Hardik Pandya: ಸೋಶಿಯಲ್ ಮೀಡಿಯಾದಲ್ಲೂ ಹಾರ್ದಿಕ್ ಅಬ್ಬರ: ಸ್ಟಾರ್ ಆಲ್’ರೌಂಡರ್ ಬರೆದ ಹೊಸ ದಾಖಲೆ ಏನು ಗೊತ್ತಾ!

Hardik Pandya 25 Million Followers: ಹಾರ್ದಿಕ್ ಪಾಂಡ್ಯಾ ಇನ್ಸ್ಟಾಗ್ರಾಮ್ ನಲ್ಲಿ 25 ಮಿಲಿಯನ್ ಅನುಯಾಯಿಗಳನ್ನು ತಲುಪಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುತೂಹಲಕಾರಿಯಾಗಿ, ಕೆಲವು ಜಾಗತಿಕ ತಾರೆಗಳಾದ ರಾಫೆಲ್ ನಡಾಲ್, ರೋಜರ್ ಫೆಡರರ್, ಮ್ಯಾಕ್ಸ್ ವೆರುಸ್ಟಪೇನ್ ಮತ್ತು ಎರ್ಲಿಗ್ರಾಮ್ ಹ್ಯಾನ್ಲ್ಯಾಂಡ್ ಗಿಂತ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹಾರ್ದಿಕ್ ಹೊಂದಿದ್ದಾರೆ.

Written by - Bhavishya Shetty | Last Updated : Mar 6, 2023, 09:46 PM IST
    • ಹಾರ್ದಿಕ್ ಪಾಂಡ್ಯ ಇದೀಗ ಸಾಮಾಜಿಕ ಜಾಲತಾಣದಲ್ಲೂ ತಮ್ಮ ಅಬ್ಬರವನ್ನು ತೋರಿಸಿದ್ದಾರೆ.
    • 25 ಮಿಲಿಯನ್ ಅನುಯಾಯಿಗಳನ್ನು ತಲುಪಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
    • ಹಾರ್ದಿಕ್ ಅವರು 2016 ರಲ್ಲಿ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ
Hardik Pandya: ಸೋಶಿಯಲ್ ಮೀಡಿಯಾದಲ್ಲೂ ಹಾರ್ದಿಕ್ ಅಬ್ಬರ: ಸ್ಟಾರ್ ಆಲ್’ರೌಂಡರ್ ಬರೆದ ಹೊಸ ದಾಖಲೆ ಏನು ಗೊತ್ತಾ! title=
Hardik Pandya

Hardik Pandya 25 Million Followers: ಭಾರತದ ಸ್ಟಾರ್ ಆಲ್ -ರೌಂಡರ್ ಹಾರ್ದಿಕ್ ಪ್ರಸ್ತುತ ವಿರಾಮದಲ್ಲಿದ್ದಾರೆ. ಕ್ರಿಕೆಟ್’ನಲ್ಲಿ ಅದೆಷ್ಟೋ ದಾಖಲೆ ಸೃಷ್ಟಿಸಿದ ಹಾರ್ದಿಕ್ ಪಾಂಡ್ಯ ಇದೀಗ ಸಾಮಾಜಿಕ ಜಾಲತಾಣದಲ್ಲೂ ತಮ್ಮ ಅಬ್ಬರವನ್ನು ತೋರಿಸಿದ್ದಾರೆ.

ಹಾರ್ದಿಕ್ ಪಾಂಡ್ಯಾ ಇನ್ಸ್ಟಾಗ್ರಾಮ್ ನಲ್ಲಿ 25 ಮಿಲಿಯನ್ ಅನುಯಾಯಿಗಳನ್ನು ತಲುಪಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕುತೂಹಲಕಾರಿಯಾಗಿ, ಕೆಲವು ಜಾಗತಿಕ ತಾರೆಗಳಾದ ರಾಫೆಲ್ ನಡಾಲ್, ರೋಜರ್ ಫೆಡರರ್, ಮ್ಯಾಕ್ಸ್ ವೆರುಸ್ಟಪೇನ್ ಮತ್ತು ಎರ್ಲಿಗ್ರಾಮ್ ಹ್ಯಾನ್ಲ್ಯಾಂಡ್ ಗಿಂತ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹಾರ್ದಿಕ್ ಹೊಂದಿದ್ದಾರೆ.

ಇದನ್ನೂ ಓದಿ: 50 ರೂ.ಗಾಗಿ ಚರ್ಮ ಕಿತ್ತುಬರುವಂತೆ ಹೊಡೆದ ವಿರಾಟ್ ತಾಯಿ! ಕಿಂಗ್ ಕೊಹ್ಲಿ ಸೀಕ್ರೆಟ್ ರಿವೀಲ್!

ಇನ್ನು ಈ ಸಂಬಂಧ ಹಾರ್ದಿಕ್ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು, “ಈ ನಿಮ್ಮ ಪ್ರೀತಿಗಾಗಿ ನನ್ನ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ಎಲ್ಲಾ ಅಭಿಮಾನಿಗಳು ನನಗೆ ವಿಶೇಷ. ಇಷ್ಟು ವರ್ಷಗಳ ಕಾಲ ನೀವು ನನಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಹಾರ್ದಿಕ್ ಅವರು 2016 ರಲ್ಲಿ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತನ್ನ 29 ನೇ ವಯಸ್ಸಿನಲ್ಲಿಯೇ ಅವರು ಭಾರತೀಯ ತಂಡದ ಹಿರಿಯ ಸದಸ್ಯರಾಗಿದ್ದಾರೆ. ಮತ್ತು ಐಪಿಎಲ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇನ್ನು ಹಾರ್ದಿಕ್ 2018 ರಿಂದ ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿಲ್ಲ. ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿರುವ ಭಾರತೀಯ ತಂಡದ ಭಾಗವೂ ಆಗಿಲ್ಲ.

ಬೆನ್ನಿನ ಗಾಯದಿಂದ ಚೇತರಿಸಿಕೊಂಡ ನಂತರ, ಹಾರ್ದಿಕ್ ಜೂನ್ 2022 ರಿಂದ ಭಾರತದ ಸೀಮಿತ ಓವರ್‌ಗಳ ತಂಡದಲ್ಲಿ ಪ್ರಮುಖ ಆಟಗಾರನಾಗಿದ್ದಾರೆ. ಮಾರ್ಚ್ 17 ರಿಂದ ಮುಂಬೈನಲ್ಲಿ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ, ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಉಪ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸರಣಿಯ ಮುಕ್ತಾಯದ ನಂತರ, ಹಾರ್ದಿಕ್ ಗುಜರಾತ್ ಟೈಟಾನ್ಸ್ ಅ 2023 ರ ಐಪಿಎಲ್ ಋತುವಿನಲ್ಲಿ ಮುನ್ನಡೆಸಲಿದ್ದಾರೆ.

ಇದನ್ನೂ ಓದಿ: ದೈತ್ಯಾಕಾರವಾಗಿ ಬೆಳೆದ ತುಳಸಿ ಗಿಡ: ಹಿಂದೆಂದೂ ಕಂಡಿರದ ಈ ವಿಚಿತ್ರವನ್ನೊಮ್ಮೆ ಕಣ್ತುಂಬಿಕೊಳ್ಳಿ

ಮಾರ್ಚ್ 31 ರಂದು ಹಾರ್ದಿಕ್ ನೇತೃತ್ವದ ಗುಜರಾತ್ ತಂಡ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಟವಾಡಲಿದೆ. ಇದು ಐಪಿಎಲ್ 2023ರ ಮೊದಲ ಪಂದ್ಯವಾಗಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News