Bollywood Actors Love Affair: ಮದುವೆಯಾದ್ರೂ ಬೇರೆ ನಟಿಯರನ್ನು ಪ್ರೀತಿಸಿದ ಬಾಲಿವುಡ್ ನ ಅನೇಕ ನಟರು ಇದ್ದಾರೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್ನಿಂದ ಹಿಡಿದು ಅಕ್ಷಯ್ ಕುಮಾರ್ವರೆಗಿನ ಹೆಸರುಗಳಿವೆ.
Bollywood Actors Love Affair: ಸಿನಿರಂಗದಲ್ಲಿ ಪ್ರೇಮ ಕತೆಗಳಿಗೇನು ಬರವಿಲ್ಲ. ನಟ - ನಟಿಯರ ಲವ್ ಸ್ಟೋರಿಗಳು ಆಗಾಗ್ಗೆ ಮುನ್ನೆಲೆಗೆ ಬರುತ್ತವೆ. ಅನೇಕ ಬಾರಿ ತಮ್ಮ ಪತಿ ಅಥವಾ ಪತ್ನಿಗೆ ವಿಚ್ಛೇದನ ನೀಡಿ, ಪ್ರೀತಿಸಿದವರನ್ನು ಮದುವೆಯಾದ ಉದಾಹರಣೆಗಳು ಸಹ ಬಾಲಿವುಡ್ನಲ್ಲಿವೆ. ಮದುವೆಯಾದ್ರೂ ಬೇರೆ ನಟಿಯರನ್ನು ಪ್ರೀತಿಸಿದ ಬಾಲಿವುಡ್ ನ ಖ್ಯಾತ ನಟರ ಬಗ್ಗೆ ಇಂದು ನಾವು ಹೇಳಲಿದ್ದೇವೆ.
ಬಾಲಿವುಡ್ ನಟ ಧರ್ಮೇಂದ್ರ ಮುಂಬೈಗೆ ಬಂದಾಗ, ಅವರು ಈಗಾಗಲೇ ಮದುವೆಯಾಗಿದ್ದರು, ಆದರೆ ಇಲ್ಲಿಗೆ ಬಂದ ನಂತರ ಅವರು ಹೇಮಾ ಮಾಲಿನಿಯನ್ನು ಪ್ರೀತಿಸುತ್ತಿದ್ದರು. ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದ ಅವರು, ಧರ್ಮ ಬದಲಿಸಿ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದರು. ಇದರಿಂದ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ತೀವ್ರವಾಗಿ ಕುಗ್ಗಿಹೋಗಿದ್ದರು.
ಚೊಚ್ಚಲ ಚಿತ್ರದ ಸಮಯದಲ್ಲಿ ಸನ್ನಿ ಡಿಯೋಲ್ ಕೂಡ ಮದುವೆಯಾಗಿದ್ದರು. ಆದರೆ ಇನ್ನೂ ಅವರು ಅಮೃತಾ ಸಿಂಗ್ ಅವರೊಂದಿಗೆ ಅಷ್ಟೊಂದು ಕ್ಲೋಸ್ ಆಗಿರಲಿಲ್ಲ. ಅಷ್ಟೇ ಅಲ್ಲ ಡಿಂಪಲ್ ಕಪಾಡಿಯಾ ಜೊತೆಗೆ ಸನ್ನಿ ಡಿಯೋಲ್ ಹೆಸರು ಕೂಡ ತಳುಕು ಹಾಕಿಕೊಂಡಿದ್ದು, ಇಂದಿಗೂ ಅವರು ಡಿಂಪಲ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿಲ್ಲ ಎನ್ನಲಾಗಿದೆ.
ಶಾರುಖ್ ಖಾನ್ ತನ್ನ ಪತ್ನಿ ಗೌರಿಯೊಂದಿಗೆ ಪ್ರೇಮವಿವಾಹ ಮಾಡಿಕೊಂಡಿದ್ದರು ಮತ್ತು ಗೌರಿಯನ್ನು ಪಡೆಯಲು ಅವರು ಸಾಕಷ್ಟು ಕಷ್ಟಪಟ್ಟಿದ್ದರು. ಆದರೆ ಡಾನ್ ಚಿತ್ರದ ಶೂಟಿಂಗ್ ಸಮಯದಲ್ಲಿ, ಪ್ರಿಯಾಂಕಾ ಚೋಪ್ರಾ ಅವರೊಂದಿಗಿನ ಅವರ ನಿಕಟತೆಯ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಸುದ್ದಿ ಗೌರಿಯವರಿಗೂ ತಲುಪಿತ್ತು ಎನ್ನಲಾಗಿದ್ದು, ಮತ್ತೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ.
ಪ್ರಿಯಾಂಕಾ ಚೋಪ್ರಾ ಜೊತೆಗೆ ಅಕ್ಷಯ್ ಕುಮಾರ್ ಹೆಸರು ಬಹಳ ವರ್ಷಗಳ ಹಿಂದೆಯೇ ಕೇಳಿಬಂದಿತ್ತು. ಇಬ್ಬರೂ ಒಟ್ಟಿಗೆ ಅನೇಕ ಚಿತ್ರಗಳನ್ನು ಮಾಡಿದ್ದಾರೆ ಮತ್ತು ಇಬ್ಬರ ನಡುವಿನ ಸಂಬಂಧವು ಸ್ನೇಹಕ್ಕಿಂತ ಹೆಚ್ಚಾಗಿ ಬೆಳೆಯಲು ಪ್ರಾರಂಭಿಸಿತು ಎಂದು ಹೇಳಲಾಗುತ್ತದೆ, ಆದರೆ ಟ್ವಿಂಕಲ್ ಖನ್ನಾ ಅಕ್ಷಯ್ ಅವರ ಕಿವಿಯನ್ನು ಚೆನ್ನಾಗಿ ಹಿಂಡಿದಾಗ, ನಟ ಪ್ರಿಯಾಂಕಾ ಅವರೊಂದಿಗೆ ದೂರವಾದರಂತೆ ಎನ್ನಲಾಗಿದೆ.
ಹೃತಿಕ್ ಮತ್ತು ಸುಸ್ಸಾನೆ ನಡುವೆ ಸಾಕಷ್ಟು ಪ್ರೀತಿ ಇತ್ತು, ಆದರೆ ಒಮ್ಮೆ ಹೃತಿಕ್ ಹೆಸರು ಕಂಗನಾ ರಣಾವತ್ ಜೊತೆ ತಳುಕು ಹಾಕಿಕೊಂಡಿತ್ತು. ಈ ವಿವಾಹೇತರ ಸಂಬಂಧವೇ ಹೃತಿಕ್ ಮತ್ತು ಸುಸ್ಸಾನೆ ವಿಚ್ಛೇದನಕ್ಕೆ ಕಾರಣ ಎಂದು ಸಹ ಅನೇಕರು ಹೇಳುತ್ತಾರೆ.