ಕುವೆಂಪು ಜನ್ಮದಿನ; ರಾಷ್ಟ್ರಕವಿಯ ಅಪರೂಪದ ಛಾಯಾಚಿತ್ರಗಳು

'ಕುವೆಂಪು' ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿರುವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು. ಹಾಗೆಯೇ ನಮ್ಮ ರಾಷ್ಟ್ರಕವಿಯೂ ಹೌದು. 
 

  • Dec 29, 2018, 16:47 PM IST

ಕನ್ನಡ ಸಾಹಿತ್ಯ ಕ್ಷೇತ್ರದ ಮುಕುಟಮಣಿಯಾಗಿದ್ದ ರಾಷ್ಟ್ರಕವಿ ಕುವೆಂಪು ಅವರ 114ನೇ ಹುಟ್ಟುಹಬ್ಬ ಇಂದು. ಇದು ಕನ್ನಡಿಗರಿಗೆ ಮತ್ತು ವಿಶ್ವದ ಎಲ್ಲಾ ಕವಿ ಮನಸ್ಸುಗಳಿಗೆ ವಿಶೇಷ ದಿನ. ಒಬ್ಬ ಸಾಮಾನ್ಯ ಕನ್ನಡಿಗನಾಗಿ, ತಿದ್ದುವ ಕವಿಯಾಗಿ ಕುವೆಂಪು ಅವರ ಬಗ್ಗೆ ಹಲವಾರು ಜನರಿಗೆ ತಿಳಿಯದ ಕೆಲವು ವಿಷಯಗಳನ್ನು ಪರಿಚಯಿಸುವ ಪ್ರಯತ್ನ. ಈ ಸಂದರ್ಭದಲ್ಲಿ ಕುವೆಂಪು ಅವರ ಕೆಲವು ಅಪರೂಪದ ಭಾವಚಿತ್ರಗಳು, ಬಾಲ್ಯ, ಕುಟುಂಬ, ಕುವೆಂಪು ಅವರ ಹುಟ್ಟೂರಿನ ಛಾಯಾಚಿತ್ರಗಳ ಸಂಕಲನ ನಿಮಗಾಗಿ. 

1 /14

ಅರ್ಥಗರ್ಭಿತವಾದ ಕುವೆಂಪು ಅವರ ಸಾಲುಗಳು

2 /14

 ತಂದೆ ವೆಂಕಟಪ್ಪ ಅವರೊಂದಿಗೆ ಪುಟ್ಟಪ್ಪನಾಗಿದ್ದ ಕುವೆಂಪು.

3 /14

ವಿದ್ಯಾರ್ಥಿಯಾಗಿ ಕುವೆಂಪು. 

4 /14

ಕನ್ನಡ ಪ್ರಾಧ್ಯಾಪಕರಾಗಿ ಕುವೆಂಪು.

5 /14

ಶ್ರೀಮತಿ ಮತ್ತು ಮಕ್ಕಳಾದ ಕೊಕಿಲೋದಯ ಚೈತ್ರ, ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಕುವೆಂಪು. 

6 /14

ಮೊಮ್ಮಕ್ಕಳಾದ ತಮಲಾ ಮತ್ತು ಸುಶ್ಮಿತಾಳೊಂದಿಗೆ ಕುವೆಂಪು. 

7 /14

ತಮ್ಮ ಫೋರ್ಡ್ ಕಾರಿನೊಂದಿಗೆ ಕುವೆಂಪು

8 /14

ಕುವೆಂಪು ಅವರೊಂದಿಗೆ ಮುದ್ದಿನ ಮೊಮ್ಮಗಳು ಸುಶ್ಮಿತಾ.

9 /14

ಪೂರ್ಣ ಕುಟುಂಬದೊಂದಿಗೆ ಕುವೆಂಪು. 

10 /14

ಕುವೆಂಪು ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಸಾಹಿತಿಗಳಾದ ಬಿ.ಎಂ.ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿ, ದೇ.ಜವರೇಗೌಡ ಅವರೊಂದಿಗೆ ಕುವೆಂಪು.

11 /14

ಶಿವಮೊಗ್ಗದ ಕವಿಶೈಲದಲ್ಲಿರುವ ಕುವೆಂಪು ಅವರ ಮನೆ 'ಕವಿಮನೆ'. 

12 /14

ಕವಿಶೈಲದ ಆವರಣದಲ್ಲಿ ಕುವೆಂಪು ಅವರು ತಮ್ಮ ಮನೆಯ ಕುರಿತಾಗಿ ಬರೆದ ಕವನವಿರುವ ಶಿಲೆ.

13 /14

ಕುವೆಂಪು ಶತಮಾನೋತ್ಸವದ ಅಂಗವಾಗಿ ಕವಿಶೈಲದಲ್ಲಿ ನಿರ್ಮಿಸಲಾಗಿರುವ ಕುವೆಂಪು ಸ್ಮಾರಕ ಭವನ. 

14 /14

ಎಂದೆಂದಿಗೂ ಮರೆಯಲಾಗದ ಕುವೆಂಪು ಅವರ 'ಅನಂತವಾಗಿರು' ಪದ್ಯದ ಸಾಲುಗಳು.