Weight Loss Tips: ತೂಕವನ್ನು ಕಳೆದುಕೊಳ್ಳುವುದು ಕಷ್ಟದ ಕೆಲಸ ಎಂದು ಬಹುತೇಕರು ಭಾವಿಸುತ್ತಾರೆ. ದೇಹಕ್ಕೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಲು ಮೊದಲು ನೀವು ನಿಮ್ಮ ಆಹಾರ ಕ್ರಮ ಮತ್ತು ವ್ಯಾಯಾಮದ ದಿನಚರಿಯೊಂದಿಗೆ ಪ್ರಯೋಗವನ್ನು ಮಾಡಬೇಕು. ಏಕೆಂದರೆ ಕೆಲವೊಮ್ಮೆ ಇದು ಕೂಡ ನಿಮ್ಮ ಪಾಲಿಗೆ ಪವಾಡ ಸಾಬೀತಾಗಬಹುದು. ತೂಕ ಇಳಿಕೆಗೆ ನೀವು ಪ್ರಯತ್ನಿಸಬಹುದಾದ ಒಂದು ಪಾನೀಯ ಎಂದರೆ ಅದುವೇ ಒಣದ್ರಾಕ್ಷಿ ಮತ್ತು ಬೆಲ್ಲದ ನೀರು.
ಒಣದ್ರಾಕ್ಷಿ ಮತ್ತು ಬೆಲ್ಲ ಎಂಬ ಎರಡು ಸೂಪರ್ ಫುಡ್ ಗಳ ಸಂಯೋಜನೆ
ಒಣದ್ರಾಕ್ಷಿ ಮತ್ತು ಬೆಲ್ಲ ಎರಡೂ ಕೂಡ ಆರೋಗ್ಯ ಸ್ನೇಹಿ ಪೋಷಕಾಂಶಗಳ ಆಗರವಾಗಿರುವುದರಿಂದ ಅವುಗಳನ್ನು ಸೂಪರ್ಫುಡ್ಗಳೆಂದು ವರ್ಗೀಕರಿಸಲಾಗಿದೆ. ಇವು ರಕ್ತದೊತ್ತಡವನ್ನು ಕಡಿಮೆ ಮಾಡಲು, ಉಸಿರಾಟದ ವ್ಯವಸ್ಥೆಯನ್ನು ಶುದ್ಧೀಕರಿಸಲು, ಮೂಳೆಗಳನ್ನು ಬಲಪಡಿಸಲು ಮತ್ತು ತೂಕ ಇಳಿಕೆಯ ಚಯಾಪಚಯ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಈ ಸೂಪರ್ಫುಡ್ಗಳು ಒಟ್ಟಾಗಿ ತೂಕ ಇಳಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ. ಹೀಗಾಗಿ ನೀವು ನಿಮ್ಮ ತೂಕ ಇಳಿಕೆಯ ಗುರಿಯನ್ನು ವೇಗವಾಗಿ ಸಾಧಿಸಬಹುದು.
ಬೆಲ್ಲದಲ್ಲಿನ ಪೋಷಕಾಂಶಗಳು ಮತ್ತು ಅವುಗಳ ಪ್ರಯೋಜನಗಳು
ಬೆಲ್ಲದಲ್ಲಿ ಹೇರಳ ಪ್ರಮಾಣದ ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಸೆಲೆನಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ಸತುವುಗಳಿವೆ ಸಕ್ಕರೆಗಿಂತ ಭಿನ್ನವಾಗಿ, ಬೆಲ್ಲವು ಕ್ಯಾಲೊರಿಗಳನ್ನು ಮಾತ್ರ ಒಳಗೊಂಡಿರುವುದಿಲ್ಲ, ಇದು ವಿಟಮಿನ್ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಅದು ನಿಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ.
ತೂಕ ಇಳಿಕೆಗೆ ಬೆಲ್ಲ ಹೇಗೆ ಸಹಾಯ ಮಾಡುತ್ತದೆ
ಬೆಲ್ಲವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ; 20 ಗ್ರಾಂ ಬೆಲ್ಲದಲ್ಲಿ 38 ಕ್ಯಾಲೋರಿಗಳಿವೆ. ನೈಸರ್ಗಿಕ ಸಿಹಿಕಾರಕವು ಎಲೆಕ್ಟ್ರೋಲೈಟ್ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತದೆ. ಆದರೆ ನೀವು ಅತಿಯಾಗಿ ಬೆಲ್ಲವನ್ನು ಸೇವಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಅದು ನಿಮ್ಮ ತೂಕ ಇಳಿಕೆಯ ಪ್ರಕ್ರಿಯೆಯನ್ನು ಹಿಮ್ಮುಖಗೊಳಿಸುತ್ತದೆ ಮತ್ತು ಹಾಳು ಮಾಡುತ್ತದೆ.
ಒಣದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ಮತ್ತು ಪ್ರಯೋಜನಗಳು
ನಾರಿನಂಶದಲ್ಲಿ ಸಮೃದ್ಧವಾಗಿರುವ ಒಣದ್ರಾಕ್ಷಿಗಳು ನಿಮ್ಮ ಹಸಿವನ್ನು ನೀಗಿಸುತ್ತದೆ, ಇದರಿಂದ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಒಣದ್ರಾಕ್ಷಿ ನೈಸರ್ಗಿಕ ಸಿಹಿಕಾರಕಗಳು ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಚಯಾಪಚಯವನ್ನು ಹೆಚ್ಚಿಸಲು ಮತ್ತು ತೂಕ ಇಳಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಒಣದ್ರಾಕ್ಷಿಗಳನ್ನು ಆಹಾರದಲ್ಲಿ ಶಾಮೀಲುಗೊಳಿಸಬಹುದು.
ಒಣದ್ರಾಕ್ಷಿ ಮತ್ತು ಬೆಲ್ಲದ ನೀರನ್ನು ಒಟ್ಟಿಗೆ ಸೇವಿಸುವುದು ಹೇಗೆ ಹೇಗೆ?
4-5 ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಒಂದು ಲೋಟ ಕಿಷ್ಮೀಶ್ ನೀರಿಗೆ 5 ಗ್ರಾಂ ಬೆಲ್ಲವನ್ನು ಹಾಕಿ. ಮೊದಲು ಖಾಲಿ ಹೊಟ್ಟೆಯಲ್ಲಿ ಬೆಲ್ಲ ತಿನ್ನಿ, ನಂತರ ನೀವು ತಯಾರಿಸಿದ ಕಿಷ್ಮೀಶ್-ಬೆಲ್ಲದ ನೀರು ಕುಡಿಯಿರಿ. ಇದನ್ನು ಪ್ರತಿದಿನ ಮಾಡುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಿಸಲು ಮತ್ತು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ.
ಮೊಸರಿನ ಜೊತೆಗೆ ಒಣದ್ರಾಕ್ಷಿಗಳನ್ನೂ ಸೇವಿಸುವುದು ಮತ್ತೊಂದು ವಿಧಾನವಾಗಿದೆ. ಮೊಸರಿನಲ್ಲಿ 4-5 ಒಣದ್ರಾಕ್ಷಿಗಳನ್ನು ಬೆರೆಸಿ, ಊಟದ ನಂತರ ಅದನ್ನು ಸೇವಿಸಿ. ಈ ಉಪಾಯ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-Body Detox: ದೇಹವನ್ನು ನಿರ್ವಿಷಗೊಳಿಸಿ, ನೈಸರ್ಗಿಕವಾಗಿ ರಕ್ತವನ್ನು ಶುದ್ಧೀಕರಿಸುತ್ತವೆ ಈ ಎಲೆಗಳು!
ಸಲಹೆ - ಬೆಲ್ಲ ಮತ್ತು ಒಣದ್ರಾಕ್ಷಿ ಎರಡೂ ತೂಕ ಇಳಿಕೆಗೆ ಪರಿಣಾಮಕಾರಿ ಮನೆಮದ್ದಾಗಿವೆ. ಆದರೆ ನೀವು ಅವುಗಳನ್ನು ಮಿತವಾಗಿ ಸೇವಿಸಿದರೆ ಮಾತ್ರ ಅವು ಕೆಲಸ ಮಾಡುತ್ತದೆ. ಎರಡು ಸೂಪರ್ಫುಡ್ಗಳಲ್ಲಿ ಯಾವುದಾದರೂ ಒಂದರ ಅತಿಯಾದ ಸೇವನೆ ತೂಕ ಹೆಚ್ಚಾಗಲು ಕಾರಣವಾಗಬಹುದು. ನೀವು ಮಧುಮೇಹಿಗಳಾಗಿದ್ದರೆ ಅಥವಾ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಈ ತೂಕ ಇಳಿಕೆಯ ಈ ಪರಿಹಾರವನ್ನು ಪ್ರಯತ್ನಿಸುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ-Diabetes Control: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಕ್ಷಣ ನಿಯಂತ್ರಣಕ್ಕೆ ತರುತ್ತವೆ ಈ ಎರಡು ಚಹಾಗಳು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.