ನವದೆಹಲಿ: ಜ್ಯೋತಿಷ್ಯದಲ್ಲಿ ಸೂರ್ಯನನ್ನು ಯಶಸ್ಸು, ಆರೋಗ್ಯ, ಆತ್ಮ ವಿಶ್ವಾಸದ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯನು ಗ್ರಹಗಳ ರಾಜ ಮತ್ತು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಈ ಬಾರಿ ಸೂರ್ಯನು ಮಾರ್ಚ್ 15ರಂದು ಮೀನ ರಾಶಿ ಪ್ರವೇಶಿಸಿದ್ದು, ಏಪ್ರಿಲ್ 14ರವರೆಗೆ ಈ ರಾಶಿಯಲ್ಲಿರುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಗಳಿಗೆ ತುಂಬಾ ಮಂಗಳಕರ ಫಲಿತಾಂಶ ನೀಡುತ್ತವೆ. ಮುಂದಿನ 23 ದಿನಗಳು ಯಾವ ರಾಶಿಯವರಿಗೆ ಶುಭವಾಗಲಿದೆ ಎಂದು ತಿಳಿಯಿರಿ.
ಈ ರಾಶಿಯವರಿಗೆ ಅಪಾರ ಸಂಪತ್ತು & ಯಶಸ್ಸು
ವೃಷಭ ರಾಶಿ: ವೃಷಭ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಹೆಚ್ಚಿನ ಲಾಭವಾಗಲಿದೆ. ಆರ್ಥಿಕ ಪ್ರಗತಿ ಇರುತ್ತದೆ, ಇದು ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ವೃತ್ತಿಯಲ್ಲಿ ದೊಡ್ಡ ಪ್ರಗತಿ ಕಾಣಬಹುದು. ಉನ್ನತ ಸ್ಥಾನ, ಪ್ರತಿಷ್ಠೆ ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.
ಮಿಥುನ ರಾಶಿ: ಸೂರ್ಯ ಸಂಚಾರವು ಮಿಥುನ ರಾಶಿಯವರಿಗೆ ಗೌರವ ಮತ್ತು ಪ್ರತಿಷ್ಠೆಯನ್ನು ತರುತ್ತದೆ. ಉದ್ಯೋಗಿಗಳಿಗೆ ಈ ಸಮಯ ಉತ್ತಮವಾಗಿರುತ್ತದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಸೂರ್ಯನ ಸಂಚಾರವು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ, ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಉದ್ಯೋಗ ಮತ್ತು ವ್ಯವಹಾರ ಎರಡಕ್ಕೂ ಇದು ಉತ್ತಮ ಸಮಯ.
ಇದನ್ನೂ ಓದಿ: ಶನಿ ಮತ್ತು ರಾಹುವಿನ ಅಶುಭ ಸಂಯೋಜನೆ: ಈ ರಾಶಿಯವರಿಗೆ ಮುಂದಿನ 7 ತಿಂಗಳು ಭಾರೀ ಸಂಕಷ್ಟ!
ತುಲಾ ರಾಶಿ: ಸೂರ್ಯನ ರಾಶಿ ಬದಲಾವಣೆಯು ತುಲಾ ರಾಶಿಯವರಿಗೆ ದೊಡ್ಡ ವಿಜಯವನ್ನು ತರುತ್ತದೆ. ನಿಮ್ಮ ಶತ್ರುಗಳು ಸೋಲಿಸಲ್ಪಡುತ್ತಾರೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದ್ದು, ಆದಾಯ ಹೆಚ್ಚಲಿದೆ. ಏಪ್ರಿಲ್ 14ರವರೆಗಿನ ಸಮಯವು ಈ ಜನರಿಗೆ ತುಂಬಾ ಒಳ್ಳೆಯದು.
ವೃಶ್ಚಿಕ ರಾಶಿ: ಸೂರ್ಯನ ಸಂಚಾರವು ವೃಶ್ಚಿಕ ರಾಶಿಯವರಿಗೆ ವ್ಯಾಪಾರದಲ್ಲಿ ಭಾರೀ ಲಾಭ ತರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಅದೃಷ್ಟದ ಬೆಂಬಲ ಸಿಗಲಿದೆ.
ಧನು ರಾಶಿ: ಏಪ್ರಿಲ್ 14ರವರೆಗೆ ಸೂರ್ಯನು ಜೀವನದಲ್ಲಿ ಸಂತೋಷವನ್ನು ನೀಡುತ್ತಾನೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಆದಾಯ ಹೆಚ್ಚಲಿದೆ. ಬೆಲೆಬಾಳುವ ವಸ್ತುವನ್ನು ಖರೀದಿಸುವ ಸಾಧ್ಯತೆಗಳಿವೆ.
ವೃಷಭ ರಾಶಿಯವರಿಗೆ ಸೂರ್ಯನ ಸಂಚಾರದಿಂದ ಹೆಚ್ಚಿನ ಲಾಭವಾಗಲಿದೆ ಸೂರ್ಯ ಸಂಚಾರವು ಮಿಥುನ ರಾಶಿಯವರಿಗೆ ಗೌರವ & ಪ್ರತಿಷ್ಠೆ ತರುತ್ತದೆ ಕರ್ಕಾಟಕ ರಾಶಿಯವರಿಗೆ ಸೂರ್ಯನ ಸಂಚಾರವು ತುಂಬಾ ಪ್ರಯೋಜನಕಾರಿ
ಇದನ್ನೂ ಓದಿ: ಹೊಸ ವರ್ಷದ ಆರಂಭಕ್ಕೆ ನಾಂದಿ ಹಾಡುವ ಯುಗಾದಿ ಹಬ್ಬ .. ಏನಿದರ ಮಹತ್ವ?
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.