Team Indiaದ ಈ ಇಬ್ಬರು ಆಟಗಾರರಿಗೆ ಭಯಪಡುತ್ತಿದೆಯಂತೆ ಆಸ್ಟ್ರೇಲಿಯಾ! ರಹಸ್ಯ ಬಿಚ್ಚಿಟ್ಟ ಪಾಂಟಿಂಗ್

ICC WTC Final 2023: ಪೂಜಾರ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಟೆಸ್ಟ್ ರನ್ ಮತ್ತು ಶತಕಗಳನ್ನು ಗಳಿಸಿದ್ದಾರೆ. ಇನ್ನು ಪಾಂಟಿಂಗ್ ಪ್ರಕಾರ, ಪೂಜಾರ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ ಪ್ರಮುಖ ಪಾತ್ರ ವಹಿಸಿ ದಾಖಲೆ ನಿರ್ಮಿಸಬಹುದು. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್‌ ಗಳಲ್ಲಿ 2033 ರನ್ ಮತ್ತು ಐದು ಶತಕಗಳನ್ನು ಗಳಿಸಿದ್ದಾರೆ.

Written by - Bhavishya Shetty | Last Updated : Jun 2, 2023, 11:47 AM IST
    • ಪೂಜಾರ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಟೆಸ್ಟ್ ರನ್ ಮತ್ತು ಶತಕಗಳನ್ನು ಗಳಿಸಿದ್ದಾರೆ
    • ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಆಸ್ಟ್ರೇಲಿಯಾವು ಭಯಪಡುತ್ತಿದೆ
    • ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್‌ ಗಳಲ್ಲಿ 2033 ರನ್ ಮತ್ತು ಐದು ಶತಕಗಳನ್ನು ಗಳಿಸಿದ್ದಾರೆ
Team Indiaದ ಈ ಇಬ್ಬರು ಆಟಗಾರರಿಗೆ ಭಯಪಡುತ್ತಿದೆಯಂತೆ ಆಸ್ಟ್ರೇಲಿಯಾ! ರಹಸ್ಯ ಬಿಚ್ಚಿಟ್ಟ ಪಾಂಟಿಂಗ್ title=
Ricky Ponting

ICC WTC Final 2023: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ  ಆಸ್ಟ್ರೇಲಿಯಾವು ಭಯಪಡುತ್ತಿದೆ. ಆಸೀಸ್ ತಂಡವನ್ನು ಸೋಲಿಸಬಹುದಾದ ಸಾಮಾರ್ಥ್ಯ ಈ ಆಟಗಾರರಿಗೆ ಇದೆ ಎಂದು  ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ (ಡಬ್ಲ್ಯುಟಿಸಿ ಫೈನಲ್) ಫೈನಲ್‌ ನಲ್ಲಿ ಭಾರತದ ಭರವಸೆಗೆ ಆಟಗಾರರಾಗಬಹುದು ಎಂದು ರಿಕಿ ಪಾಂಟಿಂಗ್ ನಂಬಿದ್ದಾರೆ.

ಇದನ್ನೂ ಓದಿ: IND vs AUS: ಹರ್ಭಜನ್ ಪ್ರಕಾರ ಟೀಂ ಇಂಡಿಯಾದ ಗೇಮ್ ಚೇಂಜರ್ ಕೊಹ್ಲಿ-ಗಿಲ್ ಅಲ್ಲ… ಈ ಆಟಗಾರನಂತೆ!

ಪೂಜಾರ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಟೆಸ್ಟ್ ರನ್ ಮತ್ತು ಶತಕಗಳನ್ನು ಗಳಿಸಿದ್ದಾರೆ. ಇನ್ನು ಪಾಂಟಿಂಗ್ ಪ್ರಕಾರ, ಪೂಜಾರ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ ಪ್ರಮುಖ ಪಾತ್ರ ವಹಿಸಿ ದಾಖಲೆ ನಿರ್ಮಿಸಬಹುದು. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್‌ ಗಳಲ್ಲಿ 2033 ರನ್ ಮತ್ತು ಐದು ಶತಕಗಳನ್ನು ಗಳಿಸಿದ್ದಾರೆ. ಜೂನ್ 7 ರಿಂದ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಲ್ಲಿ (ಡಬ್ಲ್ಯುಟಿಸಿ ಫೈನಲ್) ಮುಖಾಮುಖಿಯಾದಾಗ ಪೂಜಾರ ಅವರ ಫಾರ್ಮ್ ಭಾರತಕ್ಕೆ ಅತ್ಯುತ್ತಮ ಕೊಡುಗೆಗಳಾಗಲಿವೆ ಎಂದಿದ್ದಾರೆ.

ವಿರಾಟ್ ಕೊಹ್ಲಿಯನ್ನು ಮತ್ತೊನ್ನ ನಿರ್ಣಾಯಕ ಆಟಗಾರ ಎಂದು ಪಾಂಟಿಂಗ್ ಪರಿಗಣಿಸಿದ್ದಾರೆ. ಸದ್ಯ ಕೊಹ್ಲಿ ತಮ್ಮ ಫಾರ್ಮ್‌ ಗೆ ಮರಳಿದ್ದಾರೆ. ಮಾರ್ಚ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ 186 ರನ್ ಗಳಿಸಿದ್ದರು. ಐಸಿಸಿ ರಿವ್ಯೀವ್ ನಲ್ಲಿ ಪಾಂಟಿಂಗ್ ಮಾತನಾಡಿದ್ದು, 'ಆಸ್ಟ್ರೇಲಿಯನ್ ತಂಡವು ವಿರಾಟ್ ಮತ್ತು ಪೂಜಾರ ಬಗ್ಗೆ ಎಚ್ಚರ ವಹಿಸುತ್ತದೆ” ಎಂದು ಹೇಳಿದ್ದಾರೆ.

“ಪೂಜಾರ ಅವರು ಈ ಹಿಂದೆ ಕಂಟಕವಾಗಿದ್ದಂತೆ, ಆಸ್ಟ್ರೇಲಿಯಾದಲ್ಲಿ ಈ ಬಾರಿ ಸಮಸ್ಯೆ ತಂದೊಡ್ಡಲಿದ್ದಾರೆ. ಹೀಗಾಗಿ ಪೂಜಾರ ಅವರನ್ನು ಬೇಗನೇ ಔಟ್ ಮಾಡಬೇಕು ಎಂಬುದು ಆಸೀಸ್ ಗೆ ತಿಳಿದಿದೆ. ಕಳೆದ ಕೆಲವು ವಾರಗಳಲ್ಲಿ ವಿರಾಟ್ ಬಹುಶಃ T20 ಕ್ರಿಕೆಟ್‌ ನಲ್ಲಿ ತಮ್ಮ ಸಂಪೂರ್ಣ ಅತ್ಯುತ್ತಮ ಫಾರ್ಮ್‌ಗೆ ಮರಳಿದ್ದಾರೆ. ಇದು ಆಸ್ಟ್ರೇಲಿಯಾ ತಂಡಕ್ಕೆ ಅಶುಭ ಎಚ್ಚರಿಕೆ” ಎಂದು ಹೇಳಿದರು.

ಇದನ್ನೂ ಓದಿ: ದುರಸ್ತಿ ಕಾಮಗಾರಿ  ಹಿನ್ನೆಲೆ : ಜೂನ್ 4 ರಿಂದ ಜೂನ್ 6 ರವರೆಗೆ ಮಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ 

ರಿಕಿ ಪಾಂಟಿಂಗ್ ಪ್ರಕಾರ ಟೀಂ ಇಂಡಿಯಾ ನಾಯಕ ಇವರಾಗಬೇಕು…

ಓವಲ್‌ ನಲ್ಲಿ ನಡೆಯಲಿರುವ WTC ಫೈನಲ್‌ ನಲ್ಲಿ ಭಾರತವನ್ನು ನಾಯಕ ರೋಹಿತ್ ಶರ್ಮಾ ಮುನ್ನಡೆಸಬೇಕು, ಜೊತೆಗೆ ಏಕೈಕ ಬ್ಯಾಟ್ಸ್‌ಮನ್ ಆಗಿ ಆರಂಭಿಕರಾದರೆ, ಅವರಿಗೆ ಆಟಗಾರ ಶುಭ್ಮನ್ ಗಿಲ್ ಜೊತೆಯಾಗಬೇಕು ಎಂದಿದ್ದಾರೆ. ಗಿಲ್ ಅವರನ್ನು ಇತ್ತೀಚೆಗೆ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಎರಡು ಟೆಸ್ಟ್‌ಗಳಿಗೆ ಆಯ್ಕೆ ಮಾಡಲಾಯಿತು. ಈ ವರ್ಷದ ಆರಂಭದಲ್ಲಿ ಅಹಮದಾಬಾದ್ ಟೆಸ್ಟ್‌ ನಲ್ಲಿ 128 ರನ್ ಗಳಿಸಿ WTC ಫೈನಲ್‌ ನಲ್ಲಿ ಸ್ಥಾನ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News