Kabzaa box office collection day 1 update: ಉಪೇಂದ್ರ , ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಅಭಿನಯದ ಕಬ್ಜ ನಿನ್ನೆ ಥಿಯೇಟರ್‌ಗಳಲ್ಲಿ ಭರ್ಜರಿಯಾಗಿ ತೆರೆಕಂಡಿತು. ಚಿತ್ರಕ್ಕೆ ಆರಂಭಿಕ ಪ್ರತಿಕ್ರಿಯೆ ಸ್ವಲ್ಪ ಕಡಿಮೆಯಾಗಿದೆ ಆದರೂ ಕ್ರೇಜ್ ಹೆಚ್ಚಾಗಿದೆ. ಬಹುನಿರೀಕ್ಷಿತ ಕಬ್ಜ ಸಿನಿಮಾ ಸುಮಾರು 4 ಸಾವಿರ ಸ್ಕ್ರೀನ್‌ಗಳಲ್ಲಿ ನಿನ್ನೆ ರಿಲೀಸ್ ಆಗಿದೆ. ಕಬ್ಜ ಗಲ್ಲಾಪೆಟ್ಟಿಯಲ್ಲೂ ಸಖತ್ ಕಲೆಕ್ಷನ್ ಮಾಡಿದ್ದು, 54 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಕರ್ನಾಟಕದಲ್ಲಿ 26 ಕೋಟಿ ಕಲೆಹಾಕಿದೆ.
ಆರಂಭಿಕ ವರದಿಗಳ ಪ್ರಕಾರ, ಕಬ್ಜ ಬಾಕ್ಸ್ ಆಫೀಸ್‌ನಲ್ಲಿ ಒಂದನೇ ದಿನ ವಿಶ್ವಾದ್ಯಂತ ಎಲ್ಲಾ ಭಾಷೆಗಳಲ್ಲಿ 54 ಕೋಟಿ ರೂಪಾಯಿಗಳವರೆಗೆ ಗಳಿಸಿದೆ ಎಂದು ಸಿನಿಮಾ ತಂಡ ಅಧಿಕೃತವಾಗಿ ಮಾಹಿತಿ ನೀಡಿದೆ. ಆರ್ ಚಂದ್ರು ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆ ಹೆಚ್ಚಾಗಿದೆ.
ಇದನ್ನೂ ಓದಿ : Kabzaa review : ಶಿವಣ್ಣನ ಎಂಟ್ರಿ, ಕಿಚ್ಚನ ಖದರ್, ಉಪ್ಪಿ ಆರ್ಭಟ..! ಹೇಗಿದೆ ಗೊತ್ತಾ ʼಕಬ್ಜʼ..?
ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಮಾತನಾಡುವುದಾದರೆ, ಸಿನಿಪ್ರಿಯರು ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಅಭಿಮಾನಿಯೊಬ್ಬರು, "ಕಬ್ಜ ಸಿನಿಮಾ ಸ್ಯಾಂಡಲ್ವುಡ್ ಅನ್ನು ಮತ್ತೊಮ್ಮೆ ಹೆಮ್ಮೆಪಡಿಸಿದೆ. ಯಾವುದೇ ಋಣಾತ್ಮಕತೆಯನ್ನು ನಂಬಬೇಡಿ" ಎಂದು ಟ್ವೀಟ್ ಮಾಡುವ ಮೂಲಕ ಕಬ್ಜ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ಧಾರೆ.
"ಸ್ಥಳಗಳು, ಬಿಜಿಎಂ, ಕ್ರಿಯೆಗಳು ಮತ್ತು ಕೆಮಿಸ್ಟ್ರಿ ಮತ್ತು ಭಾವನಾತ್ಮಕ ದೃಶ್ಯವು ಅಕ್ಷರಶಃ ಅದ್ಭುತ ಅದ್ಭುತ ಮತ್ತು ಅದ್ಭುತವಾಗಿದೆ." ಎಂದು ಮತ್ತೊಬ್ಬ ನಟ್ಟಿಜನ್ ಟ್ವೀಟ್ ಮಾಡಿದ್ದಾರೆ. ಆದರೆ, ಚಿತ್ರಪ್ರೇಮಿಗಳ ಒಂದು ವಿಭಾಗವು ಚಿತ್ರದ ಬಗ್ಗೆ ಹೆಚ್ಚು ಸಂತಸಗೊಂಡಿಲ್ಲ ಮತ್ತು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಕಬ್ಜ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಅನ್ನು ಮುಂದುವರೆಸಿದೆ. ಆದರೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: Kabza-Upendra: ಕಬ್ಜ ಕಂಡು ಫಿದಾ ಆದ್ರು ಸೆಲೆಬ್ರಿಟಿಸ್
1960-70 ರ ಕಾಲಘಟ್ಟದ ಕತೆ ಹೇಳುವ ಸಿನಿಮಾದಲ್ಲಿ ಉಪ್ಪಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ನೋಡುಗರಿಗೆ ಥ್ರಿಲ್ ನೀಡುತ್ತಿದೆ. ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಈ ಸಿನಿಮಾದಲ್ಲಿ ಮಿಂಚಿದ್ದು, ಶಿವಣ್ಣನ ಪಾತ್ರ ನೋಡುಗರ ಹೃದಯ ಗೆಲ್ಲುತ್ತಿದೆ. ಬಹುಭಾಷಾ ನಟಿ ಶ್ರಿಯಾ ಸರಣ್ ಬ್ಯೂಟಿ ಹಾಗೂ ನಟನಗೆ ಪ್ರೇಕ್ಷಕ ಪ್ರಭು ಫಿದಾ ಆಗುತ್ತಿದ್ದಾನೆ. ಹಾಗೆಯೇ ತೆಲುಗಿನ ಮುರಳಿ ಶರ್ಮಾ, ಕೋಟಾ ಶ್ರೀನಿವಾಸ್ ರಾವ್, ಪೊಸಾನಿ ಮುರಳಿ ಕೃಷ್ಣ, ದೇವ್ ಗಿಲ್, ನವಾಬ್ ಶಾ, ಜಾನ್ ಕೊಕೇನ್, ಕಬೀರ್ ದುಹಾನ್ ಸಿಂಗ್, ಕಾಮರಾಜನ್, ದಾನಿಶ್ ಅಖ್ತರ್, ಲಕ್ಕಿ ಲಕ್ಷ್ಮಣ್, ಅವಿನಾಶ್, ಸುನೀಲ್ ಪುರಾಣಿಕ್, ನೀನಾಸಂ ಅಶ್ವತ್ಥ, ಪ್ರಮೋದ್ ಶೆಟ್ಟಿ ಸೇರಿದಂತೆ ಬಹುದೊಡ್ಡ ತಾರಾಗಣ ಸಿನಿಮಾದಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.