Curd Side Effects: ಈ ಸಮಸ್ಯೆಯಿದ್ದರೆ ಮೊಸರನ್ನು ತಪ್ಪಿಯೂ ತಿನ್ನಬೇಡಿ, ಆರೋಗ್ಯ ಹಾಳಾಗೋದು ಪಕ್ಕಾ!

Curd Side Effects: ಮೊಸರು ಸೇವನೆಯು ಕೆಲವು ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಹಾನಿಕಾರಕವಾಗಿದೆ. ಯಾವ ಸಮಸ್ಯೆಗಳನ್ನು ಹೊಂದಿರುವವರು ಮೊಸರು ಸೇವಿಸಬಾರದು ಎಂದು ತಿಳಿದಿರುವುದು ಬಹಳ ಮುಖ್ಯ.   

Written by - Chetana Devarmani | Last Updated : Jun 24, 2023, 05:07 PM IST
  • ಮೊಸರು ಸೇವನೆ ಕೆಲವರಿಗೆ ಹಾನಿಕಾರಕವಾಗಿದೆ
  • ಈ ಸಮಸ್ಯೆಗಳಿದ್ದರೆ ಮೊಸರು ತಿನ್ನಬಾರದು
  • ಆರೋಗ್ಯ ಹಾಳಾಗೋದು ಪಕ್ಕಾ!
Curd Side Effects: ಈ ಸಮಸ್ಯೆಯಿದ್ದರೆ ಮೊಸರನ್ನು ತಪ್ಪಿಯೂ ತಿನ್ನಬೇಡಿ, ಆರೋಗ್ಯ ಹಾಳಾಗೋದು ಪಕ್ಕಾ! title=
Curd

Curd Side Effects: ಮೊಸರಿನ ಸೇವನೆಯು ನಮ್ಮ ಹೊಟ್ಟೆ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಮೊಸರು ಸೇವನೆಯು ಕೆಲವು ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಹಾನಿಕಾರಕವಾಗಿದೆ. ಯಾವ ಸಮಸ್ಯೆಗಳನ್ನು ಹೊಂದಿರುವವರು ಮೊಸರು ಸೇವಿಸಬಾರದು ಎಂದು ತಿಳಿದಿರುವುದು ಬಹಳ ಮುಖ್ಯ. ಇಲ್ಲದಿದ್ದರೆ ಅನಾರೋಗ್ಯಕ್ಕೆ ಒಳಗಾಗಬಹುದು.

ಈ ಸಮಸ್ಯೆಗಳಿದ್ದರೆ ಮೊಸರು ತಿನ್ನಬಾರದು 

ಮೊಸರು ಸೇವನೆ ನಮ್ಮ ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು ಎನ್ನುತ್ತಾರೆ ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ. ಇದು ನಮ್ಮ ಹೊಟ್ಟೆಗೆ ಪ್ರಯೋಜನಕಾರಿ, ನಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಇದರೊಂದಿಗೆ ಮೂಳೆಗಳನ್ನು ಬಲಪಡಿಸಲು ಮತ್ತು ಬಿಪಿಯನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ. ಆದರೆ ಕೆಳಗಿನ ಸಮಸ್ಯೆಗಳು ಇದ್ದಲ್ಲಿ, ಮೊಸರು ಸೇವನೆಯನ್ನು ತಪ್ಪಿಸಬೇಕು.

ಇದನ್ನೂ ಓದಿ: ಪ್ರೆಶರ್ ಕುಕ್ಕರ್‌ಲ್ಲಿ ಬೇಯಿಸಿದ ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ

ಲ್ಯಾಕ್ಟೋಸ್ ಅಲರ್ಜಿ - ಹಾಲು, ಮೊಸರು ಮುಂತಾದ ಡೈರಿ ಉತ್ಪನ್ನಗಳು ಲ್ಯಾಕ್ಟೋಸ್ ಅನ್ನು ಹೊಂದಿರುತ್ತವೆ. ಲ್ಯಾಕ್ಟೋಸ್ ಅಲರ್ಜಿ ಇರುವವರು ಇದನ್ನು ಸೇವಿಸಬಾರದು. ಈ ಸಮಸ್ಯೆಯಿಂದ ಬಳಲುತ್ತಿರುವವರು ಮೊಸರನ್ನು ಸೇವಿಸಲೇಬಾರದು. ಇಲ್ಲದಿದ್ದರೆ, ನೀವು ಹೊಟ್ಟೆ ನೋವು ಮತ್ತು ಅತಿಸಾರದ ಲಕ್ಷಣಗಳನ್ನು ಎದುರಿಸಬೇಕಾಗುತ್ತದೆ.

ಸಂಧಿವಾತ ನೋವು : ಮೊಸರು ಸೇವನೆಯು ಮೂಳೆಗಳು ಮತ್ತು ಹಲ್ಲುಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಸಂಧಿವಾತದಿಂದ ಉಂಟಾಗುವ ಕೀಲು ನೋವನ್ನು ಹೊಂದಿರುವವರು ಪ್ರತಿನಿತ್ಯ ಮೊಸರು ಸೇವನೆಯನ್ನು ಮಾಡಬಾರದು. ಅದಕ್ಕಾಗಿಯೇ ಕೀಲು ನೋವಿದ್ದಲ್ಲಿ ಮೊಸರನ್ನು ಪ್ರತಿದಿನ ಸೇವಿಸಬಾರದು. ಇಲ್ಲದಿದ್ದರೆ, ನೀವು ತೀವ್ರವಾದ ನೋವನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: Guava Leaf: ಈ 4 ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಪೇರಲ ಎಲೆ.. ಹೀಗೆ ಸೇವಿಸಿ

ಅಸ್ತಮಾ ರೋಗಿಗಳು : ಅಸ್ತಮಾ ರೋಗಿಗಳು ಕೂಡ ಮೊಸರನ್ನು ಹೆಚ್ಚು ಸೇವಿಸಬಾರದು ಮತ್ತು ರಾತ್ರಿಯಲ್ಲಿ ಅದರಿಂದ ದೂರವಿರಬೇಕು ಎಂದು ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿ ಹೇಳುತ್ತಾರೆ. ಏಕೆಂದರೆ ಮೊಸರು ಕಫ ಹೆಚ್ಚುತ್ತದೆ. ಇದರಿಂದಾಗಿ ಕಫ ದಪ್ಪವಾಗಬಹುದು ಮತ್ತು ಉಸಿರಾಟದಲ್ಲಿ ತೊಂದರೆ ಉಂಟುಮಾಡಬಹುದು.

ಅಸಿಡಿಟಿ ಸಮಸ್ಯೆ : ಅಸಿಡಿಟಿ ಸಮಸ್ಯೆ ಇರುವವರು ರಾತ್ರಿ ಮೊಸರು ಸೇವಿಸುವುದನ್ನು ತಪ್ಪಿಸಿ. ಏಕೆಂದರೆ ರಾತ್ರಿಯಲ್ಲಿ ಮೊಸರು ಸೇವನೆಯು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ಅಸಿಡಿಟಿ ಮತ್ತು ಎದೆಯುರಿ ಉಂಟಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News