Fact Check : ಮತ್ತೆ ಚಲಾವಣೆಗೆ ಬರುತ್ತಾ ಹಳೆಯ ಬ್ಯಾನ್‌ ಆದ 500, 1000 ರೂಪಾಯಿ ನೋಟು!?

Fact Check : ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರವೊಂದು ವೈರಲ್ ಆಗುತ್ತಿದೆ. ಇದರಲ್ಲಿ 500 ಮತ್ತು 1000 ರೂಪಾಯಿಯ ಹಳೆಯ ನೋಟುಗಳನ್ನು ಬದಲಿಸಲು ಆರ್‌ಬಿಐ ಪುನಃ ಅವಕಾಶ ನೀಡಿದೆ ಎಂದು ಹೇಳಲಾಗಿದೆ. ಇದು ನಿಜವೇ? ಅಥವಾ ಊಹಾಪೋಹ ಸುದ್ದಿಯೇ ಎಂಬುದನ್ನು ಇಲ್ಲಿ ತಿಳಿಯಿರಿ.

Written by - Chetana Devarmani | Last Updated : Apr 8, 2023, 01:29 PM IST
  • ಬ್ಯಾನ್‌ ಆದ 500, 1000 ರೂಪಾಯಿ ನೋಟು
  • ಮತ್ತೆ ಚಲಾವಣೆಗೆ ಬರುತ್ತಾ ಹಳೆಯ ನೋಟು?
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಪೋಸ್ಟ್‌!
Fact Check : ಮತ್ತೆ ಚಲಾವಣೆಗೆ ಬರುತ್ತಾ ಹಳೆಯ ಬ್ಯಾನ್‌ ಆದ 500, 1000 ರೂಪಾಯಿ ನೋಟು!?  title=

500 and 1000 rupees notes: ದೇಶಾದ್ಯಂತ ನೋಟ್‌ ಬ್ಯಾನ್‌ ನಂತರ 500 ಮತ್ತು 1000 ರೂಪಾಯಿಗಳ ನೋಟುಗಳಿಗೆ ಸಂಬಂಧಿಸಿದಂತೆ ಹಲವು ರೀತಿಯ ಸುದ್ದಿಗಳು ಹೊರಬರುತ್ತಿವೆ. ನೀವೂ ಕೂಡ ಅಂದು 500 ಮತ್ತು 1000 ರೂಪಾಯಿ ನೋಟುಗಳನ್ನು ಬದಲಾಯಿಸದೇ ಇದ್ದಿದ್ದರೆ ಈಗ ಮತ್ತೊಂದು ಅವಕಾಶವಿದೆ. RBI ದಿಂದ ದೊಡ್ಡ ಮಾಹಿತಿ ಹೊರಬೀಳುತ್ತಿದೆ. ನಿಮ್ಮ ಮನೆಯಲ್ಲಿ ಇನ್ನೂ ಹಳೆಯ ನೋಟುಗಳಿವೆಯೇ? ಹಾಗಾದರೆ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ.

ಭಾರತೀಯ ರಿಸರ್ವ್ ಬ್ಯಾಂಕ್ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಪತ್ರದಲ್ಲಿ 500 ಮತ್ತು 1000 ರೂಪಾಯಿಯ ಹಳೆಯ ನೋಟುಗಳನ್ನು ಬದಲಾಯಿಸುವ ಬಗ್ಗೆ ಈ ಪತ್ರದಲ್ಲಿ ಬರೆಯಲಾಗಿದೆ. ವಿದೇಶಿ ಪ್ರಜೆಗಳು, 500 ಮತ್ತು 1000 ರೂಪಾಯಿ ನೋಟುಗಳನ್ನು ಬದಲಾಯಿಸದೇ ಇದ್ದಿದ್ದರೆ ಈಗ ಮತ್ತೊಂದು ಅವಕಾಶವನ್ನು ಆರ್‌ಬಿಐ ವಿಸ್ತರಿಸಿದೆ ಎಂದು ವೈರಲ್ ಪತ್ರದಲ್ಲಿ ಹೇಳಲಾಗಿದೆ.

ಇದನ್ನೂ ಓದಿ : ಇವರೇ ನೋಡಿ ಪಾಕಿಸ್ತಾನದ ಶ್ರೀಮಂತ ಹಿಂದೂ, ಆದಾಯ ಕೇಳಿದ್ರೆ ದಂಗಾಗ್ತೀರಾ !

ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (PIB Fact check) ಫ್ಯಾಕ್ಟ್ ಚೆಕ್ ತಂಡವು ಈ ಪೋಸ್ಟ್‌ ಬಗ್ಗೆ ತನಿಖೆ ನಡೆಸಿ ಅದರ ಸತ್ಯವನ್ನು ಹೊರತಂದಿದೆ. PIB ಈ ವೈರಲ್ ಪೋಸ್ಟ್ ಅನ್ನು ಫ್ಯಾಕ್ಟ್ ಚೆಕ್ ಮಾಡಿದೆ. ವಿದೇಶಿ ಪ್ರಜೆಗಳಿಗೆ 500-1000 ರ ಹಳೆಯ ನೋಟುಗಳನ್ನು ಬದಲಿಸಲು ಆರ್‌ಬಿಐ ಮತ್ತೊಂದು ಅವಕಾಶ ನೀಡಿದೆ ಎಂಬುದು ನಕಲಿ ಸುದ್ದಿ ಎಂದು PIB ಫ್ಯಾಕ್ಟ್ ಚೆಕ್ ಹೇಳಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಹೇಳಿಕೆಯ ಬಗ್ಗೆ ಟ್ವೀಟ್ ಮಾಡಿರುವ ಅವರು, ವಿದೇಶಿ ಪ್ರಜೆಗಳಿಗೆ ಭಾರತೀಯ ನೋಟುಗಳನ್ನು ಬದಲಾಯಿಸುವ ಸೌಲಭ್ಯವು 2017 ರಲ್ಲಿ ಕೊನೆಗೊಂಡಿದೆ ಎಂದು ಹೇಳಿದರು. 500 ಮತ್ತು 1000 ನೋಟುಗಳ ಬದಲಾವಣೆಗೆ ಆರ್‌ಬಿಐ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸಿಲ್ಲ.

ಇದನ್ನೂ ಓದಿ : Tejas Fighter Jet: ಮೂರನೇ ತೇಜಸ್ ಜೆಟ್ ಜೋಡಣಾ ಘಟಕ ಉದ್ಘಾಟಿಸಿದ ಎಚ್ಎಎಲ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News