Buddha Jayanti Astrology 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿವರ್ಷದ ವೈಶಾಖ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯ ದಿನ ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 5, 2023 ರಂದು ಶುಕ್ರವಾರ ಈ ಹುಣ್ಣಿಮೆಯನ್ನು ಆಧಾರಿಸಲಾಗುತ್ತಿದೆ. ಹಾಗೆ ನೋಡಿದರೆ, ಹುಣ್ಣಿಮೆಯ ದಿನ ಹಾಗೂ ಶುಕ್ರವಾರ ಎರಡೂ ದಿನಗಳು ತಾಯಿ ಲಕ್ಷ್ಮಿಗೆ ಸಮರ್ಪಿತವಾಗಿವೆ. ಇದಲ್ಲದೆ ಹುಣ್ಣಿಮೆಯದಿನದಂದು ಚಂದ್ರ ಗ್ರಹಣ ಕೂಡ ಗೋಚರಿಸಲಿದೆ. ಈ ಗ್ರಹಣ ಬುದ್ಧ ಪೌರ್ಣಿಮೆಯ ದಿನ ರಾತ್ರಿ 8.45ಕ್ಕೆ ಆರಂಭಗೊಳ್ಳಲಿದೆ ಮತ್ತು ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯಗೊಳ್ಳಲಿದೆ. ಈ ದಿನದಂದು ಕೆಲ ಶುಭ ಕಾಕತಾಳೀಯಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ಈ ಮಂಗಳಕರ ಯೋಗಗಳು ಐದು ರಾಶಿಗಳ ಜನರಿಗೆ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿವೆ. ಈ ಐದು ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದಲ್ಲದೆ ವೃತ್ತಿ ಜೀವನದ ವಿಷಯದಲ್ಲಿಯೂ ಕೂಡ ಅತ್ಯಂತ ಮಂಗಳಕರ ಸಾಬೀತಾಗಲಿವೆ. ಸುಮಾರು 130 ವರ್ಷಗಳ ಬಳಿಕ ಇಂತಹ ಅದ್ಭುತ ಕಾಕತಾಳೀಯ ಸಂಭವಿಸಲಿದೆ.
ಮೇಷ ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 14 ರಂದು, ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ ಮತ್ತು ಬುಧನೊಂದಿಗೆ ಆತನ ಮೈತ್ರಿ ನೆರವೇರಿದೆ, ಇದರಿಂದ ಮೇಷ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ, ಇದು ಈ ರಾಶಿಯ ಸ್ಥಳೀಯರಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿದೆ. ಹೀಗಾಗಿ ಬುದ್ಧ ಪೌರ್ಣಿಮೆಯ ದಿನ ಮೇಷ ಜಾತಕದವರಿಗೆ ಹಲವು ಆರ್ಥಿಕ ಪ್ರಯೋಜನಗಳು ಪ್ರಾಪ್ತಿಯಾಗಲಿವೆ. ಉದ್ಯೋಗದಲ್ಲಿ ಬದಲಾವಣೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಪ್ರಮೋಷನ್ ನಿಂದಾಗಿ ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ.
ಮಿಥುನ ರಾಶಿ- ಈ ಬಾರಿಯ ಬುದ್ಧ ಪೂರ್ಣಿಮೆ ಮಿಥುನ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ಯಾವುದಾದರೊಂದು ಅದ್ಭುತ ಸಾಧನೆಯನ್ನು ಮೆರೆಯುವ ಸಾಧ್ಯತೆ ಇದೆ.ಇದಲ್ಲದೆ ಬುದ್ಧ ಪೌರ್ಣಿಮೆಯ ದಿನ ನಿರ್ಮಾಣಗೊಳ್ಳುವ ಕಾಕತಾಳೀಯದಿಂದ ನೀವು ಉದ್ಯೋಗ ವ್ಯವಹಾರಗಳಲ್ಲಿ ಸಾಕಷ್ಟು ಪ್ರಗತಿಯನ್ನು ನೀವು ಕಾಣುವಿರಿ. ಇದರಿಂದ ನಿಮ್ಮ ಆದಾಯ ಹೆಚ್ಚಾಗಲಿದ್ದು, ಎಲ್ಲಾ ಕೆಲಸಗಳಲ್ಲಿ ಸಿಗುವ ಯಶಸ್ಸಿನ ಕಾರಣ ನಿಮಗೆ ಭಾರಿ ಸಂತಸ ಪ್ರಾಪ್ತಿಯಾಗಲಿದೆ.
ಸಿಂಹ ರಾಶಿ- ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧಾದಿತ್ಯ ಯೋಗವು ಈ ಸಿಂಹ ರಾಶಿಯ ಜಾತಕದವರ ಪಾಲಿಗೆ ತುಂಬಾ ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ಸಿಗಲಿವೆ. ಈ ಅವಧಿಯಲ್ಲಿ ಸ್ಥಗಿತಗೊಂಡಿರುವ ಕಾಮಗಾರಿ ಪೂರ್ಣಗೊಳ್ಳಲಿದೆ. ಸೂರ್ಯನ ಸಂಚಾರವು ಈ ರಾಶಿಯ ಸ್ಥಳೀಯರ ಜೀವನದಲ್ಲಿ ಅನೇಕ ಸಂತೋಷಗಳನ್ನು ತರಲಿದೆ. ಇದಲ್ಲದೆ ಬುದ್ಧ ಪೌರ್ಣಿಮೆಯ ದಿನ ನಿರ್ಮಾಣಗೊಳ್ಳುವ ಶುಭ ಕಾಕತಾಳೀಯದಿಂದ ನಿಮಗೆ ಬಡ್ತಿಯ ಅವಕಾಶಗಳು ದೊರೆಯಲಿವೆ. ವೇತನ ಹೆಚ್ಚಳದಿಂದಾಗಿ ನೀವು, ಐಷಾರಾಮಿ ಕೆಲಸ ಕಾರ್ಯಗಳಿಗೆ ಮತ್ತು ಸೌಕರ್ಯ ವೃದ್ಧಿಗೆ ನೀವು ಹೆಚ್ಚಿನ ಹಣವನ್ನು ವಿನಿಯೋಗಿಸುವ ಸಾಧ್ಯತೆ ಇದೆ.
ಕರ್ಕ ರಾಶಿ- ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಬುಧಾದಿತ್ಯ ರಾಜಯೋಗವು ಕರ್ಕ ರಾಶಿಯವರಿಗೆ ಭಾಗ್ಯವನ್ನೇ ಪ್ರಜ್ವಲಿಸಲಿದೆ. ಈ ಸಮಯದಲ್ಲಿ ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಾನೆ. ಬಯಸಿದ ಸ್ಥಳದಲ್ಲಿ ವರ್ಗಾವಣೆ ಲಭ್ಯವಾಗುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯುತ್ತಾನೆ. ಅಷ್ಟೇ ಅಲ್ಲ ಈ ರಾಶಿಯವರಿಗೆ ಅದೃಷ್ಟದ ಭಾರಿ ಬೆಂಬಲ ಕೂಡಿಬರಲಿದೆ.
ಮಕರ ರಾಶಿ- ಮೇ 5 ರಿಂದ ಮಕರ ರಾಶಿಯ ಜಾತಕದವರ ಶುಭಕಾಲ ಆರಂಭವಾಗಲಿದೆ. ಈ ಅವಧಿಯಲ್ಲಿ ನಿಮಗೆ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ನಿಮ್ಮ ಬಾಸ್ ನಿಮ್ಮ ಕೆಲಸವನ್ನು ಕೊಂಡಾಡಲಿದ್ದಾರೆ. ಹೊಸ ಕಾರು ಅಥವಾ ಮನೆ ಖರೀದಿಸಬಹುದು. ಆದಾಯವನ್ನು ಹೆಚ್ಚಳದ ಬಲವಾದ ಅವಕಾಶಗಳಿವೆ. ಬುದ್ಧ ಪೌರ್ಣಿಮೆಯ ದಿನ ನಿರ್ಮಾಣಗೊಳ್ಳುವ ಶುಭ ಕಾಕತಾಳೀಯದ ಕಾರಣ ನಿಮ್ಮ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗಲಿವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)