ಕರ್ನಾಟಕದ ಇತಿಹಾಸದಲ್ಲಿ 25 ಸಿಎಂಗಳು ಬಂದರೂ ಸಹ, 5 ವರ್ಷ ಪೂರ್ಣಗೊಳಿಸಿದ್ದು ಮೂವರು ಮಾತ್ರ: ಯಾರವರು ಗೊತ್ತಾ?

Chief Minister of Karnataka who completed 5 years: ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಇಲ್ಲಿ ನೀಡಲಾಗಿದೆ. ಇದರಲ್ಲಿ ಮೂವರು ಸಹ ಕಾಂಗ್ರೆಸ್’ನವರೇ ಆಗಿದ್ದಾರೆ. ಈ ವರದಿಯಲ್ಲಿ ಮೈಸೂರು ಅವಧಿ, ಮೈಸೂರು ಪುನರ್ಚನೆ ಆದ ನಂತರದ ಮತ್ತು ಕರ್ನಾಟಕ ಎಂದು ಮರುನಾಮಕರಣ ಬಳಿಕ ನೇಮಕಗೊಂಡ ಮುಖ್ಯಮಂತ್ರಿಗಳ ವಿವರವನ್ನು ನೀಡಲಾಗಿದೆ.

Written by - Bhavishya Shetty | Last Updated : Mar 19, 2023, 09:20 PM IST
    • ಕರ್ನಾಟಕದ ಇತಿಹಾಸದಲ್ಲಿ 25 ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ.
    • ಅದರಲ್ಲಿ ಸಂಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಮರ್ಥರಾಗಿದ್ದು ಕೇವಲ ಮೂವರಿಗೆ ಮಾತ್ರ.
    • ಅವರೆಲ್ಲರೂ ಕಾಂಗ್ರೆಸ್‌’ನಿಂದ ಆಯ್ಕೆಯಾದವರು.
ಕರ್ನಾಟಕದ ಇತಿಹಾಸದಲ್ಲಿ 25 ಸಿಎಂಗಳು ಬಂದರೂ ಸಹ, 5 ವರ್ಷ ಪೂರ್ಣಗೊಳಿಸಿದ್ದು ಮೂವರು ಮಾತ್ರ: ಯಾರವರು ಗೊತ್ತಾ? title=
CM of Karnataka

Karnataka CM List: ಕರ್ನಾಟಕದ ಇತಿಹಾಸದಲ್ಲಿ 25 ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಅದರಲ್ಲಿ ಸಂಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಮರ್ಥರಾಗಿದ್ದು ಕೇವಲ ಮೂವರಿಗೆ ಮಾತ್ರ. ಅವರೆಲ್ಲರೂ ಕಾಂಗ್ರೆಸ್‌’ನಿಂದ ಆಯ್ಕೆಯಾದವರು.

ಎಸ್ ನಿಜಲಿಂಗಪ್ಪ (1962-68), ಡಿ ದೇವರಾಜ ಅರಸು (1972-77) ಮತ್ತು ಸಿದ್ದರಾಮಯ್ಯ (2013-2018) ತಮ್ಮ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ ಕರ್ನಾಟಕದ ಮುಖ್ಯಮಂತ್ರಿಗಳು. ಬಿಜೆಪಿ ಮತ್ತು ಕುಮಾರಸ್ವಾಮಿಯವರ ಜೆಡಿಎಸ್‌ನಿಂದ ಯಾವುದೇ ಮುಖ್ಯಮಂತ್ರಿ ಕರ್ನಾಟಕದಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: Ugadi 2023: ಈ ರಾಶಿಯವರ ಬಾಳಲ್ಲಿ ಅದೃಷ್ಟ ಹೊತ್ತು ಬರಲಿದೆ ಯುಗಾದಿ, ಮುಟ್ಟಿದ್ದೆಲ್ಲ ಚಿನ್ನವಾಗುವ ವರ್ಷ

ಮೈಸೂರು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅವಧಿ:

ಕೆ. ಚೆಂಗಲರಾಯ ರೆಡ್ಡಿ-4 ವರ್ಷಗಳು, 157 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಕೆಂಗಲ್ ಹನುಮಂತಯ್ಯ- 4 ವರ್ಷ 142 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಕಡಿದಾಳ್ ಮಂಜಪ್ಪ 73 ದಿನಗಳು

 

ಮೈಸೂರಿನ ಮುಖ್ಯಮಂತ್ರಿ (ರಾಜ್ಯ ಪುನರ್ರಚನೆಯ ನಂತರ)

ಎಸ್.ನಿಜಲಿಂಗಪ್ಪ 1 ವರ್ಷ, 197 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಬಿ.ಡಿ ಜಟ್ಟಿ 3 ವರ್ಷಗಳು, 302 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಎಸ್. ಆರ್. ಕಂಠಿ 99 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಎಸ್.ನಿಜಲಿಂಗಪ್ಪ 5 ವರ್ಷ, 343 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ವೀರೇಂದ್ರ ಪಾಟೀಲ್ ಚಿಂಚೋಳಿ 2 ವರ್ಷ, 293 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)–

ರಾಷ್ಟ್ರಪತಿ ಆಳ್ವಿಕೆ 1 ವರ್ಷ, 1 ದಿನ

ಡಿ.ದೇವರಾಜ್ ಅರಸ್ 1 ವರ್ಷ, 225 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

 

ಕರ್ನಾಟಕದ ಮುಖ್ಯಮಂತ್ರಿಗಳು:

ಡಿ.ದೇವರಾಜ್ ಅರಸ್ 4 ವರ್ಷ, 91 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ರಾಷ್ಟ್ರಪತಿ ಆಳ್ವಿಕೆ  59 ದಿನಗಳು

ಡಿ.ದೇವರಾಜ್ ಅರಸು 1 ವರ್ಷ, 318 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಆರ್. ಗುಂಡೂರಾವ್ 2 ವರ್ಷ, 363 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ರಾಮಕೃಷ್ಣ ಹೆಗಡೆ 5 ವರ್ಷ, 216 ದಿನಗಳು (2 ಬಾರಿ ಆಯ್ಕೆಎ ಪರಿಗಣಿಸಿ) ಜನತಾ ಪಕ್ಷ

ಸೋಮಪ್ಪ ರಾಯಪ್ಪ ಬೊಮ್ಮಾಯಿ  281 ದಿನಗಳು (ಜನತಾ ಪಕ್ಷ)

ರಾಷ್ಟ್ರಪತಿ ಆಳ್ವಿಕೆ 193 ದಿನಗಳು

ವೀರೇಂದ್ರ ಪಾಟೀಲ್ ಚಿಂಚೋಳಿ 314 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ರಾಷ್ಟ್ರಪತಿ ಆಳ್ವಿಕೆ ರಾಷ್ಟ್ರಪತಿ ಆಳ್ವಿಕೆ - 7 ದಿನಗಳು

ಎಸ್.ಬಂಗಾರಪ್ಪ 2 ವರ್ಷ, 33 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ವೀರಪ್ಪ ಮೊಯ್ಲಿ 2 ವರ್ಷ, 22 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಎಚ್.ಡಿ.ದೇವೇಗೌಡ 1 ವರ್ಷ, 172 ದಿನಗಳು (ಜನತಾ ದಳ)

J. H. ಪಟೇಲ್ ಚನ್ನಗಿರಿ 3 ವರ್ಷ, 133 ದಿನಗಳು(ಜನತಾ ದಳ)

ಎಸ್ ಎಂ ಕೃಷ್ಣ ಮದ್ದೂರ್ 4 ವರ್ಷ,  230 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಧರಂ ಸಿಂಗ್ ಜೇವರ್ಗಿ 1 ವರ್ಷ, 251 ದಿನಗಳು (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಎಚ್.ಡಿ.ಕುಮಾರಸ್ವಾಮಿ 1 ವರ್ಷ, 253 ದಿನಗಳು ಜನತಾ ದಳ (ಜಾತ್ಯತೀತ)

ರಾಷ್ಟ್ರಪತಿ ಆಳ್ವಿಕೆ 35 ದಿನಗಳು

ಬಿ.ಎಸ್. ಯಡಿಯೂರಪ್ಪ 7 ದಿನಗಳು (ಭಾರತೀಯ ಜನತಾ ಪಕ್ಷ)

ರಾಷ್ಟ್ರಪತಿ ಆಳ್ವಿಕೆ 191 ದಿನಗಳು

ಬಿ. ಎಸ್. ಯಡಿಯೂರಪ್ಪ 3 ವರ್ಷ, 67 ದಿನಗಳು (ಭಾರತೀಯ ಜನತಾ ಪಕ್ಷ)

ಡಿ ವಿ ಸದಾನಂದ ಗೌಡ 342 ದಿನಗಳು (ಭಾರತೀಯ ಜನತಾ ಪಕ್ಷ)

ಜಗದೀಶ್ ಶೆಟ್ಟರ್ 305 ದಿನಗಳು (ಭಾರತೀಯ ಜನತಾ ಪಕ್ಷ)

ಸಿದ್ದರಾಮಯ್ಯ 5 ವರ್ಷ 4 ದಿನ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಬಿ.ಎಸ್.ಯಡಿಯೂರಪ್ಪ 6 ದಿನಗಳು (ಭಾರತೀಯ ಜನತಾ ಪಕ್ಷ)

H. D. ಕುಮಾರಸ್ವಾಮಿ 1 ವರ್ಷ, 64 ದಿನಗಳು ಜನತಾ ದಳ (ಜಾತ್ಯತೀತ)

ಬಿ ಎಸ್ ಯಡಿಯೂರಪ್ಪ 2 ವರ್ಷ, 2 ದಿನಗಳು (ಭಾರತೀಯ ಜನತಾ ಪಕ್ಷ)

ಬಸವರಾಜ ಬೊಮ್ಮಾಯಿ – ಪ್ರಸ್ತುತ ಅಧಿಕಾರ (ಭಾರತೀಯ ಜನತಾ ಪಕ್ಷ)

ಇದನ್ನೂ ಓದಿ: ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ; ಸಿಎಂ ಬೊಮ್ಮಾಯಿಯವರಿಗೆ ಸನ್ಮಾನ

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News