ನವದೆಹಲಿ: ಬಜೆಟ್ ಅಧಿವೇಶನಕ್ಕೂ ಮುನ್ನ ಸಂಸತ್ ನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೊವಿಂದ್ " ಸರ್ಕಾರ ನವ ಭಾರತ ನಿರ್ಮಾಣಕ್ಕಾಗಿ ಬದ್ದವಾಗಿದೆ ಜನರಿಗೆ ಹೊಸ ಆಶಯವನ್ನು ನೀಡುವಲ್ಲಿ ಕಾರ್ಯಪ್ರವೃತ್ತರಾಗಿದೆ" ಎಂದು ತಿಳಿಸಿದರು.
ಮುಸ್ಲಿಂ ಮಹಿಳೆಯರನ್ನು ಸಶಕ್ತಗೊಳಿಸಲು ತ್ರಿವಳಿ ತಲಾಖ್ ತಲಾಕ್ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ.ಆ ಮೂಲಕ ಅವರು ಯಾವುದೇ ಭಯಭೀತಿ ಇಲ್ಲದೆ ಜೀವನ ಸಾಗಿಸಬಹುದು. ಇತರ ಪ್ರದೇಶದೆಲ್ಲೆಡೆ ದೌರ್ಜನ್ಯ ಎದುರಿಸಿದವರಿಗೆ ನಾಗರಿಕತ್ವ ತಿದ್ದುಪಡಿ ಮಸೂದೆಯು ಭಾರತೀಯ ಪೌರತ್ವವನ್ನು ಸುಲಭವಾಗಿ ಒದಗಿಸುವಂತೆ ಮಾಡುತ್ತದೆ ಎಂದರು.ಇದೇ ವೇಳೆ ರಾಷ್ಟ್ರಪತಿ ಕೊವಿಂದ್ ಕೇಂದ್ರ ಸರ್ಕಾರದ ಹಲವು ಜನಪ್ರಿಯ ಕಾರ್ಯಕ್ರಮಗಳ ಕುರಿತ ಕ್ರಮಗಳನ್ನು ವಿವರಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಸಂಬಂಧದ ಬಗ್ಗೆ ವಿವರಿಸಿದ ಅವರು ಭಾರತ ಎಲ್ಲ ದೇಶಗಳ ಜೊತೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದೆ.ಭಾರತ ಸರ್ಜಿಕಲ್ ಸ್ಟ್ರೈಕ್ ಗಡಿ ಪ್ರದೇಶದಲ್ಲಿನ ವಿಚಾರದಲ್ಲಿ ಭಾರತ ತನ್ನ ಹೊಸ ಕಾರ್ಯಸೂಚಿಯನ್ನು ತಿಳಿಸಿದೆ ಎಂದರು.ಆಯುಷ್ಮಾನ್ ಭಾರತ ಯೋಜನೆ ಕುರಿತಾಗಿ ತಿಳಿಸಿದ ಅವರು "ನನ್ನ ಸರ್ಕಾರ ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಆರೋಗ್ಯ ಒದಗಿಸಲು ಆಯುಷ್ಮಾನ್ ಭಾರತ ಯೋಜನೆಯನ್ನು ಪ್ರಾರಂಭಿಸಿದೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 10 ಲಕ್ಷ ಜನರು ಈ ಯೋಜನೆಯ ಲಾಭವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಇದು 16ನೇ ಲೋಕಸಭಾದ ಕೊನೆಯ ಅಧಿವೇಶನವಾಗಿದೆ.ಫೆಬ್ರುವರಿ 13ರಂದು ಬಜೆಟ್ ಅಧಿವೇಶನ ಕೊನೆಗೊಳ್ಳಲಿದೆ.