IPL ಇತಿಹಾಸದಲ್ಲಿಯೇ ಬೆಸ್ಟ್ ಕ್ಯಾಚ್: ಬೌಂಡರಿ ಲೈನ್ ಬಳಿ ಈ ಕ್ರಿಕೆಟಿಗ ಮಾಡಿದ ಸಾಹಸಕ್ಕೆ ಇಡೀ ಸ್ಟೇಡಿಯಂ ಶಾಕ್!

Abhishek Sharma Best Catch: ಸ್ಯಾಮ್ಸನ್ ಡೀಪ್-ಮಿಡ್ ವಿಕೆಟ್’ನ ಮೇಲೆ ಬಲವಾಗಿ ಹೊಡೆದಾಗ ಬಾಲ್ ಬೌಂಡರಿ ದಾಟುವತ್ತ ಮುನ್ನಡೆಯಿತು. ಆದರೆ ಅಲ್ಲಿಯೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಷೇಕ್ ಶಾಂತವಾಗಿ ಕ್ಯಾಚ್ ಹಿಡಿದರು. ಈ ಸಂದರ್ಭದಲ್ಲಿ ಕೊಂಚ ಸಹನೆ ತಪ್ಪಿದರೂ ಸಹ ಅವರ ಕಾಲು ಬೌಂಡರಿ ದಾಟುತ್ತಿತ್ತು.

Written by - Bhavishya Shetty | Last Updated : Apr 2, 2023, 06:35 PM IST
    • ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸಖತ್ ಬ್ಯಾಟಿಂಗ್ ಮಾಡಿದೆ.
    • ಯಶಸ್ವಿ ಜೈಸ್ವಾಲ್ 54, ಜೋಸ್ ಬಟ್ಲರ್ 54, ಸಂಜು ಸ್ಯಾಮ್ಸನ್ 55 ರನ್’ಗಳ ಕೊಡುಗೆ ನೀಡಿದ್ದಾರೆ.
    • 22 ಬೌಂಡರಿ, 8 ಸಿಕ್ಸರ್ ಒಳಗೊಂಡಂತೆ ರಾಜಸ್ಥಾನ ತಂಡ 203 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿದೆ.
IPL ಇತಿಹಾಸದಲ್ಲಿಯೇ ಬೆಸ್ಟ್ ಕ್ಯಾಚ್: ಬೌಂಡರಿ ಲೈನ್ ಬಳಿ ಈ ಕ್ರಿಕೆಟಿಗ ಮಾಡಿದ ಸಾಹಸಕ್ಕೆ ಇಡೀ ಸ್ಟೇಡಿಯಂ ಶಾಕ್! title=
Abhishek Sharma Catch

Abhishek Sharma Best Catch: ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಪಂದ್ಯದಲ್ಲಿ ಇಂದು ಅದ್ಭುತವಾದ ಕ್ಯಾಚ್ ಕಂಡುಬಂದಿದೆ. ಸನ್ ರೈಸರ್ಸ್ ಹೈದರಾಬಾದ್ ಯುವ ಸ್ಟಾರ್ ಅಭಿಷೇಕ್ ಶರ್ಮಾ ಹಿಡಿದ ಕ್ಯಾಚ್ ಒಂದು ಥರ ಸಾಹಸದಂತೆ ಕಂಡುಬಂದಿತ್ತು.

ಇದನ್ನೂ ಓದಿ: Virat Kohli Alcohol: ವಿರಾಟ್’ಗೆ ಕುಡಿತದ ಚಟ! ಮದ್ಯ ಸೇವಿಸಿದರೆ ಅವರು ಮಾಡೋ ಈ ಕೆಲಸವನ್ನು ತಡೆಯೋರೆ ಇಲ್ಲ..!

ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2023 ಸೀಸನ್ 16ರ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸಖತ್ ಬ್ಯಾಟಿಂಗ್ ಮಾಡಿದೆ. ರಾಜಸ್ಥಾನ ತಂಡದ ಪರ ಯಶಸ್ವಿ ಜೈಸ್ವಾಲ್ 54, ಜೋಸ್ ಬಟ್ಲರ್ 54, ಸಂಜು ಸ್ಯಾಮ್ಸನ್ 55 ರನ್’ಗಳ ಕೊಡುಗೆ ನೀಡಿದ್ದಾರೆ. 22 ಬೌಂಡರಿ, 8 ಸಿಕ್ಸರ್ ಒಳಗೊಂಡಂತೆ ರಾಜಸ್ಥಾನ ತಂಡ 203 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ಸ್ಯಾಮ್ಸನ್ ಡೀಪ್-ಮಿಡ್ ವಿಕೆಟ್’ನ ಮೇಲೆ ಬಲವಾಗಿ ಹೊಡೆದಾಗ ಬಾಲ್ ಬೌಂಡರಿ ದಾಟುವತ್ತ ಮುನ್ನಡೆಯಿತು. ಆದರೆ ಅಲ್ಲಿಯೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಷೇಕ್ ಶಾಂತವಾಗಿ ಕ್ಯಾಚ್ ಹಿಡಿದರು. ಈ ಸಂದರ್ಭದಲ್ಲಿ ಕೊಂಚ ಸಹನೆ ತಪ್ಪಿದರೂ ಸಹ ಅವರ ಕಾಲು ಬೌಂಡರಿ ದಾಟುತ್ತಿತ್ತು.

 

ಇಂದು ಸನ್‌ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಈಗಾಗಲೇ ಬ್ಯಾಟಿಂಗ್ ಮಾಡಿದ ರಾಜಸ್ಥಾನ ಈ ಋತುವಿನಲ್ಲಿ ಅತೀ ಹೆಚ್ಚು (ಇಲ್ಲಿವರೆಗೆ) 200 ರನ್ ಗಡಿ ದಾಟಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ವಿ.ಕೀ), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಜೇಸನ್ ಹೋಲ್ಡರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್

ಇದನ್ನೂ ಓದಿ: IPL 2023: ಟೀಂ ಇಂಡಿಯಾದಿಂದ ಹೊರಗಿಟ್ಟ ಈ ಆಟಗಾರನಿಗೆ ಪಾಂಡ್ಯ ಕೂಡ ಕೊಡುತ್ತಿಲ್ಲ ಅವಕಾಶ! ಅಂತ್ಯವಾಯ್ತ ವೃತ್ತಿ ಜೀವನ?

ಸನ್‌ ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್(ವಿ.ಕೀ), ವಾಷಿಂಗ್ಟನ್ ಸುಂದರ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್(ನಾ), ಉಮ್ರಾನ್ ಮಲಿಕ್, ಟಿ ನಟರಾಜನ್, ಫಜಲ್ಹಕ್ ಫಾರೂಕಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News