ಶಬರಿಮಲೆ ಪ್ರವೇಶಕ್ಕೆ ಇಬ್ಬರು ಮಹಿಳೆಯರಿಗೆ ತಡೆ

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮುಂದಾದ ಇಬ್ಬರು ಮಹಿಳೆಯರನ್ನು ದೇಗುಲದಿಂದ ಒಂದು ಕಿ.ಮೀ. ದೂರದಲ್ಲಿಯೇ ಪ್ರತಿಭಟನಾಕಾರರು ತಡೆದಿದ್ದಾರೆ.  

Last Updated : Dec 24, 2018, 11:29 AM IST
ಶಬರಿಮಲೆ ಪ್ರವೇಶಕ್ಕೆ ಇಬ್ಬರು ಮಹಿಳೆಯರಿಗೆ ತಡೆ title=

ಅಪ್ಪಚ್ಚಿಮೇಡು: ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಇಬ್ಬರು ಮಹಿಳೆಯರನ್ನು ಒಂದು ಕಿ.ಮೀ. ಅಂತರದಲ್ಲಿ ತಡೆದು ಅಯ್ಯಪ್ಪ ಸ್ವಾಮಿ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. 

ಶಬರಿಮಲೆ ಪ್ರವೇಶಿಸಲು ಯತ್ನಿಸಿದ 50 ವರ್ಷದ ಒಳಗಿನ 11 ಮಹಿಳೆಯರನ್ನು ಭಾನುವಾರ ಅಯ್ಯಪ್ಪ ಭಕ್ತರು ತಡೆದ ಬೆನ್ನಲ್ಲೇ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮುಂದಾದ ಇಬ್ಬರು ಮಹಿಳೆಯರನ್ನು ದೇಗುಲದಿಂದ ಒಂದು ಕಿ.ಮೀ. ದೂರದಲ್ಲಿಯೇ ಪ್ರತಿಭಟನಾಕಾರರು ತಡೆದಿದ್ದಾರೆ.

ಪೊಲೀಸ್ ಭದ್ರತೆಯಲ್ಲಿ ಆಗಮಿಸುತ್ತಿದ್ದರೂ 100 ಹೆಚ್ಚು ಮಂದಿ ಪ್ರತಿಭಟನಾಕಾರರು ಅವರನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಮತ್ತಷ್ಟು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಮತ್ತೊಂದೆಡೆ ಮಹಿಳೆಯರು ಕೂಡ ತಾವು ಯಾವುದೇ ಕಾರಣಕ್ಕೂ ಅಯ್ಯಪ್ಪಸ್ವಾಮಿ ದರ್ಶನ ಪಡೆಯದೆ ಹಿಂತಿರುಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಶಬರಿಮಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾನುವಾರವಷ್ಟೇ ತಮಿಳುನಾಡಿನ 11 ಮಹಿಳೆಯರು ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ, ಭಕ್ತರು ಅವರನ್ನು 5 ಕಿ.ಮೀ. ದೂರದಲ್ಲೇ ತಡೆದು ತೀವ್ರ ಪ್ರತಿಭಟನೆ ನಡೆಸಿದ್ದರು.

Trending News