Indiaʼs Richest Comedian : ಹಾಸ್ಯನಟರು ಮನರಂಜನಾ ಉದ್ಯಮದಲ್ಲಿ ನಾಐಕ ನಟರಂತೆ ಹೆಚ್ಚು ಸಂಭಾವನೆ ಪಡೆಯುವುದಿಲ್ಲ ಮತ್ತು ಅವರ ಆದಾಯ ಕೂಡ ಕಡಿಮೆ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ ಕೆಲವು ಭಾರತೀಯ ಹಾಸ್ಯನಟರು ಈ ಕಲ್ಪನೆಯನ್ನು ಸುಳ್ಳು ಮಾಡಿದ್ದಾರೆ.
Indiaʼs Richest Comedian : ಭಾರತದ ಶ್ರೀಮಂತ ಹಾಸ್ಯನಟ ಎಂಬ ಬಿರುದು ಕಪಿಲ್ ಶರ್ಮಾ, ಜಾನಿ ಲಿವರ್, ಪರೇಶ್ ರಾವಲ್ ಅಥವಾ ರಾಜ್ಪಾಲ್ ಯಾದವ್ ಅವರಂತಹ ಮುಖ್ಯವಾಹಿನಿಯ ಹೆಸರುಗಳಿಗೆ ಬದಲಾಗಿ ಈ ನಟನ ಮುಡಿಗೇರಿದೆ. ಸರಿಸುಮಾರು 490 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಈ ಹಾಸ್ಯ ನಟನ ಪ್ರತಿ ತಿಂಗಳ ಆದಾಯ 2 ಕೋಟಿ ರೂಪಾಯಿ ಎನ್ನಲಾಗಿದೆ. ದಕ್ಷಿಣ ಭಾರತೀಯ ಚಿತ್ರರಂಗದ ಹಾಸ್ಯನಟ ಇದೀಗ ಭಾರತದ ಅತಿ ಶ್ರೀಮಂತ ಕಾಮಿಡಿಯನ್ ಆಗಿದ್ದಾರೆ.
ಬ್ರಹ್ಮಾನಂದಂ ತೆರೆಮೇಲೆ ಬಂದರೆ.. ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿವಂತಿರುತ್ತದೆ. ಹೀರೋಗಳಷ್ಟೇ ಕ್ರೇಜ್ ಹೊಂದಿದ್ದಾರೆ ತೆಲುಗು ಹಾಸ್ಯನಟ ಬ್ರಹ್ಮಾನಂದಂ.
ಬ್ರಹ್ಮಾನಂದಂ ಪ್ರಸಿದ್ಧ ತೆಲುಗು ಹಾಸ್ಯನಟ. ಅತಿ ಹೆಚ್ಚು ಸ್ಕ್ರೀನ್ ಕ್ರೆಡಿಟ್ಗಳಿಗಾಗಿ ಅವರು ಗಿನ್ನೆಸ್ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.
67 ನೇ ವಯಸ್ಸಿಗೆ 1,000 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2009 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪಡೆದರು.
ವರದಿಗಳ ಪ್ರಕಾರ, ಬ್ರಹ್ಮಾನಂದಂ ಅವರ ನಿವ್ವಳ ಆಸ್ತಿ ಸುಮಾರು 490 ಕೋಟಿ ಎಂದು ಅಂದಾಜಿಸಲಾಗಿದೆ. ಮಾಸಿಕ ವೇತನವು 2 ಕೋಟಿ ಮೀರಿದೆ.
ಕಪಿಲ್ ಶರ್ಮಾ ಮತ್ತು ಭಾರ್ತಿ ಸಿಂಗ್ ಅವರಂತಹ ಜನಪ್ರಿಯ ಹೆಸರುಗಳನ್ನು ಹಿಂದಿಕ್ಕಿ ಬ್ರಹ್ಮಾನಂದಂ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾಮಿಕ್ ನಟರಲ್ಲಿ ಒಬ್ಬರೆಂದು ಮನ್ನಣೆ ಪಡೆದಿದ್ದಾರೆ.
ಬ್ರಹ್ಮಾನಂದಂ ಅವರು ಐಷಾರಾಮಿ ಕಾರುಗಳಾದ ಆಡಿ ಆರ್8, ಆಡಿ ಕ್ಯೂ7, ಮರ್ಸಿಡಿಸ್ ಬೆಂಜ್ ಕಾರುಗಳನ್ನು ಹೊಂದಿದ್ದಾರೆ. ಕೋಟಿ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಹೈದರಾಬಾದ್ನ ಪ್ರತಿಷ್ಠಿತ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಬಂಗಲೆಯನ್ನು ಹೊಂದಿದ್ದಾರೆ.