ಹೊಟ್ಟೆಯ ಬೊಜ್ಜನ್ನು ಕರಗಿಸಲು ಮಾಡಿ ಈ ವ್ಯಾಯಾಮಗಳನ್ನು ..!

Belly Fat : ಹೊಟ್ಟೆಯ ಕೊಬ್ಬು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡುಬರುತ್ತದೆ. ನಾವು ನಮ್ಮ ಆಹಾರದಲ್ಲಿ ತೆಗೆದುಕೊಳ್ಳುವ ಎಣ್ಣೆಯುಕ್ತ ಮತ್ತು ಅನಾರೋಗ್ಯಕರ ಆಹಾರವೇ ಇದಕ್ಕೆ ಕಾರಣ. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಆರೋಗ್ಯಕರ ವ್ಯಾಯಾಮದೊಂದಿಗೆ ದಿನವನ್ನು ಪ್ರಾರಂಭಿಸಿ. 
 

1 /5

ಕ್ರಂಚಸ್ : ಕ್ರಂಚಸ್ ಅತ್ಯಂತ ಜನಪ್ರಿಯ ಕಿಬ್ಬೊಟ್ಟೆಯ ವ್ಯಾಯಾಮಗಳಲ್ಲಿ ಒಂದಾಗಿದೆ. ಇದು ನಿಮ್ಮ ಹೊಟ್ಟೆಯನ್ನು ಚಪ್ಪಟೆಯಾಗಿ ಮತ್ತು ಹೆಚ್ಚು ಟೋನ್ ಆಗಿ ಕಾಣಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡುವವರ ದೇಹದ ತೂಕ ಸಮತೋಲನದಲ್ಲಿರುತ್ತದೆ.   

2 /5

ಬರ್ಪೀಸ್ : ಬರ್ಪೀಸ್ ಮೆಗಾ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ದಿನವಿಡೀ ನಿಮ್ಮ ಚಯಾಪಚಯವನ್ನು ಕ್ರಿಯೆಯನ್ನು ವೇಗಗೊಳಿಸತ್ತದೆ. ಇದು ಫಿಟ್‌ನೆಸ್‌ಗೆ ಕಾರಣವಾದ ಉತ್ತಮ ವ್ಯಾಯಾಮವಾಗಿದೆ   

3 /5

ಮೌಂಟೇನ್ ಕ್ಲೈಂಬರ್ಸ್ : ಮೌಂಟೇನ್ ಕ್ಲೈಂಬರ್ಸ್ ಚುರುಕುತನವನ್ನು ಹೆಚಿಸಲು ಸಹಾಯ ಮಾಡುತ್ತದೆ. ಇದು ದೇಹವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಹೃದಯವನ್ನು ಆರೋಗ್ಯಕರವಾಗಿ ಇರಿಸಬಹುದು.  

4 /5

ಜಂಪಿಂಗ್ ಜ್ಯಾಕ್ಸ್ : ಜಂಪಿಂಗ್ ಜ್ಯಾಕ್ ಒಂದು ಪೂರ್ಣದೇಹದ ವ್ಯಾಯಾಮವಾಗಿದ್ದು ಅದು ಪ್ರಮುಖ ಸ್ನಾಯು ಗುಂಪುಗಳನ್ನು  ಆರೋಗ್ಯಕರವಾಗಿರಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದು ನಮ್ಮ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ.   

5 /5

ಸ್ಕ್ವಾಟ್ ಮತ್ತು ಕಿಕ್ : ಈ ವ್ಯಾಯಾಮವು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವನ್ನು ಬಲಪಡಿಸುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ ಮತ್ತು ಪ್ರಯೋಜನಕಾರಿ ಅಂಗ ವ್ಯಾಯಾಮವಾಗಿದೆ.