ಬೆಂಗಳೂರು: ಅನಾರೋಗ್ಯದ ಕಾರಣದಿಂದ ಕೆಲವು ದಿನಗಳಿಂದ ಮುಂಬೈನಲ್ಲೇ ತಂಗಿದ್ದ ಜೆಡಿಎಸ್ ಶಾಸಕ ನಾರಾಯಣಗೌಡ ತಡರಾತ್ರಿ ಮುಂಬೈನಿಂದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ:
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಅಪರೇಶನ್ ಕಮಲದ ತೆಕ್ಕೆಯಲ್ಲಿದ್ದಾರೆಂಬ ಊಹಾಪೋಹ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಜೆಡಿಎಸ್ ಪಕ್ಷವನ್ನು ಬಿಡುವುದಿಲ್ಲ.
ನನ್ನನ್ನು ಖರೀದಿಸುವ ಶಕ್ತಿ ಯಾರಿಗೂ ಇಲ್ಲ. 10 ಬಿಜೆಪಿ ಶಾಸಕರ ಕೆಪಾಸಿಟಿ ನನಗೆ ಇದೆ. ನನ್ನ ಎಲ್ಲಾ ವ್ಯವಹಾರಗಳು ಮುಂಬೈನಲ್ಲಿವೆ. ನಾನು ಮುಂಬೈನಲ್ಲಿ ಇದ್ದರೂ ಸಿಎಂ ಕುಮಾರಣ್ಣನ ಸಂಪರ್ಕದಲ್ಲಿದ್ದೆ. ಅನಾರೋಗ್ಯದ ಕಾರಣ ಬಂದಿರಲಿಲ್ಲ ಎಂದಿದ್ದಾರೆ.
Narayana Gowda, JD(S) MLA: BJP can't and never purchase me. If I want I can bring 10 BJP MLAs. I was admitted in hospital after food poisoning, I have the hospital bills. There will be some internal issues inside the party and we'll clear it as usual. (12.02.2019) pic.twitter.com/ylay0xhEM2
— ANI (@ANI) February 13, 2019
ಕೆಐಎಎಲ್ ಏರ್ಫೋರ್ಟ್ ನಿಂದ ತಾಜ್ ವೆಸ್ಟೆಂಡ್ ಗೆ ಶಾಸಕ ನಾರಾಯಣಗೌಡ:
ಬೆಂಗಳೂರಿಗೆ ಬರ್ತಿದ್ದಂತೆ ಶಾಸಕ ನಾರಾಯಣ ಗೌಡ ಅವರನ್ನು ತಾಜ್ ವೆಸ್ಟೆಂಡ್ ಗೆ ಕರೆತಂದ ಸಚಿವ ಸಾ.ರಾ.ಮಹೇಶ್, ನಾರಾಯಣಗೌಡರು ನೆನ್ನೆ ಸಿಎಂ ಜೊತೆ ಮಾತುಕತೆ ನಡೆಸಿ ಮಂಗಳವಾರ ಬರುತ್ತೇನೆ ಎಂದು ಹೇಳಿದ್ದರು. ಅದರಂತೆ ಏರ್ ಪೋರ್ಟ್ ನಿಂದ ಕರ್ಕೊಂಡು ಬಂದಿದ್ದೀವಿ. ಅವರ ಆರೋಗ್ಯ ಚೆನ್ನಾಗಿದೆ ಎಂದು ಹೇಳಿದರು.