ಹೈದರಾಬಾದ್: ಕೇವಲ 13 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಶ್ರಾವಂತಿ (13) ಮೃತ ಬಾಲಕಿ. ಮೆಹಬೂಬಬಾದ್ ಜಿಲ್ಲೆಯ ಮರಿಪೆದ ಮಂಡಲದ ಬೊಯಪಲೇಮ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೋದತಾಂಡದಲ್ಲಿ ಈ ಘಟನೆ ನಡೆದಿದೆ.
ಮಂಡಲ ಕೇಂದ್ರದ ಶಾಲೆಯಲ್ಲಿ ಶ್ರಾವಂತಿ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ರಾಮನವಮಿ ರಜೆ ಹಿನ್ನೆಲೆ ತನ್ನ ಸ್ನೇಹಿತರ ಜೊತೆಗೆ ಗುರುವಾರ(ಮಾರ್ಚ್ 30) ಸಂಜೆಯವರೆಗೂ ಆಟವಾಡಿದ್ದಳು. ತಾಂಡದ ಸಮೀಪವಿದ್ದ ಹೊಸ ಮನೆಯಲ್ಲಿ ಪೋಷಕರಿದ್ದರು. ಈ ವೇಳೆ ಶ್ರಾವಂತಿ ತನ್ನ ಅಜ್ಜಿಯ ಜೊತೆಗೆ ಹಳೆಯ ಮನೆಯಲ್ಲಿಯೇ ಮಲಗಿಕೊಂಡಿದ್ದಳು.
ಇದನ್ನೂ ಓದಿ: West Bengal: ಅಪರಿಚಿತರ ಗುಂಡಿನ ದಾಳಿಗೆ ಬಿಜೆಪಿ ನಾಯಕ ಬಲಿ!
ಶುಕ್ರವಾರ(ಮಾರ್ಚ್ 31) ಮುಂಜಾನೆ 3 ಗಂಟೆಗೆ ಎಚ್ಚರಗೊಂಡ ಶ್ರಾವಂತಿ ಎದೆನೋವು ಅಂತಾ ತನ್ನ ಅಜ್ಜಿಯ ಬಳಿ ಹೇಳಿದ್ದಳಂತೆ. ಹೊರಗೆ ಹೋಗಿ ಮೂರ್ತ ವಿಸರ್ಜನೆ ಮಾಡಿ ಮತ್ತೆ ಮನೆಗೆ ಬಂದು ಮಲಗಿಕೊಂಡಿದ್ದಳು. ಆಕೆ ತುಂಬಾ ಸುಸ್ತಾಗಿರುವುದನ್ನು ಗಮನಿಸಿದ ಅಜ್ಜಿ ಶ್ರಾವಂತಿಯ ತಂದೆಗೆ ಮಾಹಿತಿ ತಿಳಿಸಿದ್ದರಂತೆ.
ಹಳೆಯ ಮನೆಗೆ ಬಂದ ಶ್ರಾವಂತಿ ತಂದೆ ಆಕೆಯ CPR ಮಾಡಿ, ತಕ್ಷಣ ಆಕೆಯನ್ನು ಮರಿಪೆದ ಮಂಡಲದಲ್ಲಿರುವ ಆರ್ಎಂಪಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಶ್ರಾವಂತಿ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಇದರಿಂದ ಆಘಾತಗೊಂಡ ಪೋಷಕರು ತಮ್ಮ ಮಗಳನ್ನು ಹೇಗಾದರೂ ಮಾಡಿ ಬದುಕಿಸಿಕೊಡಿ ಅಂತಾ ವೈದ್ಯರ ಬಳಿ ಬೇಡಿಕೊಂಡಿದ್ದಾರೆ. ಬಳಿಕ ಮೃತದೇಹವನ್ನೇ ಖಮ್ಮಮ್ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕಿಯನ್ನು ತಪಾಸಣೆ ನಡೆಸಿದ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಪಿಸ್ತೂಲ್‌ನಿಂದ ಕೇಕ್ ಕಟ್ ಪೊಲೀಸರಿಂದ ಹುಟ್ಟುಹಬ್ಬಕ್ಕೆ ಸಿಕ್ತು ಭರ್ಜರಿ ಗಿಫ್ಟ್!
ಹೃದಯಾಘಾತದಿಂದ ಮಗಳು ಸಾವನ್ನಪ್ಪಿರುವ ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆಡಿ ನಲಿಯಬೇಕಾದ ವಯಸ್ಸಿನಲ್ಲಿ ಶ್ರಾವಂತಿ ಹೃದಯಾಘಾತಕ್ಕೆ ಬಲಿಯಾಗಿದ್ದನ್ನು ತಿಳಿದು ಊರಿನ ಜನರೇ ಕಣ್ಣೀರು ಹಾಕಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.