ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಿಆರ್ಪಿಎಫ್ ಪೋಸ್ಟ್ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದ ಪರಿಣಾಮವಾಗಿ ಓರ್ವ ಸಿಆರ್ಪಿಎಫ್ ಸೈನಿಕನು ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಪೋಸ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶಾಖೆಯ ಬಳಿ ಇದ್ದು.ಈ ಪ್ರದೇಶವನ್ನು ಈಗ ಬಂದ್ ಮಾಡಲಾಗಿದೆ ಉಗ್ರರಿಗಾಗಿ ಹುಡುಕಾಟದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಅಚ್ಚರಿ ಎಂದರೆ ರಂಬನ್ ಜಿಲ್ಲೆಯ ಬನಿಹಾಲನಲ್ಲಿ ಕಾರವೊಂದರಲ್ಲಿ ಸಿಲಿಂಡರ್ ಸ್ಫೋಟದ ಬಗ್ಗೆ ವರದಿಯಾದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಬನಿಹಾಲ್ ಸಮೀಪದ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಸ್ಯಾಂಟ್ರೊ ಕಾರಿನಲ್ಲಿ ಈ ನಿಗೂಢ ಸ್ಫೋಟ ಸಂಭವಿಸಿತ್ತು.
#UPDATE: One Central Reserve Police Force (CRPF) personnel injured after terrorists lobbed grenade at a CRPF bunker near SBI branch in Pulwama, today. More details awaited. #JammuAndKashmir https://t.co/DxL6HKRrLC
— ANI (@ANI) March 30, 2019
ವರದಿಗಳ ಹೇಳುವಂತೆ ಈ ಸ್ಫೋಟ ಸಂಭವಿಸಿದಾಗ ಸಿಆರ್ಪಿಎಫ್ ಬೆಂಗಾವಲು ವಾಹನಗಳು ಅಲ್ಲಿ ಹಾದು ಹೋಗುತ್ತಿದ್ದವು ಎನ್ನಲಾಗಿದೆ. ಸ್ಫೋಟದ ನಂತರ ಕಾರಿನ ಚಾಲಕ ಆ ಜಾಗದಿಂದ ಪರಾರಿಯಾಗಿದ್ದಾನೆ.ಈಗ ಅವನಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಫೆಬ್ರುವರಿ 14 ರಂದು ಉಗ್ರರ ದಾಳಿಯಿಂದ ಸುಮಾರು 40 ಸೈನಿಕರು ಮೃತಪಟ್ಟಿದ್ದರು.ಈ ದಾಳಿಯ ಹೊಣೆಯನ್ನು ಪಾಕ್ ಮೂಲದ ಉಗ್ರ ಸಂಘಟನೆ ಜೈಶ್ ಈ ಮೊಹಮ್ಮದ್ ಹೊತ್ತಿತ್ತು. ಭಾರತ ಈ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಬಾಲಾಕೊಟ್ ಮೇಲೆ ವಾಯುದಾಳಿ ನಡೆಸಿತ್ತು.