ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಇಂದು (ಜೂನ್ 5) ಅದ್ದೂರಿಯಾಗಿ 9:30 ರಿಂದ 10:30 ವರೆಗೆ ನಡೆದ ಮಹೂರ್ತದಲ್ಲಿ ಅಭಿಷೇಕ್ ಮತ್ತು ಅವಿವಾ ಹಸೆಮಣೆ ಏರಿದ್ದಾರೆ.
ಅರಮನೆ ಮೈದಾನದ ಚಾಮರವಜ್ರದಲ್ಲಿ ಅಭಿಷೇಕ್ ಅಂಬರೀಷ್ ಬಹುಕಾಲದ ಗೆಳತಿ ಅವಿವಾಗೆ ಗೌಡರ ಸಾಂಪ್ರದಾಯದಂತೆ ಮಾಂಗಲ್ಯಧಾರಾಣೆ ಮಾಡಿದ್ದಾರೆ. ಸ್ಯಾಂಡಲ್ವುಡ್ ಮಾತ್ರವಲ್ಲ ಟಾಲಿವುಡ್, ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಿಂದಲೂ ಅನೇಕ ಗಣ್ಯರು ಮದುವೆ ಆಗಮಿಸಿದ್ದರು.
ಇದನ್ನೂ ಓದಿ: Abhishek Aviva Marriage: ಅಭಿಷೇಕ್ ಅಂಬರೀಷ್ ಅವಿವಾ ಅದ್ದೂರಿ ವಿವಾಹ: ಸಿನಿ ತಾರೆಯರ ಸಮಾಗಮ
ಗುರು-ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದಿರುವ ಜೋಡಿಗಳಿಗೆ ರಾಜಕೀಯ, ಸಿನಿಮಾ ಗಣ್ಯರು ಬಂದು ಶುಭ ಹಾರೈಸಿದ್ದಾರೆ. ಜೋಡಿಗಳು ಸಪ್ತಪದಿ ತುಳಿದ ಬಳಿಕ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾಗೆ ಅಶ್ವಿನಿ ನಕ್ಷತ್ರ ತೋರೋ ಶಾಸ್ತ್ರವೂ ಮಾಡಿದ್ದಾರೆ. ಮಾಂಗಲ್ಯಧಾರಾಣೆ ಬಳಿಕ ಅಶ್ವಿನಿ ನಕ್ಷತ್ರ ತೋರೋ ಶಾಸ್ತ್ರವೂ ಪ್ರಮುಖವಾಗಿದೆ.
ಇದನ್ನೂ ಓದಿ: Rudra Garuda Purana: ರಿಷಿ ಅಭಿನಯದ ʼರುದ್ರ ಗರುಡ ಪುರಾಣʼ: ಶೀರ್ಷಿಕೆ ಅನಾವರಣ ನಟ ನೀನಾಸಂ ಸತೀಶ್
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಮದುವೆ ಬಳಿಕ ಪೊಷಕರ ಜೊತೆಗೆ ಒಂದಷ್ಟು ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಆ ಫೋಟೋಗಳಲ್ಲಿ ಪೋಷಕರ ಜೊತೆಯಲ್ಲಿ ನಿಂತು ಪೋಸ್ ಕೊಟ್ಟಿರುವುದು ಸಖತ್ ಆಗಿ ಕಾಣುತ್ತಿದೆ. ಒಂದು ಮದುವೆ ಅಂದರೆ ಅಲ್ಲೊಂದು ಸಂಭ್ರಮ ಸಹಜ. ಹೆಣ್ಣಿನ ತಂದೆ ತಾಯಿಗಳಿಗೆ ಒಂದು ರೀತಿಯ ಸಂತಸದ ನಡುವೆಯು ಅದೊಂದು ಸಂಕಟ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.