ನವದೆಹಲಿ: ಮುಂದಿನ ಲೋಕಸಭೆಯ ನಂತರ ಬಿಜೆಪಿ ಸರ್ಕಾರ ರಚನೆ ಮಾಡಬೇಕೆಂದರೆ ಮೈತ್ರಿ ಪಕ್ಷಗಳಿಗೆ ಮುಖ್ಯಮಂತ್ರಿ ಪದವಿಯನ್ನು ನೀಡಬೇಕೆಂದು ಶಿವಸೇನಾ ಪಕ್ಷ ಮುಂಚಿತವಾಗಿಯೇ ಷರತ್ತನ್ನು ವಿಧಿಸಿದೆ.
ಈ ಕುರಿತಾಗಿ ಮಾತನಾಡಿರುವ ಶಿವಸೇನಾ ಪಕ್ಷದ ವಕ್ತಾರ "ಒಂದು ವೇಳೆ ಎನ್ ಡಿ ಎ 2019 ರಲ್ಲಿ ಸರ್ಕಾರವನ್ನು ರಚಿಸಬೇಕಾದರೆ ಶಿವಸೇನಾ, ಅಕಾಲಿದಳ, ಇತರ ಪ್ರಮುಖ ಮೈತ್ರಿಪಕ್ಷಗಳ ಪಾತ್ರವಿದೆ. ಆಯಾ ರಾಜ್ಯಗಳಲ್ಲಿ ಈ ಎಲ್ಲ ಪಕ್ಷಗಳು ಪ್ರಬಲವಾಗಿವೆ.ಆದ್ದರಿಂದ ಕೇಂದ್ರದಲ್ಲಿ ಇವುಗಳ ಬೆಂಬಲ ಬಿಜೆಪಿಗೆ ಬೇಕೆಂದರೆ ಸಿಎಂ ಪದವಿಯನ್ನು ಆಯಾ ರಾಜ್ಯದಲ್ಲಿ ಬಿಜೆಪಿ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಬೇಕು" ಎಂದು ರಾವತ್ ತಿಳಿಸಿದ್ದಾರೆ.
Shiv Sena leader Sanjay Raut: If NDA government is formed in 2019, Shiv Sena, Akali Dal & other major allies will have a role. All the allies of NDA are strong in their states & if you want to have an alliance with them at centre, the CM in that state should be from that ally. pic.twitter.com/3KRoPPvMo9
— ANI (@ANI) February 14, 2019
ಇನ್ನು ಮುಂದುವರೆದು ಇದು "ಇದು ಕಟ್ಟಪ್ಪಣೆಯಲ್ಲ, ಆದರೆ ಇದು ನಮ್ಮ ನಿಲುವು, ನಾವು ಈಗಾಗಲೇ ಹೇಳಿದಂತೆ ಮುಂದಿನ ಮುಖ್ಯಮಂತ್ರಿ ಮಹಾರಾಷ್ಟ್ರದಲ್ಲಿ ಶಿವಸೇನಾ ಪಕ್ಷದಿಂದ, ಇದಕ್ಕೂ ಮೈತ್ರಿಕೂಟಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಅವರು ತಿಳಿಸಿದರು.
ಇತ್ತೀಚಿಗೆ ಶಿವಸೇನಾ ಪಕ್ಷವು ಚಂದ್ರಬಾಬು ನಾಯ್ಡು ಅವರ ವಿಶೇಷ ಸ್ಥಾನಮಾನ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.ಇದಕ್ಕೆ ಪ್ರತಿಯಾಗಿ ಚಂದ್ರಬಾಬು ನಾಯ್ಡು "ಉದ್ಧವ್ ಠಾಕ್ರೆ ನನ್ನ ಉತ್ತಮ ಸ್ನೇಹಿತ, ನಮಗೆ ಬೆಂಬಲ ನೀಡಿರುವ ನಿರ್ಧಾರ ನಿಜಕ್ಕೂ ಪ್ರಶಂಸಾರ್ಹ ಎಂದು ಪ್ರತಿಕ್ರಿಯಿಸಿದ್ದರು.