Skin Care: ಹಾಲಿನ ಜೊತೆ ಈ ಎಣ್ಣೆಯನ್ನು ಬೆರೆಸಿ ಕಾಲಿಗೆ ಹಚ್ಚಿ: ಒಡೆದ ಹಿಮ್ಮಡಿಗೆ ಕ್ಷಣದಲ್ಲಿ ಸಿಗುವುದು ಪರಿಹಾರ!

Cracked Heels Treatment: ಚರ್ಮದ ಬಗ್ಗೆ ಪ್ರತಿಯೊಬ್ಬರೂ ಸಹ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಇನ್ನು ಮುಖ್ಯವಾಗಿ ಚಳಿಗಾಲದ ಶುಷ್ಕತೆಯನ್ನು ತಪ್ಪಿಸಲು ಹಾಲಿನ ಪರಿಣಾಮಕಾರಿ ಮನೆಮದ್ದುಗಳನ್ನು ನಾವಿಂದು ಹೇಳಲಿದ್ದೇವೆ.  

Written by - Bhavishya Shetty | Last Updated : Apr 20, 2023, 01:23 AM IST
    • ಚರ್ಮದ ಬಗ್ಗೆ ಪ್ರತಿಯೊಬ್ಬರೂ ಸಹ ವಿಶೇಷ ಕಾಳಜಿ ವಹಿಸುವುದು ಮುಖ್ಯ
    • ಚಳಿಗಾಲದ ಶುಷ್ಕತೆಯನ್ನು ತಪ್ಪಿಸಲು ಹಾಲಿನ ಪರಿಣಾಮಕಾರಿ ಮನೆಮದ್ದು
    • ಒಡೆದ ಹಿಮ್ಮಡಿಯಲ್ಲಿ ಧೂಳಿನಂಶ ಕುಳಿತುಕೊಂಡು ತೊಂದರೆಯನ್ನುಂಟು ಮಾಡುತ್ತದೆ
Skin Care: ಹಾಲಿನ ಜೊತೆ ಈ ಎಣ್ಣೆಯನ್ನು ಬೆರೆಸಿ ಕಾಲಿಗೆ ಹಚ್ಚಿ: ಒಡೆದ ಹಿಮ್ಮಡಿಗೆ ಕ್ಷಣದಲ್ಲಿ ಸಿಗುವುದು ಪರಿಹಾರ! title=
Cracked Heels Treatment

Cracked Heels Treatment: ಚಳಿಗಾಲ ಬಂತೆಂದರೆ ಸಾಕು ಚರ್ಮವು ಶುಷ್ಕತೆಗೆ ಬಲಿಯಾಗಲು ಪ್ರಾರಂಭಿಸುತ್ತದೆ. ಮುಖ ಮತ್ತು ತುಟಿ ಒಣಗಲು ಪ್ರಾರಂಭವಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಅಗತ್ಯ ಆರೈಕೆ ಮುಖ್ಯ, ಇದೀಗ ಬೇಸಿಗೆ ಪ್ರಾರಂಭವಾಗಿದೆ. ಒಡೆದ ಹಿಮ್ಮಡಿಯಲ್ಲಿ ಧೂಳಿನಂಶ ಕುಳಿತುಕೊಂಡು ತೊಂದರೆಯನ್ನುಂಟು ಮಾಡುತ್ತದೆ, ಹೀಗಾಗಿ ನಾವಿಂದು ಕೆಲ ಪರಿಹಾರಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ.

ಇದನ್ನೂ ಓದಿ: Summer Health Tips: ಬೇಸಿಗೆ ಕಾಲದಲ್ಲಿ ಮೂತ್ರಪಿಂಡದ ಆರೋಗ್ಯ ರಕ್ಷಣೆಗೆ ಈ ಪಾನೀಯಗಳನ್ನು ಸೇವಿಸಿ!

ಚರ್ಮದ ಬಗ್ಗೆ ಪ್ರತಿಯೊಬ್ಬರೂ ಸಹ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಇನ್ನು ಮುಖ್ಯವಾಗಿ ಚಳಿಗಾಲದ ಶುಷ್ಕತೆಯನ್ನು ತಪ್ಪಿಸಲು ಹಾಲಿನ ಪರಿಣಾಮಕಾರಿ ಮನೆಮದ್ದುಗಳನ್ನು ನಾವಿಂದು ಹೇಳಲಿದ್ದೇವೆ. 

ಹಾಲಿನಲ್ಲಿ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳು ಇರುವುದರಿಂದ ನಿಮ್ಮ ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿ ಪರಿಣಾಮ ಬೀರಬಹುದು. ಹೀಗಾಗಿ ರಾತ್ರಿ ಮಲಗುವ ಮೊದಲು ಪಾದಕ್ಕೆ  ಹಾಲನ್ನು ಹಚ್ಚಿ ಮಲಗಿ. ಆದರೆ ಅದನ್ನು ಹೇಗೆ ಹಚ್ಚಬೇಕೆಂದು ತಿಳಿಸಿಕೊಡಲಿದ್ದೇವೆ.  

ಹಾಲಿನ ಲೆಗ್ ಮಾಸ್ಕ್ ಮಾಡುವುದು ಹೇಗೆ?

ಹಾಲಿನ ಲೆಗ್ ಮಾಸ್ಕ್ ತಯಾರಿಸಲು ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ. ಸ್ವಲ್ಪ ಕುದಿ ಬಂದ ತಕ್ಷಣ ಇವೆರಡನ್ನು ಮಿಕ್ಸ್ ಮಾಡಿ. (1 ಕಪ್ ಹಾಲಿಗೆ 1 ಚೊಂಬು ನೀರಿನ ಪ್ರಮಾಣ)

ಈ ಮಿಶ್ರಣವನ್ನು ಒಂದು ಟಬ್’ಗೆ ಹಾಕಿ. ಅದಕ್ಕೆ 1 ಟೀಸ್ಪೂನ್ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಇದರಲ್ಲಿ ನಿಮ್ಮ ಪಾದಗಳನ್ನು ಅದ್ದಿ 5 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ.

ಬಳಿಕ ನಿಮ್ಮ ಪಾದಗಳನ್ನು ಹೊರತೆಗೆದು, ಟವೆಲ್’ನಿಂದ ನಿಧಾನವಾಗಿ ಒರೆಸಿ. ಈ ಪ್ರಕ್ರಿಯೆ ಮುಗಿದ ಕೆಲ ಸಮಯದವರೆಗೆ ಸಾಕ್ಸ್ ಧರಿಸಿ. ಮಲಗುವ ಸಂದರ್ಭದಲ್ಲಿ ಸಾಕ್ಸ್ ತೆಗೆಯಿರಿ. ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡಿದರೆ, ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಕಾಲಿಗೆ ಹಾಲು ಹಚ್ಚುವುದರಿಂದಾಗುವ ಪ್ರಯೋಜನಗಳು:

  • ಇದು ಒಡೆದ ಹಿಮ್ಮಡಿಯನ್ನು ಗುಣಪಡಿಸುತ್ತದೆ.
  • ಚಳಿಗಾಲದಲ್ಲಿ ಕಂಡುಬರುವ ಚರ್ಮದಲ್ಲಿನ ಉರಿಯೂತವನ್ನು ತೆಗೆದುಹಾಕುತ್ತದೆ
  • ಡೆಡ್ ಸ್ಕಿನ್’ಗಳನ್ನು ತೆಗೆದುಹಾಕಿ, ಪಾದವನ್ನು ಮೃದುವನ್ನಾಗಿಸುತ್ತದೆ.

ಇದನ್ನೂ ಓದಿ: Vastu plants: ಈ ಸಸ್ಯವು ಹಣವನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ, ಇಂದೇ ಮನೆಗೆ ತನ್ನಿ!

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News