ಬೆಂಗಳೂರು: ನಾವು ಉರಿ, ನಂಜುಗಳನ್ನು ನೀಡುವವರಲ್ಲ, ಭವಿಷ್ಯ ನೀಡುವವರು ಎಂದು ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಟಿಪ್ಪು ಸುಲ್ತಾನ್ ಕೊಂದವರು ಉರಿಗೌಡ, ನಂಜೇಗೌಡ ಎನ್ನುತ್ತಿರುವ ಬಿಜೆಪಿ ರಾಜಕೀಯಕ್ಕಾಗಿ ಕಲ್ಪಿತ ಹೆಸರುಗಳ ಸೃಷ್ಟಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದೇ ವಿಚಾರವಾಗಿ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನಾವು ಯುವಕರಿಗೆ ತ್ರಿಶೂಲದೀಕ್ಷೆ ಕೊಡುವವರಲ್ಲ, ವಿದ್ಯಾದೀಕ್ಷೆ ಕೊಡುವವರು. ನಾವು ಯುವಕರಿಗೆ ಕೋಮು ದ್ವೇಷ ತುಂಬುವವರಲ್ಲ, ಬದುಕಿನಲ್ಲಿ ಆತ್ಮವಿಶ್ವಾಸ ತುಂಬುವವರು. ನಾವು ಯುವಕರ ಕೈಗೆ ಕಲ್ಲು, ಲಾಠಿ ನೀಡುವವರಲ್ಲ, ಸ್ವಾಭಿಮಾನ, ಸ್ವಾವಲಂಬನೆಯ ದಾರಿ ತೋರುವವರು. ನಾವು ಉರಿ, ನಂಜುಗಳನ್ನು ನೀಡುವವರಲ್ಲ, ಭವಿಷ್ಯ ನೀಡುವವರು’ ಎಂದು ಟ್ವೀಟ್ ಮಾಡಿದೆ.
ನಾವು ಯುವಕರಿಗೆ ತ್ರಿಶೂಲದೀಕ್ಷೆ ಕೊಡುವವರಲ್ಲ,
ವಿದ್ಯಾದೀಕ್ಷೆ ಕೊಡುವವರು.ನಾವು ಯುವಕರಿಗೆ ಕೋಮು ದ್ವೇಷ ತುಂಬುವವರಲ್ಲ, ಬದುಕಿನಲ್ಲಿ ಆತ್ಮವಿಶ್ವಾಸ ತುಂಬುವವರು.
ನಾವು ಯುವಕರ ಕೈಗೆ ಕಲ್ಲು, ಲಾಠಿ ನೀಡುವವರಲ್ಲ, ಸ್ವಾಭಿಮಾನ, ಸ್ವಾವಲಂಬನೆಯ ದಾರಿ ತೋರುವವರು.
ನಾವು ಉರಿ, ನಂಜುಗಳನ್ನು ನೀಡುವವರಲ್ಲ, ಭವಿಷ್ಯ ನೀಡುವವರು.
ನಿರೀಕ್ಷಿಸಿ...
— Karnataka Congress (@INCKarnataka) March 20, 2023
ಇದನ್ನೂ ಓದಿ: ಹನಿ ಗ್ಯಾಂಗ್‌ನಿಂದ ʼಮಂಚಕ್ಕೆ ಕರೆದು ಮುಂಜಿʼ ಮಾಡಿಸುವುದಾಗಿ ಧಮ್ಕಿ : ಉದ್ಯಮಿ ಜಸ್ಟ್ ಮಿಸ್
‘ಯುವಸಮುದಾಯದ ಧ್ವನಿಯಾಗಿ, ಭರವಸೆಯಾಗಿ, ಬೆಳಕಾಗಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಇಂದು ಮತ್ತೊಮ್ಮೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಈ ಬಾರಿ ಜೋಡಿಸುವುದು ಛಿದ್ರವಾಗಿರುವ ಯುವಸಮುದಾಯದ ಭವಿಷ್ಯದ ಕನಸುಗಳನ್ನು. ಕತ್ತಲಾವರಿಸಿದ ಯುವ ಸಮುದಾಯದ ಬದುಕಿಗೆ ಬೆಳಕೊಂದನ್ನು ತರುತ್ತಿದ್ದಾರೆ’ ಎಂದು ಕಾಂಗ್ರೆಸ್ ಹೇಳಿದೆ.
ಭ್ರಷ್ಟ ಬಿಜೆಪಿ ಸರ್ಕಾರದಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆದ 25 ಲಕ್ಷಕ್ಕೂ ಅಧಿಕ ಪದವೀಧರ ಯುವ ಸಮುದಾಯದ ನಿರೀಕ್ಷೆ ಬತ್ತಿ ಹೋಗಿದೆ. 54 ಸಾವಿರ PSI ಹಗರಣದ ಸಂತ್ರಸ್ತರಿದ್ದಾರೆ. PSI, KPTCL, KMF ಸೇರಿದಂತೆ ಎಲ್ಲದರಲ್ಲೂ ಹುದ್ದೆ ಮಾರಾಟದ ಹಗರಣ. ನೊಂದ ಯುವ ಸಮುದಾಯಕ್ಕೆ ಕಾಂಗ್ರೆಸ್ ಬೆಳಕೊಂದನ್ನು ನೀಡಲಿದೆ. ನಿರೀಕ್ಷಿಸಿ...’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಭ್ರಷ್ಟ ಬಿಜೆಪಿ ಸರ್ಕಾರದಿಂದಾಗಿ
◆ಸ್ಪರ್ಧಾತ್ಮಕ ಪರೀಕ್ಷೆ ಬರೆದ 25 ಲಕ್ಷಕ್ಕೂ ಅಧಿಕ ಪದವೀಧರ ಯುವ ಸಮುದಾಯದ ನಿರೀಕ್ಷೆ ಬತ್ತಿ ಹೋಗಿದೆ.
◆54 ಸಾವಿರ PSI ಹಗರಣದ ಸಂತ್ರಸ್ತರಿದ್ದಾರೆ.
◆PSI, KPTCL, KMF ಸೇರಿದಂತೆ ಎಲ್ಲದರಲ್ಲೂ ಹುದ್ದೆ ಮಾರಾಟದ ಹಗರಣ.
ನೊಂದ ಯುವ ಸಮುದಾಯಕ್ಕೆ ಕಾಂಗ್ರೆಸ್ ಬೆಳಕೊಂದನ್ನು ನೀಡಲಿದೆ.
ನಿರೀಕ್ಷಿಸಿ...
— Karnataka Congress (@INCKarnataka) March 20, 2023
ಇದನ್ನೂ ಓದಿ: ಜಿಲ್ಲಾಧಿಕಾರಿ ಕಛೇರಿ ಮೇಲೆ ನಿಂತು ಆಜಾನ್ ಕೂಗಿದ ಯುವಕ ...!
ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವಿಲ್ಲ,
ಪದವೀಧರ ಯುವ ಸಮುದಾಯ ಕಂಗಾಲಾಗಿದೆ.ರಾಜ್ಯದ ಸಮರ್ಥ ಮನವಸಂಪನ್ಮೂಲವು ಬಳಕೆಯಾಗದೆ ವ್ಯರ್ಥವಾಗುತ್ತಿದೆ.
ಯುವ ಸಮುದಾಯಕ್ಕೆ ಈಗ ಬೇಕಿರುವುದು ಭರವಸೆ, ಭವಿಷ್ಯ, ಸಂಪಾದನೆ.
ಕಾಂಗ್ರೆಸ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲಿದೆ, ಯುವಕರಲ್ಲಿ ಭರವಸೆ ಮೂಡಿಸುವ ಪ್ರಯತ್ನ ಮಾಡಲಿದೆ.
ನಿರೀಕ್ಷಿಸಿ...
— Karnataka Congress (@INCKarnataka) March 20, 2023
‘ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವಿಲ್ಲ, ಪದವೀಧರ ಯುವ ಸಮುದಾಯ ಕಂಗಾಲಾಗಿದೆ. ರಾಜ್ಯದ ಸಮರ್ಥ ಮನವಸಂಪನ್ಮೂಲವು ಬಳಕೆಯಾಗದೆ ವ್ಯರ್ಥವಾಗುತ್ತಿದೆ. ಯುವ ಸಮುದಾಯಕ್ಕೆ ಈಗ ಬೇಕಿರುವುದು ಭರವಸೆ, ಭವಿಷ್ಯ, ಸಂಪಾದನೆ. ಕಾಂಗ್ರೆಸ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲಿದೆ, ಯುವಕರಲ್ಲಿ ಭರವಸೆ ಮೂಡಿಸುವ ಪ್ರಯತ್ನ ಮಾಡಲಿದೆ’ ಎಂದು ಕಾಂಗ್ರೆಸ್ ಭರವಸೆ ನೀಡಿದೆ.
ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗವಿಲ್ಲ,
ಪದವೀಧರ ಯುವ ಸಮುದಾಯ ಕಂಗಾಲಾಗಿದೆ.ರಾಜ್ಯದ ಸಮರ್ಥ ಮನವಸಂಪನ್ಮೂಲವು ಬಳಕೆಯಾಗದೆ ವ್ಯರ್ಥವಾಗುತ್ತಿದೆ.
ಯುವ ಸಮುದಾಯಕ್ಕೆ ಈಗ ಬೇಕಿರುವುದು ಭರವಸೆ, ಭವಿಷ್ಯ, ಸಂಪಾದನೆ.
ಕಾಂಗ್ರೆಸ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲಿದೆ, ಯುವಕರಲ್ಲಿ ಭರವಸೆ ಮೂಡಿಸುವ ಪ್ರಯತ್ನ ಮಾಡಲಿದೆ.
ನಿರೀಕ್ಷಿಸಿ...
— Karnataka Congress (@INCKarnataka) March 20, 2023
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.