Hindu New Year 2023: ಚೈತ್ರ ನವರಾತ್ರಿಯ ಪ್ರತಿಪದ ತಿತಿಯಿಂದ ಹಿಂದೂ ಹೊಸ ವರ್ಷ ಆರಂಭಗೊಳ್ಳುತ್ತದೆ. ಹಿಂದೂ ಹೊಸ ವರ್ಷ ಆರಂಭಗೊಳ್ಳುತ್ತಿದ್ದಂತೆ ವಿಕ್ರಮ ಸಂವತ್ಸರ ಬದಲಾಗುತ್ತದೆ, ವಿಕ್ರಮ ಸಂವತ್ಸರ 2080 ರ ಲಕ್ಕಿ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Ugadi 2023: ಚೈತ್ರ ನವರಾತ್ರಿಗ ಮೊದಲ ದಿನದಿಂದಲೇ ಹಿಂದೂ ಹೊಸವರ್ಷ ಅಂದರೆ ಯುಗಾದಿ 2023 ಆರಂಭಗೊಳ್ಳುತ್ತದೆ. ಈ ವರ್ಷ ವಿಕ್ರಮ ಸಂವತ್ಸರ ಮಾರ್ಚ್ 22 ರಿಂದ ಆರಂಭಗೊಳ್ಳುತ್ತಿದೆ. ಜೋತಿಷ್ಯ ವಿದ್ವಾಂಸರ ಪ್ರಕಾರ ಹಿಂದೂ ಹೊಸ ವರ್ಷದ ಸಂದರ್ಭದಲ್ಲಿ ಗ್ರಹಗಳ ಸ್ಥಿತಿಗತಿ ಹಲವು ರಾಶಿಗಳ ಪಾಲಿಗೆ ಲಾಭಕಾರಿ ಸಾಬೀತಾಗಲಿದೆ. ವೃತ್ತಿ ಜೀವನ, ಆರ್ಥಿಕ, ವ್ಯಾಪಾರ ಹಾಗೂ ಹಣಕಾಸಿನ ವೇದಿಕೆಗಳಲ್ಲಿ ನಾಲ್ಕು ರಾಶಿಗಳ ಜನರಿಗೆ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಗ್ರಹಗಳ ಸ್ಥಿತಿಗತಿ ಹೇಗಿರಲಿದೆ?
ಗ್ರಹಗಳ ನ್ಯಾಯ ದೇವರು ಶನಿ ತನ್ನ ಮೂಲ ತ್ರಿಕೋನ ರಾಶಿ ಕುಂಭ ರಾಶಿಯಲ್ಲಿ 30 ವರ್ಷಗಳ ಬಳಿಕ ವಿರಾಜಮಾನನಾಗಿದ್ದಾನೆ. ರಾಹು ಹಾಗೂ ಶುಕ್ರ ಮೇಷ ರಾಶಿಯಲ್ಲಿದ್ದಾರೆ. ಕೇತು ತುಲಾ ರಾಶಿಯಲ್ಲಿದ್ದಾನೆ. ಮಂಗಳ ಗ್ರಹ ತನ್ನ ಶತ್ರುವಿನ ರಾಶಿಯಾಗಿರುವ ಮಿಥುನ ರಾಶಿಯಲ್ಲಿ ಮಾರ್ಚ್ 13 ರಂದು ಗೋಚರಿಸಿದ್ದಾನೆ. ಇದಲ್ಲದೆ ಮೀನ ರಾಶಿಯಲ್ಲಿ ಸೂರ್ಯ, ಬುಧ ಹಾಗೂ ದೇವಗುರು ಬೃಹಸ್ಪತಿಯ ಮೈತ್ರಿ ನೆರವೇರಿದೆ. ವಿಶೇಷ ಎಂದರೆ ಸುದೀರ್ಘ 12 ವರ್ಷಗಳ ಬಳಿಕ ಗುರು ತನ್ನ ಸ್ವರಾಶಿಯಾಗಿರುವ ಮೀನ ರಾಶಿಯಲ್ಲಿ ಸಂಪೂರ್ಣ ಒಂದು ವರ್ಷ ವಿರಾಜಮಾನನಾಯಿರಲಿದ್ದಾನೆ. ಜೋತಿಷ್ಯ ಪಂಡಿತ ಪ್ರಕಾರ ಗ್ರಹಗಳ ಈ ಸ್ಥಿತಿ ಹಲವು ರಾಶಿಗಳ ಜಾತಕದವರ ಪಾಲಿಗೆ ಶುಭ ಫಲಿತಾಂಶಗಳನ್ನು ಹೊತ್ತು ತರಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಇದನ್ನೂ ಓದಿ-Lucky Girls: ಬಾಳಸಂಗಾತಿಯ ಮೇಲೆ ಪ್ರೀತಿಯ ಸುರಿಮಳೆಗೈಯುತ್ತಾರೆ ಈ ರಾಶಿಯ ಹುಡುಗಿಯರು!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
4. ಧನು ರಾಶಿ: ಧನು ರಾಶಿಯ ಜಾತಕದವರಿಗೆ ವಿಕ್ರಮ್ ಸಂವತ್ಸರ 2080 ಲಾಭಕಾರಿ ಸಾಬೀತಾಗಲಿದೆ. ಆದಾಯದಲ್ಲಿ ಹೊಸ ಮಾರ್ಗಗಳನ್ನು ಕಂಡುಕೊಳ್ಳುವಿರಿ, ಹಳೆ ಮಾರ್ಗಗಳಿಂದಲೂ ಕೂಡ ನಿಮಗೆ ಧನ ಪ್ರಾಪ್ತಿಯಾಗಲಿದೆ. ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಲಿದೆ. ಕುಟುಂಬದ ಜೊತೆಗೆ ಒಳ್ಳೆಯ ಕಾಲ ಕಳೆಯುವಿರಿ. ನೌಕರಿಯಲ್ಲಿ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ, (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
1. ಮಿಥುನ ರಾಶಿ: ಹಿಂದೂ ಹೊಸ ವರ್ಷ ಮಿಥುನ ರಾಶಿಯ ಜಾತಕದವರ ವೃತ್ತಿಜೀವನದಲ್ಲಿ ಅಪಾರ ಯಶಸ್ಸನ್ನು ತರಲಿದೆ. ನೌಕರ ವರ್ಗದವರಿಗೆ ಪ್ರೋಮೋಷನ್, ಬಡ್ತಿ ಇತ್ಯಾದಿಗಳನ್ನು ತರಲಿದೆ. ಈ ಅವಧಿಯಲ್ಲಿ ನಿಮಗೆ ಹಲವು ಶುಭ ಸಮಾಚಾರಗಳು ಪ್ರಾಪ್ತಿಯಾಗಳಿವೆ. ಪಾರ್ಟ್ನರ್ಶಿಪ್ ನಲ್ಲಿ ಮಾಡಲಾದ ಕೆಲಸಗಳು ನಿಮಗೆ ಅಪಾರ ಲಾಭವನ್ನು ತನು ಕೊಡಲಿವೆ. ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರಲಿದೆ. ಭಾಗ್ಯದ ಬಲದಿಂದ ನಿಮಗೆ ಅಪಾರ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.
2. ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರ ಪಾಲಿಗೆ ಹಿಂದೂ ಹೊಸವರ್ಷ ಆರ್ಥಿಕ ವೇದಿಕೆಯಲ್ಲಿ ಅಪಾರ ಲಕ್ಕಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗಲಿದೆ. ವೆಚ್ಚದ ಮೇಲೆ ನಿಯಂತ್ರಣ ಅವಶ್ಯಕ, ಧೈರ್ಯದಿಂದ ಮುಂದಕ್ಕೆ ಸಾಗಿ. ಕುಟುಂಬದ ಸಾಥ್ ನಿಮಗೆ ಸಿಗಲಿದೆ. ನೌಕರಿಯಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ.
3. ತುಲಾ ರಾಶಿ: ತುಲಾ ರಾಶಿಯ ಜಾತಕದವರಿಗೆ ಹಿಂದೂ ಹೊಸ ವರ್ಷ ಶುಭ ಫಲದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ಗುರಿ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಶತ್ರುಗಳ ಮೇಲೆ ಹಿಡಿತ ಸಾಧಿಸುವಿರಿ. ನಿಶ್ಚಿತವಾಗಿ ನಿಮಗೆ ಈ ಅವಧಿಯಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಘನತೆ-ಗೌರವ ಹೆಚ್ಚಾಗಲಿದೆ.