ಕಾಂಗ್ರೆಸ್ ತೆಕ್ಕೆಗೆ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ

 ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯಸಭಾ ಸಂಸದ ಕೆ.ಬಿ.ಶಾಣಪ್ಪ ಇಂದು ಕಾಂಗ್ರೆಸ್ ಗೆ ಸೇರಿದ್ದಾರೆ.

Last Updated : Apr 1, 2019, 06:12 PM IST
 ಕಾಂಗ್ರೆಸ್ ತೆಕ್ಕೆಗೆ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ  title=
Photo courtesy: Facebook

ಬೆಂಗಳೂರು:  ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯಸಭಾ ಸಂಸದ ಕೆ.ಬಿ.ಶಾಣಪ್ಪ ಇಂದು ಕಾಂಗ್ರೆಸ್ ಗೆ ಸೇರಿದ್ದಾರೆ.

ಕಾಂಗ್ರೆಸ್ ನ ಲೋಕಸಭಾ ನಾಯಕ ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ಇಂದುಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಶ್ರೀ ಕೆ.ಬಿ.ಶಾಣಪ್ಪ ಅವರನ್ನು ಒಳಗೊಂಡಂತೆ ಅನೇಕ ಮುಖಂಡರು ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷ ಸೇರ್ಪಡೆಯಾದರು. 

ಕೆ.ಬಿ.ಶಾಣಪ್ಪ ಅವರು ಕಾಂಗ್ರೆಸ್  ಪಕ್ಷಕ್ಕೆ ಸೇರಿರುವುದಕ್ಕೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಖರ್ಗೆ "ಸಂವಿಧಾನ ಉಳಿಸಲು ಕೆ.ಬಿ.ಶಾಣಪ್ಪನವರು ಕಾಂಗ್ರೆಸ್ ಸೇರಿರುವುದಾಗಿ ಹೇಳಿದ್ದಾರೆ. ಸುಮಾರು 60 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದು ಶಾಸಕ, ಸಚಿವ, ರಾಜ್ಯ ಸಭಾ ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಮಾನ್ಯರು ಬಿಜೆಪಿ ತೊರೆದು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸಲು ನಮ್ಮ ಹೋರಾಟದಲ್ಲಿ ಭಾಗಿಯಾಗಿ, ಹೋರಾಟಕ್ಕೆ ಮತ್ತಷ್ಟು ಶಕ್ತಿ ನೀಡಿದ್ದಾರೆ." ಎಂದು ಬರೆದುಕೊಂಡಿದ್ದಾರೆ.

ಬಿಜೆಪಿಯಿಂದ 2006 ರಿಂದ 2012 ರವರೆಗೆ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.ತದನಂತರ 2012 ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
 

Trending News