ಕೊಂಪೆಯಾಗಿದ್ದ ಹಾಳು ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶ..!

High-Tech Library: ಸುಣ್ಣ ಬಣ್ಣ ಇಲ್ದೆ ಹಾಳು ಕೊಂಪೆಯಾಗಿದ್ದ ಜಾಗಕ್ಕೆ ಹೊಸ ರೂಪವನ್ನ ಇಲ್ಲಿನ ಗ್ರಾ.ಪಂ ಸದಸ್ಯರು & ಪಿಡಿಓ ನೀಡಿದ್ದಾರೆ. ಗ್ರಾಮದಲ್ಲಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಗ್ರಂಥಾಲಯದಲ್ಲಿ ಗ್ರಂಥ ಬಂಡಾರವೇ ಇದೆ. ಈ ಲೈಬ್ರರಿಯಲ್ಲಿ ಸಾರ್ವಜನಿಕರಿಗೆ & ಮಕ್ಕಳಿಗಾಗಿ ವಿಶೇಷ ವಿಭಾಗ ತಗೆಯಲಾಗಿದೆ. ಇನ್ನು ಮಕ್ಕಳು ಕೇರಂ ಚೆಸ್ ಸೇರಿದಂತೆ ವಿವಿಧ ಆಟಗಳನ್ನ ಕಲಿಯಲು ಮತ್ತು ಓದಲು ಅವಕಾಶ ಕಲ್ಪಿಸಲಾಗಿದೆ. 

Written by - Yashaswini V | Last Updated : Jul 4, 2023, 01:56 PM IST
  • ಸರ್ಕಾರದ ಕೆಲಸ ದೇವರ ಕೆಲಸ ಅಂತಾ ಭಾವಿಸಿದ್ರೆ ಇಂತಹ ಅಭಿವೃದ್ಧಿ ಸಾಧ್ಯ...!
  • ಗ್ರಾ.ಪಂ ಸದಸ್ಯರ ಸಹಾಯದಿಂದ ಪಿಡಿಒ ಡಿಜಿಟಲ್ ಲೈಬ್ರರಿ ನಿರ್ಮಾಣ...
  • ಡಿಜಿಟಲ್ ಲೈಬ್ರರಿ ಯಿಂದ ಗ್ರಾಮದಲ್ಲಿ ಅನಕ್ಷರಸ್ಥ ಸಂಖ್ಯೆ ಕಡಿಮೆ
ಕೊಂಪೆಯಾಗಿದ್ದ ಹಾಳು ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶ..! title=
High-Tech Library

High-Tech Library: ಕರ್ತವ್ಯದಲ್ಲಿ ಬದ್ಧತೆ ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಳ್ಳೆಯ ಕೆಲಸ ಮಾಡಬೇಕೆಂಬ ತುಡಿತದಿಂದ ಇಲ್ಲಿನ ಗ್ರಾ.ಪಂ ಪಿಡಿಒ & ಗ್ರಾ.ಪಂ ಸದಸ್ಯರು ಸೇರಿ ಅದ್ಬುತ ಹೈಟೆಕ್ ಡಿಜಿಟಲ್ ಲೈಬ್ರರಿ ನಿರ್ಮಿಸಿದ್ದಾರೆ. ಈ ಹೈಟೆಕ್ ಲೈಬ್ರರಿ ಈಗ ಇಡೀ ಜಿಲ್ಲೆಗೆ ಮಾದರಿ ಗ್ರಂಥಾಲಯವಾಗಿದೆ. ಅಷ್ಟಕ್ಕೂ ಅದು ಎಲ್ಲಿ ಯಾವ ಊರು ಅಂತೀರಾ ಈ ಸ್ಟೋರಿ ಓದಿ...  

ಕೊಂಪೆಯಾಗಿದ್ದ ಹಾಳು ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶ..!
ಹೌದು, ಹೀಗೆ ಸುಂದರವಾಗಿ ಅದ್ಬುತ್ ಬಣ್ಣಗಳಿಂದ ಅಲಂಕಾರಗೊಂಡ ಲೈಬ್ರರಿ. ಮತ್ತೊಂದೆಡೆ ಗ್ರಂಥಾಲಯ ಗೋಡೆಗಳ ಮೇಲೆ ರಾಷ್ಟ್ರಕವಿಗಳ ಚಿತ್ರ. ಇನ್ನೊಂದೆಡೆ ಲೈಬ್ರರಿಯಲ್ಲಿ ಶಾಂತವಾಗಿ ತಮಗೆ ಬೇಕಾದ ಬುಕ್ಸ್ ಓದುತ್ತಿರುವ ಊರಿನ ಹಿರಿಯರು ಮತ್ತು ಯುವಕರು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ದೇವಗಿರಿ ಗ್ರಾಮಪಂಚಾಯತಿಯ ಸುಸಜ್ಜೀತ ಡಿಜಿಟಲ್ ಗ್ರಂಥಾಲಯದಲ್ಲಿ. 

ಇದನ್ನೂ ಓದಿ- ವಿದೇಶದಲ್ಲಿ ಶಿಕ್ಷಣಕ್ಕೆ ಹಣ ಬೇಕೇ? ಇಲ್ಲಿದೆ ನೋಡಿ ಸ್ಕಾಲರ್‌ಶಿಪ್‌ಗಳ ಪಟ್ಟಿ

ಹೌದು, ಸುಣ್ಣ ಬಣ್ಣ ಇಲ್ದೆ ಹಾಳು ಕೊಂಪೆಯಾಗಿದ್ದ ಜಾಗಕ್ಕೆ ಹೊಸ ರೂಪವನ್ನ ಇಲ್ಲಿನ ಗ್ರಾ.ಪಂ ಸದಸ್ಯರು & ಪಿಡಿಓ ನೀಡಿದ್ದಾರೆ. ಗ್ರಾಮದಲ್ಲಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಗ್ರಂಥಾಲಯದಲ್ಲಿ ಗ್ರಂಥ ಬಂಡಾರವೇ ಇದೆ. ಈ ಲೈಬ್ರರಿಯಲ್ಲಿ ಸಾರ್ವಜನಿಕರಿಗೆ ಮತ್ತು ಮಕ್ಕಳಿಗಾಗಿ ವಿಶೇಷ ವಿಭಾಗ ತಗೆಯಲಾಗಿದೆ. ಇನ್ನು ಮಕ್ಕಳು ಕೇರಂ ಚೆಸ್ ಸೇರಿದಂತೆ ವಿವಿಧ ಆಟಗಳನ್ನ ಕಲಿಯಲು & ಓದಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಓದುಗರಿಗಾಗಿ ಈ ಗ್ರಂಥಾಲಯದಲ್ಲಿ 3500 ಕ್ಕೂ ಅಧಿಕ ಪುಸ್ತಕಗಳಿದ್ದು ಗ್ರಾಮಸ್ಥರ ಮತ್ತು ವಿದ್ಯಾರ್ಥಿಗಳ ಓದಿನ ಹಸಿವು ನೀಗಿಸುತ್ತಿವೆ. ಇನ್ನು ಈ ಗ್ರಂಥಾಲಯಕ್ಕೆ ಗ್ರಾಮದ ಹೊರವಲಯದಲ್ಲಿರುವ ಇಂಜನೀಯರಿಂಗ್ ಮತ್ತು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಸಹ ಲೈಬ್ರರಿಗೆ ಆಗಮಿಸುತ್ತಾರೆ. ಈಗಾಗಲ್ಲೇ ಈ ಹೈಟೆಕ್ ಲೈಬ್ರರಿಯಲ್ಲಿ 1850 ಜನರು ತಮ್ಮ ಹೆಸರು ನೋಂದಾಯಿಸಿದ್ದಾರೆ. 

ಇದನ್ನೂ ಓದಿ- Top 10 Jobs: ಮುಂದಿನ ಐದು ವರ್ಷಗಳಲ್ಲಿ ಅತಿ ಹೆಚ್ಚು ಮತ್ತು ವೇಗವಾಗಿ ವೇತನವನ್ನು ಹೆಚ್ಚಿಸುವ ನೌಕರಿಗಳ ಪಟ್ಟಿ ಇಲ್ಲಿದೆ

ಇನ್ನು, ಈ ಗ್ರಂಥಾಲಯಕ್ಕೆ ಬಂದು ಊರಿನ ಜನರು ಓದುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದರಿಸುವ ಸ್ಟೂಡೆಂಟ್ಸ್ ಗಳು ಇಲ್ಲಿ ಬರುತ್ತಾರೆ. ಇನ್ನು ಮಕ್ಕಳ ವಿಭಾಗ ಸೇರಿದಂತೆ ಗ್ರಂಥಾಲಯದ ಪ್ರತಿಯೊಂದು ಗೋಡೆಗಳಲ್ಲಿ ಓದಿನ ಮಹತ್ವ ಸಾರುವ ಚಿತ್ರಗಳು ಗಮನ ಸೆಳೆಯುತ್ತವೆ. ಮಕ್ಕಳ ವಿಭಾಗದಲ್ಲಿ ಗಣೇಶ, ಸರಸ್ವತಿ ಮತ್ತು ಪರಮೇಶ್ವರ ದೇವರ  ಚಿತ್ರ ಓದುತ್ತಿರುವ ಮಕ್ಕಳ ರೂಪದಲ್ಲಿ ಚಿತ್ರಿಸಲಾಗಿದೆ. ಗ್ರಂಥಾಲಯಕ್ಕೆ ಹೊಂದಿಕೊಂಡಂತೆ ಕಂಪ್ಯೂಟರ್ ವಿಭಾಗವಿದ್ದು ಇಲ್ಲಿ ಅಂತರ್ಜಾಲದಲ್ಲಿ ಪುಸ್ತಕಗಳನ್ನ ಓದುವ ವ್ಯವಸ್ಥೆ ಮಾಡಲಾಗಿದೆ. 6 ಕಂಪ್ಯೂಟರ್ ಮತ್ತು 1 ಲ್ಯಾಪಟಾಪ್ ಓದುಗರಿಗೆ ಸದಾ ತೆರೆದಿರುತ್ತೆ. ಈ ಗ್ರಂಥಾಲಯ ಗ್ರಾಮಸ್ಥರಿಗೆ ಅಷ್ಟೇ ಅಲ್ಲದೆ, ಹೊರ ವಲಯದ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ. ಇನ್ನು ಇಲ್ಲಿ ನಮಗೆ ಯಾವ ಪುಸ್ತಕ ಬೇಕಾದರೆ ಸಿಗುತ್ತೆ. ನಾವೂ ಹೊಲದ ಕೆಲ ಮಾಡಿ ಬಂದು ಪ್ರಚಲಿತ ಬೆಳೆವಣೆಗೆ ಬಗ್ಗೆ ತಿಳಿಯಲು ಪೇಪರ್ ಓದಲು ಬರುತ್ತೇವೆ. ಈ ಗ್ರಂಥಾಲಯ ನಮಗೆ ತುಂಬಾ ಅನೂಕುಲವಾಗಿದೆ ಎಂದು ಗ್ರಂಥಾಲಯದ ಬಗ್ಗೆ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ. 

ಒಟ್ಟಿನಲ್ಲಿ ಹಳ್ಳಿ ಜನರಿಗೆ ತಂತ್ರಜ್ಞಾನ ಸುಸಜ್ಜಿತ ಗ್ರಂಥಾಲಯ ಮರಿಚಿಕೆಯಾಗಿದ್ದ ಈ ಗ್ರಾಮಕ್ಕೆ ಪಿಡಿಒ ಸುನೀತ ಗರಡಿ ಹೊಸ ಜ್ಞಾನದ ದಾರಿ ತೋರಿದ್ದಾರೆ. ಹಳ್ಳಿ ಜನರು ಓದಿನ ಜೊತೆಗೆ ಜಗತ್ತಿನ ಕನ್ನಡಿ ನೋಡಲು ಈ ಡಿಜಿಟಲ್ ಲೈಬ್ರರಿ ಈಗ ಗ್ರಾಮಸ್ಥರಿಗೆ ಸಹಾಯವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News