ಜೀರ್ಣಕ್ರಿಯೆಗೆ ಬಹಳ ಉಪಯುಕ್ತವಂತೆ ಈ ಹಣ್ಣು ..!

Sapota Fruit : ಭಾರತದ ಪಶ್ಚಿಮ ಮತ್ತು ದಕ್ಷಿಣ ರಾಜ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಚಿಕು ಅಗ್ಗವಾಗಿ ಸಿಗುತ್ತದೆ. ಆದರೆ ಪೌಷ್ಟಿಕಾಂಶಗಳ ಮೂಲವಾಗಿದೆ. ಈ ಹಣ್ಣು ನಿಮ್ಮ ಮೂಳೆಗಳು, ಹೃದಯ, ಚರ್ಮ ಮತ್ತು ಶ್ವಾಸಕೋಶಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೇ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.   

Written by - Zee Kannada News Desk | Last Updated : Mar 24, 2023, 07:01 PM IST
  • ಪ್ರಕೃತಿ ದತ್ತವಾಗಿ ದೊರಕುವ ಎಲ್ಲ ಹಣ್ಣು ತರಕಾರಿಗಳಲ್ಲಿಯೂ ಉತ್ತಮ ಆರೋಗ್ಯವನ್ನು ನೀಡುವ ಅಂಶಗಳಿರುತ್ತವೆ.
  • ಎಲ್ಲ ಹಣ್ಣುಗಳು ಒಂದೊಂದು ರೀತಿಯ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತವೆ.
  • ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಬಹಳ ಉಪಯುಕ್ತವಂತೆ ಈ ಹಣ್ಣು ..!  title=

Benifits Of Sapota Fruit :  ಪ್ರಕೃತಿ ದತ್ತವಾಗಿ ದೊರಕುವ ಎಲ್ಲ ಹಣ್ಣು ತರಕಾರಿಗಳಲ್ಲಿಯೂ ಉತ್ತಮ ಆರೋಗ್ಯವನ್ನು ನೀಡುವ ಅಂಶಗಳಿರುತ್ತವೆ. ಆದರೆ ಅವುಗಳನ್ನು ನಾವು ಸರಿಯಾದ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಸೇವಿಸಬೇಕು. ಅಂದಾಗ ಅದರಿಂದ ಪ್ರಯೋಜನಗಳನ್ನು ಪಡೆಯಬಹುದು ಎಲ್ಲ ಹಣ್ಣುಗಳು ಒಂದೊಂದು ರೀತಿಯ ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತವೆ. 

ಚಿಕು (ಸಪೋಟಾ) ಇದು ಆರೋಗ್ಯಕ್ಕೆ ತುಂಬಾ ಅವಶ್ಯಕ : 
*ಚಿಕು ನಾವು ಸೇವಿಸುವ ಆಹಾರದಲ್ಲಿನ ಫೈಬರ್‌ ಅಂಶವನ್ನು ನಿಯಂತ್ರಿಸುವ ಕೆಲಸವವನ್ನು ಮಾಡುತ್ತದೆ.
*ಮಲಬದ್ಧತೆಯಿಂದ ಬಳಲುತ್ತೀರುವವರು ಈಹಣ್ಣನ್ನು ದಿನನಿತ್ಯ ಸೇವಿಸಿದರೆ ಅದರಿಂದ ಕ್ರಮೇಣ ಮುಕ್ತಿ ಪಡೆಯಬಹುದು. 
*ಈ ಹಣ್ಣಿನಲ್ಲಿ ಕರುಳಿನ ಆರೋಗ್ಯವನ್ನು ಸುಧಾರಿಸುವ ಫ್ಲೇವನಾಯ್ಡ್‌ಗಳು ಸಹ ಇವೆ.  
*ಇಂಟರ್ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ಪ್ರಕಾರ, ಚಿಕು ಉರಿಯೂತವನ್ನು ತಡೆಯುವಲ್ಲಿ ಸಹಕಾರಿಯಾಗುತ್ತದೆ. 
*ಸಪೋಟಾ ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
*ಒಟ್ಟಾರೆಯಾಗಿ ಚಿಕ್ಕು ಉತ್ತಮ ಆರೋಗ್ಯಕ್ಕೆ ಪೋಷಕಾಂಶಗಳನ್ನು ಹೊಂದಿದೆ. 

ಇದನ್ನೂ ಓದಿ-ನಿದ್ರೆಯ ಮಟ್ಟವನ್ನು ಹೆಚ್ಚಿಸುವ ಆಹಾರಗಳು ಇಲ್ಲಿವೆ ನೋಡಿ..!

ಸಪೋಟಾ ವಿಟಮಿನ್ ಸಿ ಮೂಲವಾಗಿದೆ, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನೀವು ಶೀತಯಿಂದ ಬಳಲುತ್ತಿದ್ದರೆ, ಚಿಕುಸ್ ತಿನ್ನುವುದು ನಿಮ್ಮ ಕಫದಿಂದ ಮೂಗು ಕಟ್ಟಿರುವುದನ್ನು ಸರಿಪಡಿಸುತ್ತದೆ. . ಈ ಹಣ್ಣನ್ನು ತಿನ್ನುವುದರಿಂದ ಸುಕ್ಕುಗಳನ್ನು ತಡೆಯಬಹುದು, ಏಕೆಂದರೆ ಇದು ಆಸ್ಕೋರ್ಬಿಕ್ ಆಮ್ಲ, ಪಾಲಿಫಿನಾಲ್ಗಳು ಮತ್ತು ಫ್ಲೇವನಾಯ್ಡ್ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಈ ಹಣ್ಣು ಹೊಂದಿದೆ. 

ಇದನ್ನೂ ಓದಿ-ಊಟಕ್ಕೆ ಮುಂಚೆ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News