ಹೆಂಡತಿಗೆ ತನ್ನ ಗಂಡನ ಮೇಲೆ ಅನುಮಾನ ಮೂಡಲು ಗಂಡನ ಕೆಲವು ಸ್ವಭಾವಗಳೇ ಪ್ರಮುಖ ಕಾರಣ ಎಂದು ನಿಮಗೆ ತಿಳಿದಿದೆಯೇ?
ಗಂಡ-ಹೆಂಡತಿ ಸಂಬಂಧ ಇತರ ಎಲ್ಲಾ ಸಂಬಂಧಗಳಿಗಿಂತಲೂ ಒಂದು ವಿಶೇಷ ಸಂಬಂಧ. ಎಲ್ಲೋ ಹುಟ್ಟಿ ಬೆಳೆದ ಎರಡು ಜೀವಗಳನ್ನು ಒಂದಾಗುವಂತೆ ಮಾಡುವ ಬಂಧನವೇ ವಿವಾಹ ಬಂಧನ. ಆದರೆ, ಹಲವು ಬಾರಿ ಚೆನ್ನಾಗಿದ್ದ ಸಂಸಾರಗಳು ಕೂಡ ಸಣ್ಣ-ಪುಟ್ಟ ಕಾರಣಕ್ಕೆ ದೂರಾಗುವುದನ್ನು ನಾವು ಕಾಣುತ್ತೇವೆ. ಇದಕ್ಕೆ ಮುಖ್ಯ ಕಾರಣ ಪತಿ-ಪತ್ನಿ ನಡುವೆ ಮೂಡುವ ಅಪನಂಬಿಕೆ ಎಂಬ ಅಪಸ್ವರ. ಆದರೆ, ಹೆಂಡತಿಗೆ ತನ್ನ ಗಂಡನ ಮೇಲೆ ಅನುಮಾನ ಮೂಡಲು ಗಂಡನ ಕೆಲವು ಸ್ವಭಾವಗಳೇ ಪ್ರಮುಖ ಕಾರಣ ಎಂದು ನಿಮಗೆ ತಿಳಿದಿದೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪತ್ನಿಯು ಪತಿ ತನ್ನ ಮಾತುಗಳಿಗೆ ಗಮನ ಕೊಡಬೇಕು ಎಂದು ಬಯಸುತ್ತಾಳೆ. ಆದರೆ, ಪತಿ ಪದೇ ಪದೇ ಹೆಂಡತಿಯ ಮಾತಿಗೆ ಗಮನ ಕೊಡದಿದ್ದರೆ, ಅಲ್ಲೇ ಅನುಮಾನವೆಂಬ ವಿಷಬೀಜ ಹುಟ್ಟುತ್ತದೆ.
ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ನಡುವಿನ ಜಗಳಕ್ಕೆ ಮೊಬೈಲ್ ಕೂಡ ಒಂದು ಕಾರಣವಾಗಿದೆ. ನಿಜ ಹೇಳಬೇಕೆಂದರೆ, ಮೊಬೈಲ್ ಒಂದರ್ಥದಲ್ಲಿ ಎಲ್ಲರ ಸಂಗಾತಿ ಆಗಿ ಬಿಟ್ಟಿದೆ. ಆದರೆ, ಹೆಂಡತಿ ಜೊತೆಗಿದ್ದರೂ ಕೂಡ ಗಂಡ ಸದಾ ಕಾಲ ಮೊಬೈಲ್ ಗೆ ಅಂಟಿ ಕೊಂಡಿದ್ದರೆ, ಹೆಂಡತಿಗೆ ಕಾಣದಂತೆ ಬೇರೆಯವರ ಜೊತೆ ಚಾಟ್ ಮಾಡುತ್ತಿದ್ದರೆ ಅದು ಹೆಣ್ಣಿಗೆ ಅನುಮಾನ ಹುಟ್ಟುವಂತೆ ಮಾಡುತ್ತದೆ.
ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬ ಮಾತಿದೆ. ಪತಿ-ಪತ್ನಿಯ ನಡುವೆ ಸುಖಾಸುಮ್ಮನೆ ಜಗಳವಾಗುತ್ತಿದ್ದರೆ, ಹೆಂಡತಿ ನಿಂತರೂ, ಕುಂತರೂ ಎಲ್ಲದಕ್ಕೂ ಗಂಡ ಮುನಿಸಿಕೊಳ್ಳುತ್ತಿದ್ದರೆ ಅದು ದಾಂಪತ್ಯ ಜೀವನದಲ್ಲಿ ಬಿರುಕುಂಟಾಗುವಂತೆ ಮಾಡುತ್ತದೆ.
ಹೆಣ್ಣು-ಗಂಡು ಇಬ್ಬರೂ ಸಮಾನರು ಎಂದು ಎಷ್ಟೇ ಹೇಳಿದರೂ ಕೂಡ ಹೆಣ್ಣು ತನ್ನ ಗಂಡನ ವಿಷಯದಲ್ಲಿ ತುಂಬಾ ಸ್ವಾರ್ಥಿಯಾಗಿರುತ್ತಾಳೆ. ತನ್ನ ಪತಿ ಇತರ ಹೆಂಗಸಿನೊಂದಿಗೆ ಗಂಟೆಗಟ್ಟಲೆ ಮಾತನಾಡುವುದನ್ನು ಹೆಣ್ಣು ಸಹಿಸುವುದಿಲ್ಲ. ಇಂತಹ ಸಂದರ್ಭದಲ್ಲೂ ಕೂಡ ಹೆಣ್ಣಿಗೆ ಗಂಡನ ಮೇಲೆ ಅನುಮಾನ ಮೂಡುತ್ತದೆ.
ಕೋಪ ಮನುಷ್ಯನ ಸಹಜ ಗುಣ. ಯಾವಾಗಲೋ ಒಮ್ಮೆ ಒತ್ತಡದಲ್ಲಿ ಗಂಡ ಹೆಂಡತಿಯ ಮೇಲೆ ಕೋಪ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಸಣ್ಣ-ಪುಟ್ಟ ತಪ್ಪಿಗೂ ಕೂಡ ಗಂಡ ಹೆಂಡತಿ ಮೇಲೆ ಕೋಪಗೊಳ್ಳುತ್ತಿದ್ದರೆ, ಸದಾ ಎಲ್ಲಾ ತಪ್ಪುಗಳಿಗೂ ಆಕೆಯನ್ನೇ ಗುರಿ ಮಾಡುತ್ತಿದ್ದರೆ ಅದೂ ಕೂಡ ಹೆಂಡತಿಗೆ ಅನುಮಾನ ಹುಟ್ಟುವಂತೆ ಮಾಡುತ್ತದೆ. ತನ್ನ ಗಂಡನಿಗೆ ಪರ ಸ್ತ್ರೀ ಸಹವಾಸ ಇರಬಹುದೇ? ಅದಕ್ಕಾಗಿಯೇ ಅವರು ನನ್ನೊಂದಿಗೆ ಹೀಗೆ ನಡೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಸೂಚನೆ: ಇದು ಸಾಮಾನ್ಯ ಮಾಹಿತಿಯಷ್ಟೇ, Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.