Budhaditya Yoga : ಗ್ರಹಗಳ ರಾಜಕುಮಾರ ಎಂದು ಬುಧನನ್ನು ಕರೆಯಲಾಗುತ್ತದೆ. ಬುಧನ ಸಂಚಾರ ಕೆಲ ರಾಶಿಯವರಿಗೆ ಸುಖ ನೀಡಿದರೆ, ಇನ್ನೂ ಕೆಲವು ರಾಶಿಯವರಿಗೆ ದುಃಖ ತರುತ್ತದೆ. ಇದೀಗ ಮೀನ ರಾಶಿಯಲ್ಲಿ ಸಂಕ್ರಮಣ ನಡೆಯಲಿದೆ.
Mercury transit 2023: ಗ್ರಹಗಳ ರಾಜಕುಮಾರ ಎಂದು ಬುಧನನ್ನು ಕರೆಯಲಾಗುತ್ತದೆ. ಬುಧನ ಸಂಚಾರ ಕೆಲ ರಾಶಿಯವರಿಗೆ ಸುಖ ನೀಡಿದರೆ, ಇನ್ನೂ ಕೆಲವು ರಾಶಿಯವರಿಗೆ ದುಃಖ ತರುತ್ತದೆ. ಬುಧ ಗ್ರಹ ಇಂದು ಅಂದರೆ ಮಾರ್ಚ್ 16 ರಂದು ಬೆಳಿಗ್ಗೆ 10.54 ಕ್ಕೆ ಮೀನ ರಾಶಿಗೆ ಸಂಚರಿಸಲಿದೆ. ಇದೇ ರಾಶಿಯಲ್ಲಿ ಸೂರ್ಯ ಕೂಡ ಇರುವುದರಿಂದ ಬುಧಾದಿತ್ಯ ಯೋಗ ನಿರ್ಮಾಣವಾಗಲಿದೆ.
ವೃಷಭ ರಾಶಿಯವರಿಗೆ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಇಂದು ನೀವು ಮಾಡುವ ಹೂಡಿಕೆಯು ಭವಿಷ್ಯದಲ್ಲಿ ಲಾಭ ತರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಾಮಾಜಿಕ ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗುತ್ತಿರಿ. ಸಮಾಜದಲ್ಲಿ ನಿಮ್ಮ ಕೀರ್ತಿ ಮತ್ತು ಗೌರವ ಜಾಸ್ತಿಯಾಗುತ್ತದೆ.
ಬುಧನ ಸಂಚಾರದಿಂದ ಮಕರ ರಾಶಿಯವರಿಗೆ ಉದ್ಯೋಗ, ವ್ಯಾಪಾರದಲ್ಲಿ ಯಶಸ್ಸು ಲಭಿಸುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ನೀಡಲಾಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಮಾತುಗಳಿಂದ ಜನರು ಪ್ರಭಾವಿತರಾಗುತ್ತಾರೆ. ಹೊಸ ಆಸ್ತಿ, ವಾಹನವನ್ನು ಖರೀದಿಸುವ ಯೋಗವೂ ಇದೆ.
ವ್ಯಾಪಾರದಲ್ಲಿ ನಿರತರಾಗಿರುವ ವೃಶ್ಚಿಕ ರಾಶಿಯವರಿಗೆ ಬುಧನ ಸಂಚಾರ ಅನೇಕ ಪ್ರಯೋಜನಗಳನ್ನು ತರುತ್ತಿದೆ. ಪಾಲುದಾರಿಕೆಯಲ್ಲಿ ವ್ಯಾಪಾರವನ್ನು ಮಾಡುವ ಅವಕಾಶವಿದೆ. ನಿಮ್ಮ ವ್ಯಾಪಾರದ ಫ್ರ್ಯಾಂಚೈಸ್ ಅನ್ನು ಹೊಸ ಸ್ಥಳದಲ್ಲಿ ಪ್ರಾರಂಭಿಸಬಹುದು.
ಕರ್ಕಾಟಕ ರಾಶಿಯವರಿಗೆ ಈ ಸಮಯದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕದತ್ತ ಒಲವು ಹೆಚ್ಚಾಗುತ್ತದೆ. ಕೆಲವರಿಗೆ ವಿದೇಶ ಪ್ರಯಾಣದ ಯೋಗವಿದೆ. ವಿದೇಶದಲ್ಲಿ ಓದಲು ಬಯಸುವವರು ಉತ್ತಮ ಅವಕಾಶವನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ವೃದ್ಧಿ ಕಾಣಬಹುದು.
ಮೀನ ರಾಶಿಯಲ್ಲಿಯೇ ಬುಧಾದಿತ್ಯ ಯೋಗ ನಿರ್ಮಾಣವಾಗಲಿದೆ. ಇದು ಈ ರಾಶಿಯ ಜನರ ಗೌರವವನ್ನು ಹೆಚ್ಚಿಸಲಿದೆ. ಸಮಾಜದಲ್ಲಿ ಇವರ ಪ್ರಭಾವ ಹೆಚ್ಚಾಗುತ್ತದೆ. ಈ ರಾಶಿಯ ಪ್ರೇಮಿಗಳು ಮದುವೆಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡಬಹುದು. ವ್ಯಾಪಾರಸ್ಥರಿಗೆ ಇದು ಶುಭಕಾಲವಾಗಿದೆ.