Gold Price: ಯುಗಾದಿಗೆ ಚಿನ್ನ ಪ್ರಿಯರಿಗೆ ಬಂಗಾರದಂತಹ ಸುದ್ದಿ: 10 ಗ್ರಾಂ ಹಳದಿ ಲೋಹದ ಬೆಲೆ ಜಸ್ಟ್___!!

Gold and Silver Price Today: ಸೋಮವಾರ 5,530 ರೂ. ಇದ್ದ ಬಂಗಾರದ ಬೆಲೆಯಲ್ಲಿ ಇಂದು ರೂ, 50 ಇಳಿಕೆಯಾಗಿದೆ. ಎಂಟು ಗ್ರಾಂ ಮತ್ತು 10 ಗ್ರಾಂ ಕ್ರಮವಾಗಿ ರೂ.47,824 ಮತ್ತು ರೂ.59,780 ಇದೆ. ಈ ಮಧ್ಯೆ ಬೆಳ್ಳಿಯ ದರಗಳು ಕೂಡ ಇಂದು ಅಲ್ಪ ಇಳಿಕೆ ಕಂಡಿವೆ.

Written by - Bhavishya Shetty | Last Updated : Mar 21, 2023, 04:25 PM IST
    • ಗುಡ್‌ ರಿಟರ್ನ್ಸ್‌ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಇಂದು ಬಂಗಾರದ ಬೆಲೆ ಇಳಿಕೆಯಾಗಿದೆ
    • ಎಂಟು ಗ್ರಾಂ ಮತ್ತು 10 ಗ್ರಾಂ 22 ಕ್ಯಾರೆಟ್ ಚಿನ್ನದ ದರಗಳಲ್ಲಿ ರೂ. 400 ರಿಂದ ರೂ. 500 ಇಳಿಕೆ ಕಂಡಿವೆ.
    • ಪ್ರಸ್ತುತ ಬೆಲೆ ಕ್ರಮವಾಗಿ ರೂ. 43,840 ಮತ್ತು ರೂ, 54,800 ರಷ್ಟಿದೆ.
Gold Price: ಯುಗಾದಿಗೆ ಚಿನ್ನ ಪ್ರಿಯರಿಗೆ ಬಂಗಾರದಂತಹ ಸುದ್ದಿ: 10 ಗ್ರಾಂ ಹಳದಿ ಲೋಹದ ಬೆಲೆ ಜಸ್ಟ್___!! title=
Gold price

Gold Price Today: ಗುಡ್‌ ರಿಟರ್ನ್ಸ್‌ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸೋಮವಾರ 5,530 ರೂ. ಇದ್ದ ಬಂಗಾರದ ಬೆಲೆಯಲ್ಲಿ ಇಂದು ರೂ, 50 ಇಳಿಕೆಯಾಗಿದೆ. ಈ ಮೂಲಕ 22-ಕ್ಯಾರೆಟ್ ಚಿನ್ನದ ಗ್ರಾಂ ಬೆಲೆ 5,480 ರೂ. ಆಗಿದೆ,  

ಎಂಟು ಗ್ರಾಂ ಮತ್ತು 10 ಗ್ರಾಂ 22 ಕ್ಯಾರೆಟ್ ಚಿನ್ನದ ದರಗಳಲ್ಲಿ ರೂ. 400 ರಿಂದ ರೂ. 500 ಇಳಿಕೆ ಕಂಡಿವೆ. ಪ್ರಸ್ತುತ ಬೆಲೆ ಕ್ರಮವಾಗಿ ರೂ. 43,840 ಮತ್ತು ರೂ, 54,800 ರಷ್ಟಿದೆ.

ಇದನ್ನೂ ಓದಿ: Hyundai Creta: ಕೇವಲ 8 ಲಕ್ಷ ರೂ.ಗಳಲ್ಲಿ ನಿಮ್ಮದಾಗಲಿದೆ ಹ್ಯುಂಡೈ ಕ್ರೆಟಾ!

ಇಂದು 24 ಕ್ಯಾರೆಟ್ ಚಿನ್ನದ ಬೆಲೆಯೂ ಕುಸಿದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 5,978 ಆಗಿದ್ದರೆ ಎಂಟು ಗ್ರಾಂ ಮತ್ತು 10 ಗ್ರಾಂ ಕ್ರಮವಾಗಿ ರೂ.47,824 ಮತ್ತು ರೂ.59,780 ಇದೆ. ಅಲ್ಲದೆ, 100 ಗ್ರಾಂ 24 ಕ್ಯಾರೆಟ್ ಚಿನ್ನದ ದರ ರೂ.5,97,800 ಆಗಿದೆ.

ಗುಡ್‌ ರಿಟರ್ನ್ಸ್ ಪ್ರಕಾರ, ಸೋಮವಾರದಿಂದ 24-ಕ್ಯಾರೆಟ್ ಚಿನ್ನ ಒಂದು ಗ್ರಾಂ, ಎಂಟು ಗ್ರಾಂ, 10 ಗ್ರಾಂ ಮತ್ತು 100 ಗ್ರಾಂಗಳ ಬೆಲೆಗಳು ಕ್ರಮವಾಗಿ ರೂ. 54, ರೂ. 432, ರೂ.540 ಮತ್ತು ರೂ.5,400ರಷ್ಟು ಇಳಿಕೆ ಕಂಡಿವೆ.

ಮಾರ್ಚ್ 22 ರಂದು ಫೆಡರಲ್ ರಿಸರ್ವ್ ನೀತಿ ಸಭೆಯ ಫಲಿತಾಂಶಕ್ಕೆ ಮುಂಚಿತವಾಗಿ ಇಂದು (ಮಾರ್ಚ್ 21, ಮಂಗಳವಾರ) ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಕ್ರಮೇಣ ಇಳಿಕೆಯಾಗಿವೆ. ಈ ಮಧ್ಯೆ ಬೆಳ್ಳಿಯ ದರಗಳು ಕೂಡ ಇಂದು ಅಲ್ಪ ಇಳಿಕೆ ಕಂಡಿವೆ.

ಇದನ್ನೂ ಓದಿ: Indian Railways: ರೋಜಗಾರ್ ಮೇಳದಲ್ಲಿ 50 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಣೆ

ಎಚ್‌ ಡಿ ಎಫ್‌ ಸಿ ಸೆಕ್ಯುರಿಟೀಸ್ ಪ್ರಕಾರ, ಸೋಮವಾರ (ಮಾರ್ಚ್ 20) ಚಿನ್ನದ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 10 ಗ್ರಾಂಗೆ ರೂ. 60,100 ರಷ್ಟಿತ್ತು. ಇದು ಜೀವಮಾನದ ಗರಿಷ್ಠ ಮಟ್ಟವನ್ನು ಮುಟ್ಟಿದೆ ಎಂದು ಹೇಳಲಾಗಿತ್ತು. ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹ ಪ್ರತಿ 10 ಗ್ರಾಂಗೆ 58,700 ರೂ. ಇತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News