Kedar Yog 2023: ಕೇದಾರ ಯೋಗ 23 ಏಪ್ರಿಲ್ 2023 ರಂದು ರೂಪುಗೊಳ್ಳುತ್ತಿದೆ. ಸುಮಾರು 500 ವರ್ಷಗಳ ನಂತರ ಈ ಯೋಗ ರೂಪುಗೊಳ್ಳಲಿದೆ. ಎಲ್ಲಾ ಯೋಗಗಳಲ್ಲಿ ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಕೆಲವು ರಾಶಿಗಳ ಮೇಲೆ ಶುಭ ಪರಿಣಾಮ ಬೀರುತ್ತದೆ.
Kedar Yog 2023 Effect: ಗ್ರಹಗಳ ಸಂಚಾರದಿಂದ ಅನೇಕ ಅಪರೂಪದ ಯೋಗಗಳು ನಿರ್ಮಾಣವಾಗುತ್ತವೆ. ಅವುಗಳ ಪ್ರಾಮುಖ್ಯತೆ ಬಗ್ಗೆ ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಕೇದಾರ ಯೋಗವೂ ಒಂದು. 500 ವರ್ಷಗಳ ಬಳಿಕ ಕೇದಾರ ಯೋಗ 23 ಏಪ್ರಿಲ್ 2023 ರಂದು ರೂಪುಗೊಳ್ಳಲಿದೆ. ಜ್ಯೋತಿಷ್ಯದಲ್ಲಿ ಇದನ್ನು ಬಹಳ ಅಪರೂಪವೆಂದು ಪರಿಗಣಿಸಲಾಗಿದೆ. ಈ ಯೋಗದಲ್ಲಿ ಈಗಾಗಲೇ ಜನಿಸಿದವರ ಜೀವನದಲ್ಲಿ ಯಾವುದೇ ರೀತಿಯ ಕೊರತೆಯಿಲ್ಲ. ಈ ಜನರು ತಮ್ಮ ಕಠಿಣ ಪರಿಶ್ರಮದ ಬಲದ ಮೇಲೆ ಎಲ್ಲವನ್ನೂ ಸಾಧಿಸುತ್ತಾರೆ. ಈ ಯೋಗದಲ್ಲಿ ಜನಿಸಿದವರು ಬುದ್ಧಿವಂತರು ಮತ್ತು ಶಕ್ತಿಶಾಲಿಗಳು, ಸಮಾಜದಲ್ಲಿ ಗೌರವಕ್ಕೆ ಪಾತ್ರರು ಆಗಿರುತ್ತಾರೆ.
ಏಪ್ರಿಲ್ 23 ರಂದು ರೂಪುಗೊಳ್ಳುತ್ತಿರುವ ಕೇದಾರ ಯೋಗದ ಸಮಯದಲ್ಲಿ ಬುಧ, ಸೂರ್ಯ, ಗುರು ಮತ್ತು ರಾಹು ಗ್ರಹಗಳು ಮೇಷದಲ್ಲಿ, ಚಂದ್ರ ಮತ್ತು ಶುಕ್ರರು ವೃಷಭದಲ್ಲಿ, ಶನಿಯು ಕುಂಭದಲ್ಲಿ ಮತ್ತು ಮಂಗಳ ಮಿಥುನದಲ್ಲಿ ಇರುತ್ತಾರೆ. ಈ ಶುಭ ಯೋಗವು ಕೆಲವು ರಾಶಿಗಳ ಅದೃಷ್ಟವನ್ನು ಬೆಳಗಿಸಲಿದೆ.
ಮೇಷ ರಾಶಿ- ನಿಮ್ಮ ಜಾತಕದ ಮೊದಲ ಮನೆಯಲ್ಲಿ ಸೂರ್ಯ, ಬುಧ, ಗುರು ಮತ್ತು ರಾಹು ಸಂಯೋಗವಾಗುತ್ತಾರೆ. ಕೇದಾರ ಯೋಗದ ಸೃಷ್ಟಿಯಿಂದ ವಿಶೇಷ ಲಾಭ ನಿಮಗಿದೆ. ಈ ರಾಶಿಯವರಿಗೆ ಆಕಸ್ಮಿಕವಾಗಿ ಧನಪ್ರಾತಿಯಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನೀವು ಮಾಡುವ ಪ್ರತಿ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.
ಸಿಂಹ ರಾಶಿ- ಈ ಕೇದಾರ ಯೋಗವು ನಿಮಗೆ ಉದ್ಯೋಗದಲ್ಲಿ ಬಡ್ತಿ ನೀಡುತ್ತದೆ. ವ್ಯಾಪಾರದಲ್ಲಿ ನಿಮ್ಮ ಲಾಭವು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಪಾರ್ಟನರ್‌ಶಿಪ್ ವ್ಯವಹಾರದಲ್ಲಿಯೂ ಲಾಭ ಪಡೆಯುತ್ತೀರಿ.
ಧನು ರಾಶಿ - ಕೇದಾರ ಯೋಗದ ಪ್ರಭಾವದಿಂದ ಆದಾಯ ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ನ್ಯಾಯಾಲಯದಲ್ಲಿ ಬಹಳ ದಿನಗಳಿಂದ ನಡೆಯುತ್ತಿದ್ದ ಪ್ರಕರಣಗಳು ಶೀಘ್ರವೇ ಬಗೆಹರಿಯಲಿವೆ. ನಿಮ್ಮ ಆರೋಗ್ಯವೂ ಮೊದಲಿಗಿಂತ ಸುಧಾರಿಸುತ್ತದೆ. ಉದ್ಯೋಗ, ವೃತ್ತಿ ಮತ್ತು ಶಿಕ್ಷಣದಲ್ಲಿ ಪ್ರಗತಿಯ ಜೊತೆಗೆ ಹೂಡಿಕೆಯಿಂದ ಲಾಭವನ್ನು ಪಡೆಯುತ್ತೀರಿ.
ಮಕರ ರಾಶಿ- ಕೇದಾರ ಯೋಗದ ಪ್ರಭಾವದಿಂದ ನಿಮ್ಮ ಜೀವನದಲ್ಲಿ ಸಂತೋಷ ತುಂಬಲಿದೆ. ನೀವು ಭೂಮಿ, ಕಟ್ಟಡ ಅಥವಾ ವಾಹನವನ್ನು ಖರೀದಿಸಬಹುದು. ಯಾವುದೇ ಕಾನೂನು ವಿವಾದದಲ್ಲಿ ಗೆಲುವಾಗುತ್ತದೆ. ನಿಮ್ಮ ಶತ್ರುಗಳನ್ನು ಗೆಲ್ಲುತ್ತೀರಿ. ಆದಾಯ ಹೆಚ್ಚಾಗುತ್ತದೆ.