Chaitra Navratri 2023: 9 ದಿನಗಳ ಕಾಲ 4 ರಾಶಿಗಳ ಜನರ ಮೇಲೆ ದೇವಿ ದುರ್ಗೆಯ ವಿಶೇಷ ಕೃಪಾವೃಷ್ಟಿ, ಭಾರಿ ಧನವೃಷ್ಟಿಯ ಯೋಗ!

Chaitra Navratri 2023: ಮಾರ್ಚ್ 22 ರಂದು ಹಿಂದೂ ಹೊಸವರ್ಷ ಯುಗಾದಿಯ ಜೊತೆಗೆ ಚೈತ್ರ ನವರಾತ್ರಿ ಉತ್ಸವ ಆರಂಭಗೊಳ್ಳುತ್ತಿದೆ. ಈ ಚೈತ್ರ ನವರಾತ್ರಿಯ ಸಂದರ್ಭದಲ್ಲಿ 4 ರಾಶಿಗಲಾಗಿರುವ ಮೇಷ, ವೃಷಭ, ಸಿಂಹ ಹಾಗೂ ತುಲಾ ಜಾತಕದವರ ಅದೃಷ್ಟದಲ್ಲಿ ಭಾರಿ ಮೆರಗು ಕಾಣಿಸಿಕೊಳ್ಳಲಿದೆ. ಬಯಸಿದ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದ್ದು, ದೇವಿ ದುರ್ಗೆ ಈ ರಾಶಿಗಳ ಜನರ ಮೇಲೆ ಅಪಾರ ಧನಾವೃಷ್ಟಿಗಾಗಿ ಆಶೀರ್ವದಿಸಲಿದ್ದಾಳೆ. ಬನ್ನಿ ಈ ರಾಶಿಗಳ ಜನರ ಪಾಲಿಗೆ ಚೈತ್ರ ನವರಾತ್ರಿ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ,
 

Lucky Zodiac Signs Of Chaitra Navratri 2023: ಹಿಂದೂ ಧರ್ಮಶಾಸ್ತ್ರದಲ್ಲಿ ನವರಾತ್ರಿಗಳಿಗೆ ವಿಶೇಷ ಮಹತ್ವವಿದೆ. ನವರಾತ್ರಿಯಲ್ಲಿ ತಾಯಿ ದುರ್ಗೆಯನ್ನು ಸಂಪೂರ್ಣ ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ಈ ದಿನಗಳಲ್ಲಿ, ತಾಯಿ ದುರ್ಗೆಯನ್ನು ಶುದ್ಧ ಅಂತಃಕರಣದಿಂದ ಪೂಜಿಸುವುದರಿಂದ ತಾಯಿ ದುರ್ಗೆ ಪ್ರಸನ್ನಳಾಗಿ ಭಕ್ತರ ಮೇಲೆ ತನ್ನ ಕೃಪಾಕಟಾಕ್ಷ ಬೀರುತ್ತಾಳೆ ಎನ್ನಲಾಗುತ್ತದೆ. ನವರಾತ್ರಿಯನ್ನು ವರ್ಷದಲ್ಲಿ 4 ಬಾರಿ ಆಚರಿಸಲಾಗುತ್ತದೆ. ಗುಪ್ತ ನವರಾತ್ರಿ ಎರಡು ಬಾರಿ. ಒಂದು ಚೇತ್ರ ನವರಾತ್ರಿ, ಒಂದು ಶಾರದೀಯ ನವರಾತ್ರಿ. ಎಲ್ಲಾ ನವರಾತ್ರಿಗಳು ತಮ್ಮದೇ ಆದ ವಿಭಿನ್ನ ಮಹತ್ವವನ್ನು ಹೊಂದಿವೆ. ಚೈತ್ರ ನವರಾತ್ರಿಯು ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಈ ವರ್ಷದ ಚೈತ್ರ ನವರಾತ್ರಿಯು ಮಾರ್ಚ್ 22 ರಿಂದ ಪ್ರಾರಂಭವಾಗಿ ಮಾರ್ಚ್ 30, 2023 ರಂದು ಮುಕ್ತಾಯವಾಗಲಿದೆ. ಈ ಚೈತ್ರ ನವರಾತ್ರಿಯು ಯಾವ ರಾಶಿಗಳ ಜನರ ಪಾಲಿಗೆ ಭಾರಿ ಅದೃಷ್ಟವನ್ನು ಹೊತ್ತು  ತರಲಿದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-ತನ್ನ ನೀಚ ರಾಶಿಯಲ್ಲಿ ಗ್ರಹಗಳ ರಾಜಕುಮಾರನ ಭ್ರಮಣೆ ಆರಂಭ, 5 ರಾಶಿಗಳ ಜನರಿಗೆ ಅಪಾರ ಯಶಸ್ಸು-ಧನ ಪ್ರಾಪ್ತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /4

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚೈತ್ರ ನವರಾತ್ರಿಯ ಸಮಯದಲ್ಲಿ ರೂಪುಗೊಳ್ಳಲಿರುವ ವಿಶೇಷ ಕಾಕತಾಳೀಯ ಮೇಷ ರಾಶಿಯವರಿಗೆ ಅಪಾರ ಧನಸಂಪತ್ತನ್ನು ಕರುಣಿಸುವ ನಿರೀಕ್ಷೆ ಇದೆ. ಈ ಸಮಯದಲ್ಲಿ, ಮೇಷ ರಾಶಿಯವರ ಸ್ಥಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ ಮತ್ತು ಅವರು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ. ಈ ಬಾರಿ ದುರ್ಗಾ ದೇವಿಯು ನೌಕೆಯ ಮೇಲೆ ಸವಾರಿ ನಡೆಸಿ ಬರುತ್ತಿದ್ದು, ಇದು ತುಂಬಾ ಶುಭಕರ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತಿದೆ.  

2 /4

ವೃಷಭ ರಾಶಿ : ಚೈತ್ರ ನವರಾತ್ರಿಯ ಈ ಹಬ್ಬವು ವೃಷಭ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ನೀವು ಯಾವುದೇ ಹೊಸ ಕೆಲಸವನ್ನು ಮಾಡಲು ಹೊರಟಿದ್ದರೆ, ದುರ್ಗಾ ದೇವಿಯನ್ನು ಧ್ಯಾನಿಸುವುದು ನಿಮಗೆ ಮಂಗಳಕರವಾಗಿರುತ್ತದೆ.  

3 /4

ಸಿಂಹ ರಾಶಿ : ಚೈತ್ರ ನವರಾತ್ರಿಯ ಈ ಹಬ್ಬವು ಸಿಂಹ ರಾಶಿಯವರಿಗೆ ಅತ್ಯಂತ ಫಲಪ್ರದ ಸಾಬೀತಾಗಲಿದೆ. ನೀವು ಹೊಸ ಉದ್ಯೋಗದ ಹುಡುಕಾಟದಲ್ಲಿ ನಿರತರಾಗಿದ್ದರೆ, ನೀವು ಬಯಸಿದ ಕೆಲಸ ಶೀಘ್ರದಲ್ಲಿಯೇ ನಿಮಗೆ ಸಿಗಲಿದೆ. ಇಲ್ಲಿಯವರೆಗೆ ಮದುವೆಯಲ್ಲಿ ಅಡೆತಡೆಗಳನ್ನು ಎದುರಿಸಿದವರ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ, ಮದುವೆಯ ಪ್ರಸ್ತಾಪಗಳು ನಿಮಗೆ ಬರಲಾರಂಭಿಸಲಿವೆ ಮತ್ತು ಶೀಘ್ರದಲ್ಲಿಯೇ ಕಂಕಣ ಭಾಗ್ಯ ಕೂಡಿಬರಲಿದೆ.  

4 /4

ತುಲಾ ರಾಶಿ: ಚೈತ್ರ ನವರಾತ್ರಿಯ ಈ ಹಬ್ಬ ತುಲಾ ರಾಶಿಯವರಿಗೆ ಶುಭ ಸುದ್ದಿಯನ್ನು ತರಲಿದೆ. ಈ ಸಮಯದಲ್ಲಿ, ತುಲಾ ರಾಶಿಯ ಜನರು ತಮ್ಮ ನೆಚ್ಚಿನ ಕೆಲಸದ ಪ್ರಸ್ತಾಪವನ್ನು ಪಡೆಯುತ್ತಾರೆ. ಇತರ ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಯೂ ಇದೆ. ಇದಲ್ಲದೆ, ತುಲಾ ರಾಶಿಯ ಜನರು ಹೊಸ ಸಂಬಂಧದಲ್ಲಿಯೂ ಕೂಡ ತಮ್ಮನ್ನು ತಾವು ಬಂಧಿಸಿಕೊಳ್ಳಬಹುದು. ಚೈತ್ರ ನವರಾತ್ರಿಯಲ್ಲಿ ನೀವು ಹಲವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)