Clove Water For Hair Growth: ಲವಂಗವು ಮಸಾಲೆ ಪದಾರ್ಥವಾಗಿದೆ. ಆಹಾರದ ರುಚಿ ಮತ್ತು ವಾಸನೆಯನ್ನು ಹೆಚ್ಚಿಸಲು ಇದನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಇದನ್ನು ತಿನ್ನವುದು ಆರೋಗ್ಯಕ್ಕೆ ಉತ್ತಮ. ಇದರ ಜೊತೆಗೆ ಲವಂಗವು ನಿಮ್ಮ ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇಂದು ನಾವು ಕೂದಲಿನ ಬೆಳವಣಿಗೆಗೆ ಲವಂಗ ನೀರನ್ನು ತಯಾರಿಸುವ ವಿಧಾನವನ್ನು ಹೇಳಲಿದ್ದೇವೆ. ಲವಂಗದಲ್ಲಿ ವಿಟಮಿನ್-ಕೆ ಮತ್ತು ಬೀಟಾ-ಕ್ಯಾರೋಟಿನ್ ಅಂಶಗಳು ಇರುತ್ತವೆ. ಇದು ಕೂದಲಿನ ಬುಡಕ್ಕೆ ಪೋಷಣೆಯನ್ನು ನೀಡಿ ಬೆಳವಣಿಗೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಲವಂಗದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿದ್ದು ತಲೆಹೊಟ್ಟು ಮತ್ತು ತುರಿಕೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ, ಲವಂಗದಲ್ಲಿ ಆ್ಯಂಟಿಆಕ್ಸಿಡೆಂಟ್ ಹೇರಳವಾಗಿದ್ದು, ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುವುದು.
ಇದನ್ನೂ ಓದಿ: ನಿಮ್ಮ ಮಗುವಿಗೆ ಹಲ್ಲುಗಳು ಬರುವುದು ಕೂಡ ಶುಭ-ಅಶುಭ ಸಂಕೇತಗಳನ್ನು ನೀಡುತ್ತವೆ ನಿಮಗೆ ಗೊತ್ತಾ?
ಲವಂಗ ನೀರನ್ನು ತಯಾರಿಸಲು ಬೇಕಾಗುವ ಪದಾರ್ಥಗಳು-
ಲವಂಗ 10-12
ಕರಿಬೇವಿನ ಎಲೆಗಳು 8-10
ನೀರು 2 ಕಪ್
ಲವಂಗ ನೀರನ್ನು ಹೇಗೆ ತಯಾರಿಸುವುದು?
ಲವಂಗ ನೀರನ್ನು ತಯಾರಿಸಲು ಮೊದಲು ಪ್ಯಾನ್ ತೆಗೆದುಕೊಳ್ಳಿ.
ಅದಕ್ಕೆ 2 ಕಪ್ ನೀರು ಹಾಕಿ, ಚೆನ್ನಾಗಿ ಕುದಿಸಿ.
ಈಗ ಕುದಿಯುವ ನೀರಿಗೆ 10-12 ಲವಂಗ ಮತ್ತು 8-10 ಕರಿಬೇವಿನ ಎಲೆಗಳನ್ನು ಹಾಕಿ.
ಈಗ ಈ ನೀರನ್ನು ಮತ್ತಷ್ಟು ಕುದಿಸಿ.
ಬಳಿಕ ಗ್ಯಾಸ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
ತಣ್ಣಗಾದಾಗ ನಂತರ ಮತ್ತೊಂದು ಪಾತ್ರೆಗೆ ಸೋಸಿಕೊಳ್ಳಿ
ಈಗ ನಿಮ್ಮ ಕೂದಲಿನ ಆರೋಗ್ಯ ಕಾಪಾಡುವ ಲವಂಗದ ನೀರು ತಯಾರಾಗಿದೆ.
ಈ ನೀರನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಸುಮಾರು 1 ವಾರದವರೆಗೆ ಬಳಸಬಹುದು.
ಇದನ್ನೂ ಓದಿ: ಈ ಸಾಂಬಾರ ಪದಾರ್ಥಗಳಲ್ಲಡಗಿದೆ ರಕ್ತದಲ್ಲಿನ ಸಕ್ಕರೆ ಹೀರಿಕೊಳ್ಳುವ ಸಾಮರ್ಥ್ಯ!
ಕೂದಲು ಬೆಳವಣಿಗೆಗೆ ಲವಂಗ ನೀರನ್ನು ಹೇಗೆ ಬಳಸುವುದು?
1) ಮೊದಲು ಕೂದಲ್ನ್ನು ಶಾಂಪೂ ಮತ್ತು ಕಂಡಿಷನರ್‌ನಿಂದ ಚೆನ್ನಾಗಿ ತೊಳೆದು ಬಳಿಕ ಲವಂಗ ನೀರನ್ನು ಕೂದಲಿನ ಮೇಲೆ ಹಾಕಿಕೊಳ್ಳಿ. ಸ್ವಲ್ಪ ಸಮಯ ಬಿಡಿ. ನಂತರ ನಿಮ್ಮ ಕೂದಲನ್ನು ಮತ್ತೊಮ್ಮೆ ಶುದ್ಧ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ. ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ನಿಮ್ಮ ಕೂದಲಿನ ಉದ್ದವನ್ನು ಹೆಚ್ಚಿಸುತ್ತದೆ. ನಿಮ್ಮ ಕೂದಲಿಗೆ ಹೊಳಪನ್ನು ನೀಡುತ್ತದೆ.
2) ಲವಂಗದ ನೀರನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ ಮತ್ತು ಮಸಾಜ್ ಮಾಡಿ. 1-2 ಗಂಟೆಗಳ ಕಾಲ ಬಿಡಿ. ಬಳಿಕ ಸೌಮ್ಯವಾದ ಶಾಂಪೂ ಸಹಾಯದಿಂದ ನಿಮ್ಮ ಕೂದಲನ್ನು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ, ನೀವು ವಾರಕ್ಕೊಮ್ಮೆ ಈ ಇದನ್ನು ಬಳಸಬೇಕು.
ಇದನ್ನೂ ಓದಿ: ನಂಬುತ್ತಿರೋ ಬಿಡುತ್ತೀರೋ ಗೊತ್ತಿಲ್ಲ.. ಒಣ ಮೀನು ಮಾತ್ರ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ!
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.