Mahindra Best Selling Car: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ SUV

ಮಹೀಂದ್ರಾ vs ಟಾಟಾ: ಮಹೀಂದ್ರಾದಿಂದ ಒಂದು SUV ಟಾಟಾ ಮೋಟಾರ್ಸ್‍ಗೆ ಸಖತ್ ಪೈಪೋಟಿ ನೀಡುತ್ತಿದೆ. ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಯನ್ನು ಬಿಟ್ಟು ಮಹೀಂದ್ರಾ ಕಾರು ಮಾರಾಟದ ವಿಷಯದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

Written by - Puttaraj K Alur | Last Updated : Jul 3, 2023, 08:59 PM IST
  • ಮಹೀಂದ್ರಾದ ಒಂದು SUV ಟಾಟಾ ಮೋಟಾರ್ಸ್‍ಗೆ ಸಖತ್ ಪೈಪೋಟಿ ನೀಡುತ್ತಿದೆ
  • ಮಾರಾಟದ ವಿಷಯದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದ ಮಹೀಂದ್ರಾದ ಕಾರು
  • ಮಹೀಂದ್ರಾ XUV700 SUV ಕೇವಲ 20 ತಿಂಗಳಲ್ಲಿ 1 ಲಕ್ಷ ಯುನಿಟ್‌ಗಳ ಮಾರಾಟ
Mahindra Best Selling Car: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ SUV title=
ಮಹೀಂದ್ರಾ XUV700 SUV

ನವದೆಹಲಿ: ಟಾಟಾ ಮೋಟಾರ್ಸ್ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಹೀಂದ್ರಾದೊಂದಿಗೆ ಅತ್ಯಂತ ಕಠಿಣ ಸ್ಪರ್ಧೆಯನ್ನು ಹೊಂದಿದೆ. ಸಬ್‌ಕಾಂಪ್ಯಾಕ್ಟ್ SUV ವಿಭಾಗದಿಂದ ಹಿಡಿದು ದೊಡ್ಡ SUV ವಿಭಾಗವರೆಗೂ ಎರಡೂ ಕಂಪನಿಗಳು ವ್ಯಾಪಕ ಶ್ರೇಣಿಯ ಮಾದರಿಗಳನ್ನು ಮಾರಾಟ ಮಾಡುತ್ತಿವೆ. ಮಹೀಂದ್ರಾದ ಒಂದು SUV ಟಾಟಾ ಮೋಟಾರ್ಸ್‍ಅನ್ನು ಹಿಂದಿಕ್ಕುತ್ತಿದೆ. ಮಹೀಂದ್ರಾದ XUV700 ಮಧ್ಯಮ ಗಾತ್ರದ SUV ವಿಭಾಗದಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಯನ್ನು ಬಿಟ್ಟು ಮಹೀಂದ್ರಾ ಕಾರು ಮಾರಾಟದ ವಿಷಯದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಕಂಪನಿಯ XUV700 SUV ಕೇವಲ 20 ತಿಂಗಳಲ್ಲಿ 1 ಲಕ್ಷ ಯುನಿಟ್‌ಗಳು ಬುಕ್ಕಿಂಗ್ ಆಗಿದೆ ಎಂದು ಮಹೀಂದ್ರಾ ಅಂಡ್‍ ಮಹೀಂದ್ರಾ ಘೋಷಿಸಿದೆ. ಇದು ಕಡಿಮೆ ಸಮಯದಲ್ಲಿ 1 ಲಕ್ಷ ಯುನಿಟ್ ಮಾರಾಟ ಕಂಡ ಮಹೀಂದ್ರಾದ ಎಸ್‌ಯುವಿಯಾಗಿದೆ. ಕಂಪನಿಯ ಈ ಕಾರು ಬಿಡುಗಡೆಯಾದಾಗಿನಿಂದ ಜನರಿಗೆ ಬಹಳಷ್ಟು ಇಷ್ಟವಾಗಿದೆ. ಬಿಡುಗಡೆಯಾದ 12 ತಿಂಗಳೊಳಗೆ 50,000 ಯೂನಿಟ್‌ಗಳ ಮಾರಾಟದ ಅಂಕಿಅಂಶವನ್ನು ದಾಖಲಿಸಿದೆ. XUV 500ನ ಅಪ್‌ಗ್ರೇಡ್ ಮಾಡೆಲ್ ಆಗಿ ಮಹೀಂದ್ರಾ ಇದನ್ನು ಆಗಸ್ಟ್ 2021ರಲ್ಲಿ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಪಿಎಂ ನರೇಂದ್ರ ಮೋದಿ ಭೇಟಿ ಬಗೆಗೆ ಬೋಯಿಂಗ್ ಅಧ್ಯಕ್ಷ, ಸಿ‌ಇಓ ಡೇವಿಡ್ ಕಲ್ಹೌನ್ ಹೇಳಿದ್ದೇನು?

ಬೆಲೆ ಮತ್ತು ಇಂಜಿನ್‌: ಮಹೀಂದ್ರಾ XUV 700 ಬೆಲೆಯು 14.01 ಲಕ್ಷ ರೂ.ದಿಂದ ಪ್ರಾರಂಭವಾಗಿ 26.18 ಲಕ್ಷ ರೂ.ವರೆಗೂ (ಎಕ್ಸ್ ಶೋ ರೂಂ ದೆಹಲಿ) ಇದೆ. ಇದು MX ಮತ್ತು AX ಎಂಬ 2 ಮುಖ್ಯ ರೂಪಾಂತರಗಳಲ್ಲಿ ಬರುತ್ತದೆ. AX ಅನ್ನು AX3, AX5 ಮತ್ತು AX7 ಎಂದು 3 ಟ್ರಿಮ್‌ಗಳಾಗಿ ವಿಂಗಡಿಸಲಾಗಿದೆ. ಈ SUV 5 ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. ಇದರಲ್ಲಿ 2 ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (200PS/380Nm ವರೆಗೆ) ಮತ್ತು 2.2-ಲೀಟರ್ ಡೀಸೆಲ್ ಎಂಜಿನ್ (185PS/450Nm ವರೆಗೆ). ಎರಡನ್ನೂ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಪ್ರಮುಖ ವೈಶಿಷ್ಟ್ಯಗಳು: ಈ SUV 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 6-ವೇ ಚಾಲಿತ ಡ್ರೈವರ್ ಸೀಟ್ ಮತ್ತು 12 ಸ್ಪೀಕರ್‌ಗಳೊಂದಿಗೆ ಸಜ್ಜುಗೊಂಡಿದೆ. ಇದು ಪನೋರಮಿಕ್ ಸನ್‌ರೂಫ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಬಿಲ್ಟ್-ಇನ್ ಅಲೆಕ್ಸಾ ಕನೆಕ್ಟಿವಿಟಿಯನ್ನು ಸಹ ಹೊಂದಿದೆ.

ಇದನ್ನೂ ಓದಿ: Harley Davidson ಬೈಕ್ ಖರೀದಿಸುವ ನಿಮ್ಮ ಕನಸು ಶೀಘ್ರದಲ್ಲೇ ನನಸಾಗಲಿದೆ, ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಈ ಅಗ್ಗದ ಬೈಕ್!

ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ISOFIX ಆಂಕರ್‌ಗಳು ಲಭ್ಯವಿದೆ. ಉನ್ನತ ರೂಪಾಂತರವು ಅಡ್ವಾನ್ಸ್ಡ್ ಡ್ರೈವರ್-ಅಸಿಸ್ಟೆಂಟ್ ಸಿಸ್ಟಮ್ (ADAS) ನೊಂದಿಗೆ ಬರುತ್ತದೆ. ಇದು ತುರ್ತು ಬ್ರೇಕಿಂಗ್, ಲೇನ್-ಕೀಪಿಂಗ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ. ಇದು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News