Best-Worst record in IPL history: ಸದ್ಯ IPL 2023 ಸೀಸನ್ 16 ಪ್ರಾರಂಭವಾಗಿದ್ದು, ತಂಡಗಳು ದಾಖಲೆಗಳನ್ನು ಮಾಡುವತ್ತ ಮುಖಮಾಡಿದೆ. ಆದರೆ ಇಲ್ಲೊಂದು ತಂಡ ಐಪಿಎಲ್ ಇತಿಹಾಸದಲ್ಲಿಯೇ ಬೆಸ್ಟ್ ಮತ್ತು ವರ್ಸ್ಟ್ ದಾಖಲೆಗಳನ್ನು ಹೊಂದಿದೆ. ಈ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
ಸದ್ಯ IPL 2023 ಸೀಸನ್ 16 ಪ್ರಾರಂಭವಾಗಿದ್ದು, ತಂಡಗಳು ದಾಖಲೆಗಳನ್ನು ಮಾಡುವತ್ತ ಮುಖಮಾಡಿದೆ. ಆದರೆ ಇಲ್ಲೊಂದು ತಂಡ ಐಪಿಎಲ್ ಇತಿಹಾಸದಲ್ಲಿಯೇ ಬೆಸ್ಟ್ ಮತ್ತು ವರ್ಸ್ಟ್ ದಾಖಲೆಗಳನ್ನು ಹೊಂದಿದೆ. ಈ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
ಇಲ್ಲಿ ನಾವು ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಚಿಸಿದ ಕೆಲವು ಅತ್ಯುತ್ತಮ ಮತ್ತು ಕೆಟ್ಟ ದಾಖಲೆಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ,
ಆರ್ ಸಿ ಬಿ ತಂಡ ಐಪಿಎಲ್’ನಲ್ಲಿ 11 ವರ್ಷಗಳಿಂದ ಆಡುತ್ತಿದೆ. ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಆದರೆ ಈ ತಂಡವು ಅನೇಕ ಹೆಗ್ಗುರುತುಗಳನ್ನು ಸೃಷ್ಟಿಸಿದೆ, RCB ಒಂದೇ ಇನ್ನಿಂಗ್ಸ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 20 ಓವರ್ ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತ್ತು. ಆ ಋತುವಿನಲ್ಲಿ ಐಪಿಎಲ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಸ್ ಗೇಲ್, ಪಂದ್ಯದಲ್ಲಿ 175 ರನ್ ಗಳಿಸಿದರು.
ಐಪಿಎಲ್ ಇನ್ನಿಂಗ್ಸ್’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬೆಂಗಳೂರು ತಂಡವೇ, ಇನ್ನಿಂಗ್ಸ್ನಲ್ಲಿ ಅತಿ ಕಡಿಮೆ ರನ್ ಗಳಿಸಿದ ಅತೀ ಕೆಟ್ಟ ದಾಖಲೆಯನ್ನೂ ಹೊಂದಿದೆ. 2017ರಲ್ಲಿ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು 49 ರನ್’ಗಳಿಗೆ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಎಲ್ಲಾ ಆಟಗಾರರು ಒಂದಂಕಿ ರನ್ ಗಳಿಸಲಷ್ಟೇ ಶಕ್ತರಾದರು..
ಐಪಿಎಲ್ ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆಯನ್ನು ಗೇಲ್ ಹೊಂದಿದ್ದಾರೆ. RCB ತಂಡವು 263 ರನ್’ಗಳ ಅತ್ಯಧಿಕ ಸ್ಕೋರ್ ಗಳಿಸಿದ ಸಂದರ್ಭದಲ್ಲಿಯೇ ಈ ದಾಖಲೆಯನ್ನು ಮಾಡಿದ್ದಾರೆ. ಆ ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಪಂದ್ಯದ ಅಂತ್ಯಕ್ಕೆ ಅವರ ಸ್ಕೋರ್ 66 ಎಸೆತಗಳಲ್ಲಿ ಅಜೇಯ 175 ಆಗಿತ್ತು.
2009 ರ ಐಪಿಎಲ್ ಋತುವಿನಲ್ಲಿ, ಬೆಂಗಳೂರಿನ ಆಟಗಾರ ಮನೀಶ್ ಪಾಂಡೆ ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ 67 ಎಸೆತಗಳಲ್ಲಿ ಶತಕ ಗಳಿಸಿದರು. ಅದಕ್ಕೂ ಹಿಂದೆ ಸಚಿನ್ ತೆಂಡೂಲ್ಕರ್ 65 ಎಸೆತಗಳಲ್ಲಿ ಶತಕ ಬಾರಿಸಿದ್ದರು.