CM Of Karnataka : ಕರ್ನಾಟಕ ಮುಂದಿನ ಮುಖ್ಯಮಂತ್ರಿ ಯಾರೆಂದು ಭವಿಷ್ಯ ನುಡಿದ ಕಾಲ ಭೈರವ.!

Dog Predicts: ಕರ್ನಾಟಕದಲ್ಲಿ ಚುನಾವಣೆ ಅಖಾಡ ಜೋರಾಗಿ ನಡೆಯುತ್ತಿದೆ. ಅಭ್ಯರ್ಥಿಗಳ ನಾಮಪತ್ರ ಪ್ರಕ್ರಿಯೆಯು ಮುಗಿದಿದೆ. ಹೀಗಿರುವಾಗ ಕರ್ನಾಟಕದ ಮುಂದಿನ ಸಿಎಂ ಯಾರೆಂದು ಕಾಲ ಬೈರವ ಸುಳಿವು ನೀಡಿದೆ.

Written by - Zee Kannada News Desk | Last Updated : Apr 25, 2023, 05:07 PM IST
  • ಕರ್ನಾಟಕ ಮುಂದಿನ ಮುಖ್ಯಮಂತ್ರಿ ಯಾರೆಂದು ಭವಿಷ್ಯ ನುಡಿದ ಕಾಲ ಭೈರವ
  • ಸಿಎಂ ಯಾರು ಎನ್ನುವ ಬಗ್ಗೆ ಸುಳಿವು ನೀಡಿದ ಶ್ವಾನ
  • ಮುಖ್ಯಮಂತ್ರಿಯಾಗುತ್ತಾರೆ ಅಂತೆಲ್ಲ ಚರ್ಚೆಗಳು ಬಲು ಜೋರು
CM Of Karnataka : ಕರ್ನಾಟಕ ಮುಂದಿನ ಮುಖ್ಯಮಂತ್ರಿ ಯಾರೆಂದು ಭವಿಷ್ಯ ನುಡಿದ ಕಾಲ ಭೈರವ.! title=

ಮಂಡ್ಯ: ಕರ್ನಾಟಕದಲ್ಲಿ ಚುನಾವಣೆ ಅಖಾಡ ಜೋರಾಗಿ ನಡೆಯುತ್ತಿದೆ. ಈಗಾಗಲೇ ಅಭ್ಯರ್ಥಿಗಳ ನಾಮಪತ್ರ ಪ್ರಕ್ರಿಯೆಯು ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ತಾ ಮುಂದು ನಾ ಮುಂದು ಎಂಬಂತೆ  ರಾಜಕೀಯ ನಾಯಕರು, ಸಿನಿಮಾ ಸೆಲೆಬ್ರೆಟಿಗಳು ಸೇರಿದಂತೆ ಮತ ಪ್ರಚಾರ ಜೋರು ನಡೆಯತ್ತಿದೆ. 

ಮತ ಹಾಕಿ ನಾಯಕರನ್ನು ಆರಿಸುವುದೊಂದೆ ಬಾಕಿ ಇದೆ. ಹೀಗಿರುವಾಗ ಮತ, ಚುನಾವಣೆ ಕುರಿತಂತೆ ಎಲ್ಲೆಂದರಲ್ಲಿ ಸದ್ದು ಜೋರು ನಡೆಯುತ್ತಿದೆ. ಘಟಾನುಘಟಿ ನಾಯಕರ ಪೈಪೋಟಿಯಲ್ಲಿ ಸಿಎಂ ಗದ್ದುಗೆ ಯಾರ  ಪಾಲಾಗಲಿದೆ ಎಂದು ದಿನೇ ದಿನೇ ಕೂತುಹಲ ಮೂಡಿಸಿದೆ..

ಇದನ್ನೂ ಓದಿ: Viral Video: ಡಿಸ್ಕೌಂಟ್‌ ಸೀರೆಗಾಗಿ ನಾರಿಯರ ಜಡೆಜಗಳ.. WWF ಗಿಂತ ಬಲು ಜೋರಾಗಿತ್ತು ಫೈಟ್‌!

ಹೀಗಿರುವಾಗ ಕರ್ನಾಟಕದ ಮುಂದಿನ ಸಿಎಂ ಯಾರೆಂದು ಕಾಲ ಬೈರವ ಸುಳಿವು ನೀಡಿದೆ. ಹೌದು, ಮಂಡ್ಯ ನಗರದ ಅಶೋಕನಗರದಲ್ಲಿ ಕಾಲ ಭೈರವ ಎಂದು ಶ್ವಾನನ್ನು ಪೂಜಿಸಲಾಗುತ್ತದೆ.  

ಇದನ್ನೂ ಓದಿ: Good News: ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಕೇಂದ್ರದ ಪರೀಕ್ಷೆ ಬರೆಯಲು ಅವಕಾಶ

ಪೂಜೆ ಸಮಯದಲ್ಲಿ ಕರ್ನಾಟಕದ  ಘಟಾನುಘಟಿ ನಾಯಕರಾದ ಬಸವರಾಜ ಬೊಮ್ಮಾಯಿ, ಹೆಚ್​ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಪೋಟೋವನ್ನು ಕಾಲ ಬೈರವ ಎಂದು ಪೂಜಿಸುವ ಶ್ವಾನದ ಮುಂದೆ ಇಟ್ಟು ಮುಂದಿನ ಸಿಎಂ ಯಾರೆಂದು ಭವಿಷ್ಯ ಕೇಳಿದ್ದಾರೆ. ಆ ವೇಳೆ ಶ್ವಾನವು ಮೂರು ನಾಯಕರಲ್ಲಿ  ಹೆಚ್.ಡಿ ಕುಮಾರಸ್ವಾಮಿ ಫೋಟೊವನ್ನು ಆರಿಸಿ ಸುಳಿವು ನೀಡಿದೆ. 

ಈ ಶ್ವಾನದ ಒಂದಿಷ್ಟು  ಮಾಹಿತಿ 
ಈ ಶ್ವಾನದ ಶಕ್ತಿ ಕುರಿತಂತೆ ಇದರಿಂದ ಹಲವು ಪವಾಡಗಳು ನಡೆದಿವೆ ಎನ್ನುವುದನ್ನು ಮಾಲೀಕ ಗೋಪಿ ಹೇಳಿದ್ದಾರೆ.ಕಳೆದ ಎರಡು ವರ್ಷಗಳಿಂದ ಶ್ವಾನ ನುಡಿದ ಭವಿಷ್ಯ ನಿಜವಾಗುತ್ತಿದೆಯಂತೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶ್ವಾನದ ಭವಿಷ್ಯ ನಿಜವಾಗಲಿದೆಯೇ  ಎಂದು ಕಾದು ನೋಡಬೇಕಿದೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News