Navarasa Nayaka Jaggesh : ಕೋಟಿ ಭುಜಗಳ ಶಕ್ತಿ ಸೂಲಿಬೆಲೆ ಬೆನ್ನಿಗಿದೆ

Chakravarti Sulibele : ಕೋಮುವಾದ ಭಾವನೆಯ ಹೆಸರಲ್ಲಿ ನಾಟಕವಾಡಿದರೆ ಸೂಲಿಬೆಲೆ ಕಂಬಿ ಎಣಿಸಬೇಕಾಗುತ್ತದೆ ಎಂದು ಹೇಳಿಕೆ ನೀಡಿದ ಎಂ. ಬಿ ಪಾಟೀಲ್‌ ಅವರಿಗೆ ಸ್ಯಾಂಡಲ್‌ವುಡ್‌ನ ಹಿರಿಯ ನಟ, ಬಿಜೆಪಿಯ ರಾಜ್ಯಸಭಾ ಸಂಸದ ಜಗ್ಗೇಶ್‌ ಅವರು ಪ್ರತಿಕ್ರಿಯಿಸಿದ್ದಾರೆ. 

Written by - Zee Kannada News Desk | Last Updated : Jun 6, 2023, 09:03 AM IST
  • ಕೋಮುವಾದ ಭಾವನೆಯ ಹೆಸರಲ್ಲಿ ನಾಟಕವಾಡಿದರೆ ಸೂಲಿಬೆಲೆ ಕಂಬಿ ಎಣಿಸಬೇಕಾಗುತ್ತದೆ
  • ಎಂ. ಬಿ ಪಾಟೀಲ್ ಅವರ ಹೇಳಿಕೆ ಕುರಿತು ಪ್ರತಿಕ್ರಿಸಿದ ಜಗ್ಗೇಶ್‌
  • ಸಿದ್ದರಾಮಯ್ಯನವರು ಹಿಟ್ಲರ್‌ ವಂಶದ ವಂಶಸ್ಥರು ಎಂದ ಬಿಜೆಪಿ ಬೆಂಬಲಿಗ
Navarasa Nayaka Jaggesh : ಕೋಟಿ ಭುಜಗಳ ಶಕ್ತಿ ಸೂಲಿಬೆಲೆ ಬೆನ್ನಿಗಿದೆ  title=

MB Patil : ಎಂ. ಬಿ ಪಾಟೀಲ್ ಅವರ ಹೇಳಿಕೆ ಕುರಿತು ಪ್ರತಿಕ್ರಿಸಿದ ಜಗ್ಗೇಶ್‌  ಅವರು "ಸೂಲಿಬೆಲಿ ರವರು ಯಾವ ಅಧಿಕಾರದ ಹಿಂದೆ ಹೋಗದೆ ಸಾಂಸ್ಕೃತಿಕ ತತ್ವ ವಿಚಾರ,ಕೆರೆಕಟ್ಟೆ ಪುನರ್ಜೀವನ,ಪ್ರವಚನದಂತ ಸಾತ್ವಿಕ ಚಿಂತಕ ಅವರನ್ನು ಜೈಲಿಗೆ ಹಾಕುವೆ ಎಂದರೆ ಅಲ್ಲಿಗೆ ಗೆದ್ದು ತಿಂಗಳಿಗೆ ಈ ಮಾತು ಸನ್ಮಾನ್ಯ MBಪಾಟೀಲ್ ಬಾಯಲ್ಲಿ! ಮಾನ್ಯರೆ ಕಾನೂನು ನಿಮ್ಮ ಜೇಬಲ್ಲಿ ಇದೆಯ?ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಅವರ ಬೆನ್ನಿಗೆ!" ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ-Actress Parul Yadav: ʼಪ್ಯಾರ್‌ಗೆ ಆಗ್ಬಿಟ್ಟೈತೆʼ ಪಾರುಲ್ ಯಾದವ್ ಸಿನಿಮಾ ರಂಗದಿಂದ ದೂರ ಆದ್ರಾ...

ಭಾನುವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಎಂ. ಬಿ ಪಾಟೀಲ್‌ ಅವರು "ಈ ಹಿಂದೆ ನಾಲ್ಕು ವರ್ಷ ಸೂಲಿಬೆಲೆ ಏನು ಅನಾಹುತ ಮಾಡಿದ್ದಾರೆ ಅಂತ ಹೇಳಿ. ಸೂಲಿಬೆಲೆ ಮಾಡಿದ ಅನಾಹುತಗಳನ್ನು ನಾವು ಸರಿಪಡಿಸುತ್ತೇವೆ. ಪಠ್ಯಪುಸ್ತಕ, ಹಿಜಾಬ್‌, ಹಲಾಲ್‌, ಆಜಾನ್‌ ಅಂತೇಳಿ ಬಹಳ ನಾಟಕ ಮಾಡಿದ್ದಾರೆ. ಇನ್ಮುಂದೆ ಈ ರರೀತಿಯ ನಾಟಕ ಮಾಡಿದ್ರೆ ಸೂಲಿಬೆಲೆಗೆ ಜೈವಾಸ ಗ್ಯಾರಂಟಿ" ಎಂದು ಹೇಳಿಕೆ ನೀಡಿದ್ದರು. 

ಎಂ. ಬಿ. ಪಾಟೀಲ್‌ ಅವರು ಚಕ್ರವರ್ತಿ ಸೂಲಿಬೆಲೆ ಅವರ ಜೊತೆಗೆ ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ಸೂಲಿಬೆಲೆ ಕೂಡ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, "ಸಿದ್ದರಾಮಯ್ಯನವರ ಸರ್ಕಾರ ರಾಷ್ಟ್ರೀಯತೆಯ ಬಗ್ಗೆ ಮಾತನಾಡುವವರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯನವರು ಹಿಟ್ಲರ್‌ ವಂಶದ ವಂಶಸ್ಥರು" ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ-Rakul Preet Singh: ಮಾಲ್ಡೀವ್ಸ್ ನಲ್ಲಿ ಕೆಂಪು ಬಿಕಿನಿ ತೊಟ್ಟು ರಾಕುಲ್ ಪ್ರೀತ್ ಸಿಂಗ್ ಹಾಟ್ ಟ್ರೀಟ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News