ನವದೆಹಲಿ: ಭದ್ರತಾ ಪಡೆಗಳ ಎನ್ಕೌಂಟರ್ ದಾಳಿಗೆ ಇಬ್ಬರು ಭಯೋತ್ಪಾದಕರು ಜಮ್ಮು ಕಾಶ್ಮೀರದಲ್ಲಿ ಮೃತಪಟ್ಟಿದ್ದಾರೆ.ಅಲ್ ಬದರ್ ಎನ್ನುವ ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಹೊಂದಿದ್ದ ಜೀನಾತ್-ಇಸ್ಲಾಂ ಎಂಬಾತ ಐಇಡಿ ಸಾಧನವನ್ನು ನಿಭಾಯಿಸುವಲ್ಲಿ ಪರಿಣಿತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಕ್ಯಾಟ್ಪೊರಾ ಪ್ರದೇಶದಲ್ಲಿ ಶನಿವಾರ ಸಂಜೆ ಭಯೋತ್ಪಾದಕರಿರುವ ಮಾಹಿತಿ ಪಡೆದ ಭದ್ರತಾ ಪಡೆಗಳು ಸರಂಜಾಮು ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.
Jammu&Kashmir: Two terrorists were killed in a joint operation last night by the Army, Police and CRPF in Kulgam. The terrorists have been identified as Zeenat-ul-Islam and Shakeel Ahmed Dar. Weapons and other warlike stores recovered. Operations concluded.
— ANI (@ANI) January 13, 2019
ಒಂದು ಕಡೆ ಭದ್ರತಾಪಡೆಗಳು ಪಡೆಗಳು ಹುಡುಕಾಟ ನಡೆಸುತ್ತಿರುವಾಗ, ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿದರು ಇದಕ್ಕೆ ಪ್ರತಿಯಾಗಿ ಸೇನಾಪಡೆಗಳು ಗುಂಡಿನ ದಾಳಿ ನಡೆಸಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದರು.
ಎನ್ಕೌಂಟರ್ ಆದ ಸ್ಥಳದಿಂದ ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳನ್ನು ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಇನ್ನು ಯಾವುದೇ ರೀತಿಯ ಹಾನಿಯಾಗಿಲ್ಲವೆಂದು ತಿಳಿದುಬಂದಿದೆ.ಝೀನಾತ್ ಈ ಮುಂಚೆ ಹಿಜ್ಬುಲ್ ಮುಜಾಹಿದೀನ್ರೊಂದಿಗೆ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.