Beautiful Eye Make Up : ಮೇಕಪ್ ಅನ್ನೋದು ಮಹಿಳೆಯರಿಗೆ ಎಷ್ಟು ವಿಶೇಷವೆಂದರೆ ಅವರು ಹೆಚಿನ ಖರ್ಚನ್ನು ಮಾಡುವುದು ಅದಕ್ಕಾಗಿಯೇ ಕೇವಲ ಮುಖಕ್ಕೆ ಮಾತ್ರವಲ್ಲ ಕಣ್ಣುಗಳಿಗೂ ಸೂಕ್ತವಾಗುವ ಮೇಕಪ್ಗಳಿವೆ. ಹೆಣ್ಣು ಮಕ್ಕಳು ತಮ್ಮ ಅಂದವನ್ನು ಹೆಚ್ಚಾಗಿ ಕಣ್ಣುಗಳಲ್ಲಿಯೇ ಹೊಂದಿರುತ್ತಾರೆ.
ಕಣ್ಣುಗಳು ಸುಂದರವಾಗಿ ಕಂಡರೆ ಮುಖವೂ ಸುಂದರವಾಗಿ ಕಾಣುತ್ತದೆ. ಅದಕ್ಕಾಗಿಯೇ ಕಣ್ಣಿಗೂ ಹೊಂದುವಂತೆ ಕೆಲವು ಮೇಕಪ್ಗಳಿವೆ.
ಕಣ್ಣಿನ ಮೇಕಪ್ ವಿಷಯಕ್ಕೆ ಬಂದಾಗ, ರೆಪ್ಪೆ ಮುಖಕ್ಕೆ ಬಹಳ ಅಂದ ನೀಡುತ್ತದೆ.
ಕೆಲವರಿಗೆ ಉದ್ದದ ರೆಪ್ಪೆ ಇಲ್ಲದಿರುವುದರಿಂದ ಕೃತಕ ಕಣ್ಣು ರೆಪ್ಪೆಗಳನ್ನು ಧರಿಸುತ್ತಾರೆ, ಅನೇಕರು ಅದನ್ನು ಧರಿಸಲು ಇಷ್ಟಪಡುವುದಿಲ್ಲ.
ಅಂತಹವರು ತಮ್ಮ ಕಣ್ಣುಗಳಿಗೆ ಮಸ್ಕರಾ ಬಳಸುವುದರಿಂದ ಕಣ್ಣಿನ ರೆಪ್ಪೆಗಳನ್ನು ದಪ್ಪವಾಗಿ ಕಾಣುವಂತೆ ಮಾಡಬಹುದು.
ಮುಖದ ಮೇಲಿನ ಅತ್ಯಂತ ಆಕರ್ಷಕ ಅಂಗಗಳಲ್ಲಿ ಕಣ್ಣುಗಳು ಮೊದಲ ಸ್ಥಾನದಲ್ಲಿವೆ.
ಅದಕ್ಕಾಗಿಯೇ ಅನೇಕರು ಕಣ್ಣಿನ ಮೇಕಪ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಕಣ್ಣಿನ ಮೇಕಪ್ಗೆ ಐ-ಲೈನರ್, ಐ-ಶ್ಯಾಡೋ, ಮಸ್ಕರಾಗಳನ್ನು ಬಳಸಲಾಗುತ್ತದೆ.