/kannada/photo-gallery/symptoms-that-appear-on-the-skin-when-blood-sugar-is-high-249392 ಬ್ಲಡ್‌ ಟೆಸ್ಟ್ ಅಗತ್ಯವೇ ಇಲ್ಲ... ಚರ್ಮದ ಮೇಲೆ ಈ ಗುರುತುಗಳು ಕಾಣಿಸಿಕೊಳ್ಳುತ್ತಿದ್ದರೆ ನಿಮಗೆ ಡಯಾಬಿಟಿಸ್ ಹೆಚ್ಚಾಗಿರುವುದು ಖಚಿತ! ಬ್ಲಡ್‌ ಟೆಸ್ಟ್ ಅಗತ್ಯವೇ ಇಲ್ಲ... ಚರ್ಮದ ಮೇಲೆ ಈ ಗುರುತುಗಳು ಕಾಣಿಸಿಕೊಳ್ಳುತ್ತಿದ್ದರೆ ನಿಮಗೆ ಡಯಾಬಿಟಿಸ್ ಹೆಚ್ಚಾಗಿರುವುದು ಖಚಿತ! 249392

ಐಷಾರಾಮಿ ಕಾರು ಬಿಟ್ಟು ಸ್ಕೂಟಿಯಲ್ಲಿ ಗೆಳತಿ ಜೊತೆ ಓಡಾಡಿದ ಮೋಹಕ ತಾರೆ ರಮ್ಯಾ..!

Ramya Scooty Ride: ಸ್ಯಾಂಡಲ್‍ವುಡ್ ಪದ್ಮಾವತಿ ಖ್ಯಾತಿಯ ರಮ್ಯಾ ಐಷಾರಾಮಿ ಕಾರು ಬಿಟ್ಟು ಸ್ಕೂಟಿ ಬಳಸುತ್ತಿರುವುದಕ್ಕೆ ಅವರ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

Written by - YASHODHA POOJARI | Edited by - Puttaraj K Alur | Last Updated : Mar 2, 2023, 03:03 PM IST
  • ಐಷಾರಾಮಿ ಕಾರು ಬಿಟ್ಟು ಸ್ಕೂಟಿಯಲ್ಲಿ ರೌಂಡ್ಸ್ ಹಾಕಿದ ರಮ್ಯಾ
  • ಗೆಳತಿ ಜೊತೆಗೆ ಸ್ಕೂಟಿಯಲ್ಲಿ ಮೊಹಕ ತಾರೆ ಬೆಂಗಳೂರು ರೌಂಡ್ಸ್
  • ಸ್ಯಾಂಡಲ್‍ವುಡ್‍ ಪದ್ಮಾವತಿಯ ಸ್ಕೂಟಿ ರೈಡ್‍ಗೆ ಫ್ಯಾನ್ಸ್ ಫಿದಾ
ಐಷಾರಾಮಿ ಕಾರು ಬಿಟ್ಟು ಸ್ಕೂಟಿಯಲ್ಲಿ ಗೆಳತಿ ಜೊತೆ ಓಡಾಡಿದ ಮೋಹಕ ತಾರೆ ರಮ್ಯಾ..! title=
ಸ್ಕೂಟಿಯಲ್ಲಿ ರೌಂಡ್ಸ್ ಹಾಕಿದ ರಮ್ಯಾ!

ಬೆಂಗಳೂರು: ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ, ಸಿನಿಮಾ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹಾಗೂ ಹೊಸ ಸಿನಿಮಾಗಳಿಗೆ ಸಹಿ ಮಾಡುತ್ತಿರುವುದೇ ಅಭಿಮಾನಿಗಳಿಗೆ ಬಿಗ್ ನ್ಯೂಸ್. ಹೀಗಿರುವಾಗ ರಮ್ಯಾ ಬೆಂಗಳೂರಿನ ರಸ್ತೆಗಳಲ್ಲಿ ಸ್ಕೂಟಿ ರೌಂಡ್‌ ಹೋಗಿರುವುದು ಕಂಡು ಫ್ಯಾನ್ಸ್ ಆಶ್ಚರ್ಯ ಪಟ್ಟಿದ್ದಾರೆ.

ಸ್ಯಾಂಡಲ್‍ವುಡ್ ಪದ್ಮಾವತಿ ಖ್ಯಾತಿಯ ರಮ್ಯಾ ಐಷಾರಾಮಿ ಕಾರು ಬಿಟ್ಟು ಸ್ಕೂಟಿ ಬಳಸುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. ಗೆಳತಿ ಸುಮನ್ ಜೊತೆ ಬೆಂಗಳೂರಿನ ಸಿಟಿಯಲ್ಲಿ ರಮ್ಯಾ ರೌಂಡ್ಸ್ ಹಾಕಿದ್ದಾರೆ. ಇದು ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿದೆ.

ಇದನ್ನೂ ಓದಿ: ಕಳೆದ ವರ್ಷ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ನಟ-ನಟಿಯರು ಯಾರು ಅಂತ ಗೊತ್ತಾ..!

ಕನಸಿನ ರಾಣಿ ರಮ್ಯಾ ತಮ್ಮ ಮುದ್ದಾದ ಅಭಿನಯ ಮತ್ತು ಕ್ಯೂಟ್‌ ಕ್ಯೂಟ್‌ ಲುಕ್‌ ಮತ್ತು ಸ್ಮೈಲ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದ್ದಿರುವ ಅಂದದ ಚೆಲುವೆ. ಕನ್ನಡದಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳನ್ನು ನೀಡಿದ ಅದ್ಭುತ ಪ್ರತಿಭೆ ಅಂದ್ರೆ ಅದು ದಿವ್ಯ ಸ್ಪಂದನಾ ಅಲಿಯಾಸ್‌ ರಮ್ಯಾ. ಲುಕ್,  ಆಟಿಟ್ಯೂಡ್‌, ಮೂಗಿನ ತುದೀಲಿ ಕೋಪ... ಇವು ಕ್ಯೂಟ್‌ ರಮ್ಯಾರ ಟ್ರೇಡ್‌ ಮಾರ್ಕ್‌ ಅಂದ್ರೆ ತಪ್ಪಾಗಲಾರದು.

ರಮ್ಯಾ ಕನ್ನಡ ಮತ್ತು ತಮಿಳು ಚಿತ್ರರಂಗಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡುವ ಮೂಲಕ ಸೈ ಅನ್ನಿಸಿಕೊಂಡ ಅಚ್ಚ ಕನ್ನಡದ ನಟಿ. ಇವರ ಹುಟ್ಟು ಹೆಸರು ದಿವ್ಯ ಸ್ಪಂದನಾ. ರಮ್ಯಾ ಅವರು 'ಅಭಿ' ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು 'ತನನಂ ತನನಂ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಿಗೆ 2 ಬಾರಿ ಬೆಸ್ಟ್ ಫಿಲಂ ಫೇರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಅವರ ಜೊತೆ ಮತ್ತೆ ಸಿನಿಮಾಗೆ ಬಣ್ಣ ಹಚ್ಚಲು ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಮಾಡಲು ಆಗದ ಕೆಲಸ ಮಾಡಿ ಸೈ ಅನಿಸಿಕೊಂಡಿದ್ದಾರೆ ನಟಿ ಕಾರುಣ್ಯರಾಮ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.