ ಪ್ರದೇಶದಲ್ಲಿ ಚಲಿಸುವ ಕಾರಿನಲ್ಲಿ ಮಹಿಳೆಯೊಬ್ಬರ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ನಡೆದಿದೆ.ಇದಾದ ನಂತರ ಆಕೆಯನ್ನು ತೆಲಿಬಾಗ್ ರಸ್ತೆಯಲ್ಲಿ ಬಿಡಲಾಗಿದೆ ಎಂದು ತಿಳಿದುಬಂದಿದೆ.

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆಯನ್ನು ನಿವೃತ್ತ ಪೋಲಿಸ್ ಪೇದೆಯ ಮಗಳು ಎಂದು ತಿಳಿದುಬಂದಿದೆ.ಈಗ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಾಬ್ಲೋ, ಕಾಶಿರಾಮ್, ಜೆಪಿ ಗುಪ್ತಾ ಮತ್ತು ಹರೀಶ್ ಎಂದು ಆ ಸಂತ್ರಸ್ಥ ಮಹಿಳೆ ಗುರುತಿಸಿದ್ದಾರೆ.ಆಕೆಯನ್ನು ಈ ಅತ್ಯಾಚಾರಿಗಳು ಸುಮಾರು ಒಂದು ಗಂಟೆಗಳ ಕಾಲ ಚಲಿಸುತ್ತಿದ್ದ ಕಾರಿನಲ್ಲಿಯೇ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. 

ಈ ಸಂತ್ರಸ್ತೆಯ ತಂದೆ ಪೋಲಿಸ್ ಇಲಾಖೆಯಿಂದ 2013 ರಲ್ಲಿ ನಿವೃತ್ತರಾಗಿದ್ದಾರೆ.ಆಕೆ ಹೇಳುವಂತೆ ಬಾಬ್ಲೋ ಮತ್ತು ಕಾಶಿರಾಂ ಅವರು ಉದ್ಯೋಗದ ಭರವಸೆ ನೀಡಿ 50 ಸಾವಿರ ರೂ ಆ ಮಹಿಳೆಯಿಂದ ತೆಗೆದುಕೊಂಡಿದ್ದರು ಎನ್ನಲಾಗಿದೆ.ಯಾವಾಗ ಆಕೆಗೆ ಉದ್ಯೋಗ ಸಿಗಲಿಲ್ಲವೋ ಆಗ ಆಕೆ ಹಣ ವಾಪಾಸ್ ನೀಡಲು ಆಗ್ರಹಿಸಿದ್ದಾಳೆ ಎನ್ನಲಾಗಿದೆ.ಹಣ ಹಿಂದಿರುಗಿಸುವ ಭರವಸೆಯ ಹಿನ್ನಲೆಯಲ್ಲಿ ಅವರು ವಿಭೂತಿ ಖಂಡ ಹತ್ತಿರ ಬರುವಂತೆ ಆಕೆಗೆ  ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಆ ಮಹಿಳೆ ಗುರುವಾರ ಸಂಜೆಯ ಮುಂಚಿತವಾಗಿ ನಿರ್ಧರಿಸಿದ್ದ ಸ್ಥಳದಲ್ಲಿ ಆಗಮಿಸಿದಾಗ ಆಕೆಯನ್ನು ಕಾರಿನ ಒಳಗೆ ತಳ್ಳಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.
 

Trending News