ಸೀರೆಯುಟ್ಟ ನಾರಿಯ ಸ್ಪೋರ್ಟ್ಸ್ ಬೈಕ್ ಸವಾರಿ!

    

Last Updated : Nov 30, 2017, 12:28 PM IST
ಸೀರೆಯುಟ್ಟ ನಾರಿಯ ಸ್ಪೋರ್ಟ್ಸ್ ಬೈಕ್ ಸವಾರಿ! title=

ಸಾಮಾನ್ಯವಾಗಿ ಮಹಿಳೆಯರು ಬೈಕ್ ಓಡಿಸುವುದನ್ನು ಎಲ್ಲರೂ ನೋಡಿರುತ್ತೇವೆ. ಆದರೆ ಸೀರೆಯುಟ್ಟು, ಆರ್ 15 ಸ್ಪೋರ್ಟ್ಸ್ ಬೈಕ್ನಲ್ಲಿ ತ್ರಿಬಲ್ ರೈಡ್ ಮಾಡೋದು ಎಲ್ಲಾದ್ರೂ ನೋಡಿದ್ರಾ? ಹಾಗಿದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೈರಲ್ ವೀಡಿಯೋ ನೋಡಿ!

<

>ಶಾಕ್ ಆಯ್ತಾ? ಆಗಲೇಬೇಕು. ತೆಲಂಗಾಣದ ಹೈದರಾಬಾದ್ನ್ ಹಯತ್‍ನಗರದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಬೈಕ್ ಓಡಿಸುತ್ತಿರೋ ಮಹಿಳೆ ಜೊತೆಗೆ ಇನ್ನಿಬ್ಬರು ಮಹಿಳೆಯರು ಕುಳಿತಿದ್ದು, ತ್ರಿಬಲ್ ರೈಡಿಂಗ್ ಮಾಡ್ತಿರೋದನ್ನ ಬೈಕ್ ಹಿಂದೆ ಬರುತ್ತಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. 

ಇಲ್ಲಿ ನೀವು ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಸಾಂಪ್ರದಾಯಿಕ ಉಡುಪಿನಲ್ಲಿ ಓರ್ವ ಮಹಿಳೆ ಸ್ಪೋರ್ಟ್ಸ್ ಬೈಕ್ ಓಡಿಸುತ್ತಾಳೆ ಎಂದರೆ ಅದು ಮೆಚ್ಚುವಂಥದ್ದೆ. ಆದ್ರೆ, ಇಬ್ಬರು ಹಿಂಬದಿ ಸವಾರರನ್ನು ಕೂರಿಸಿಕೊಂಡು, ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘಿಸಿ, ಅದರ ದುಷ್ಪರಿಣಾಮವನ್ನೂ ಲೆಕ್ಕಿಸದೆ ಟ್ರೆಂಡಿಯಾಗಿ ಸ್ಪೋರ್ಟ್ಸ್ ಬೈಕ್ ಸವಾರಿ ಮಾಡ್ತಿರೋದು ಎಲ್ಲರ ಹುಬ್ಬೇರಿಸಿದೆ. 

Trending News