Shani Vakri In Kumbha Creates Trikona Rajayoga: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಮಫಲ ದಾತ, ನ್ಯಾಯದ ದೇವರು ಎಂದು ಪರಿಗಣಿಸಲ್ಪಟ್ಟಿರುವ ಶನಿ ದೇವನು 30 ವರ್ಷಗಳ ನಂತರ, ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ. ಇದೀಗ ಇದೇ ರಾಶಿಯಲ್ಲಿ ಜೂನ್ 17, 2023 ರಿಂದ ಹಿಮ್ಮುಖವಾಗಲಿದ್ದಾನೆ. ಇದರಿಂದಾಗಿ ಶುಭಕರ ತ್ರಿಕೋನ ರಾಜಯೋಗ ನಿರ್ಮಾಣವಾಗಲಿದೆ. ಇದರ ಪರಿಣಾಮ ದ್ವಾದಶ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಐದು ರಾಶಿಯವರ ಜೀವನದಲ್ಲಿ ಇದನ್ನು ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
ಶನಿಯ ವಕ್ರ ನಡೆಯಿಂದ ರೂಪುಗೊಳ್ಳಲಿದೆ ತ್ರಿಕೋನ ರಾಜಯೋಗ: ಈ 5 ರಾಶಿಯವರಿಗೆ ಭಾರೀ ಸಂಪತ್ತು ಪ್ರಾಪ್ತಿ:
ಮೇಷ ರಾಶಿ:
ಶನಿಯ ಹಿಮ್ಮುಖ ಚಲನೆಯಿಂದ ನಿರ್ಮಾಣಗೊಂಡಿರುವ ತ್ರಿಕೋನ ರಾಜಯೋಗವು ಮೇಷ ರಾಶಿಯವರ ಆರ್ಥಿಕ ಸಂಕಷ್ಟಗಳನ್ನು ಬಗೆಹರಿಸಲಿದೆ. ಈ ಸಮಯದಲ್ಲಿ ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಪ್ರಗತಿಯ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ. ವ್ಯಾಪಾರಸ್ಥರಿಗೆ ತುಂಬಾ ಅನುಕೂಲಕರ ಸಮಯ ಇದಾಗಿದೆ.
ವೃಷಭ ರಾಶಿ:
ಶನಿದೇವನ ವಕ್ರ ನಡೆಯು ವೃಷಭ ರಾಶಿಯ ಜನರ ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳನ್ನು ತರಬಹುದು. ಶನಿ ಹಿಮ್ಮುಖ ಚಲನೆಯಿಂದ ರೂಪುಗೊಳ್ಳಲಿರುವ ಕೇಂದ್ರ ತ್ರಿಕೋನ ರಾಜಯೋಗವು ಉದ್ಯೋಗದಲ್ಲಿ ಪ್ರಗತಿಯನ್ನು ನೀಡುವುದರ ಜೊತೆಗೆ ಸಮಾಜದಲ್ಲಿ ಗೌರವವನ್ನೂ, ಮನ್ನಣೆಯನ್ನೂ ನೀಡಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.
ಇದನ್ನೂ ಓದಿ- Shani Vakri: ಜೂನ್ 17ರ ಬಳಿಕ ಶನಿಯ ಹಿಮ್ಮುಖ ಚಲನೆ ಆರಂಭ, ನಿಮ್ಮ ಮೇಲೆ ಏನು ಪರಿಣಾಮ
ಮಿಥುನ ರಾಶಿ:
ಶನಿಯ ಹಿಮ್ಮುಖ ಚಲನೆಯು ಮಿಥುನ ರಾಶಿಯವರಿಗೆ ನಾನಾ ರೀತಿಯ ಲಾಭವನ್ನು ನೀಡುತ್ತದೆ. ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶ ಪ್ರವಾಸಕ್ಕೆ ಹೋಗಬಯಸುವವರಿಗೆ ಸುವರ್ಣಾವಕಾಶ ದೊರೆಯಬಹುದು. ಇದಲ್ಲದೆ, ವಿತ್ತೀಯ ಲಾಭವು ನಿಮ್ಮ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿದೆ.
ಸಿಂಹ ರಾಶಿ:
ಹಿಮ್ಮುಖ ಶನಿಯು ಸಿಂಹ ರಾಶಿಯವರಿಗೆ ಭರ್ಜರಿ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ಹಠಾತ್ ಧನಲಾಭದಿಂದಾಗಿ ನಿಮ್ಮ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ದೀರ್ಘ ಸಮಯದಿಂದ ಮುಂದೂಡುತ್ತಾ ಬಂದಿದ್ದ ಮದುವೆಯಂತಹ ಶುಭ ಕಾರ್ಯಗಳು ಜರುಗಲಿವೆ.
ಇದನ್ನೂ ಓದಿ- 2024ರ ಏಪ್ರಿಲ್ ತಿಂಗಳವರೆಗೂ ಈ ರಾಶಿಯವರಿಗೆ ಭಾರೀ ಸಂಪತ್ತನ್ನು ಕರುಣಿಸಲಿದ್ದಾನೆ ಗುರು
ಮಕರ ರಾಶಿ:
ಮಕರ ರಾಶಿಯ ಅಧಿಪತಿ ರಾಶಿಯೂ ಆಗಿರುವ ಶನಿ ದೇವನ ಹಿಮ್ಮುಖ ಚಲನೆಯು ಈ ರಾಶಿಯವರಿಗೂ ಸಹ ಬಂಪರ್ ಲಾಭವನ್ನು ತರಲಿದೆ. ಈ ಸಮಯದಲ್ಲಿ ಹಣ ಸಂಪಾದನೆಗಾಗಿ ಹೊಸ ಹಾದಿಗಳು ತೆರೆದುಕೊಳ್ಳಲಿದ್ದು ಧನಾವೃಷ್ಟಿ ಆಗಲಿದೆ. ವೃತ್ತಿ ಬದುಕಿನಲ್ಲಿಯೂ ಹಲವು ಸುವರ್ಣಾವಕಾಶಗಳು ದೊರೆಯಲಿದ್ದು ಸುಖ-ಸಂತೋಷದ ಜೀವನವನ್ನು ಅನುಭವಿಸುವಿರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.