"ಜನಸೇವೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಗೆ ʻ0ʼ ಅಂಕ"

MLA Ravindra Srikantaiah on Sumalatha : ಜನಸೇವೆಯಲ್ಲಿ ಸಂಸದೆ ಸುಮಲತಾಗೆ ಝೀರೋ ಮಾರ್ಕ್ಸ್ ನೀಡಬೇಕು ಅಷ್ಟೆ, ಆದರೆ ಸುಮಲತಾ ದಿಶಾ ಮೀಟಿಂಗ್ ಮಾಡೋದಕ್ಕ ಫಸ್ಟ್ ಪ್ರೈಸ್ ಕೊಡಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.  

Written by - Prashobh Devanahalli | Edited by - Chetana Devarmani | Last Updated : Feb 14, 2023, 12:50 PM IST
  • ಜನಸೇವೆಯಲ್ಲಿ ಸಂಸದೆ ಸುಮಲತಾಗೆ ಝೀರೋ ಮಾರ್ಕ್ಸ್
  • ಮತದಾರರ ಭೇಟಿ ಮಾಡಿಲ್ಲ, ಜನರನ್ನ ವಿಶ್ವಾಸಕ್ಕೆ ಪಡೆದಿಲ್ಲ
  • ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ
"ಜನಸೇವೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಗೆ ʻ0ʼ ಅಂಕ"  title=
ಸುಮಲತಾ

ಬೆಂಗಳೂರು : ಜನಸೇವೆಯಲ್ಲಿ ಸಂಸದೆ ಸುಮಲತಾಗೆ ಝೀರೋ ಮಾರ್ಕ್ಸ್ ನೀಡಬೇಕು ಅಷ್ಟೆ, ಆದರೆ ಸುಮಲತಾ ದಿಶಾ ಮೀಟಿಂಗ್ ಮಾಡೋದಕ್ಕ ಫಸ್ಟ್ ಪ್ರೈಸ್ ಕೊಡಬೇಕು. ಮತದಾರರ ಭೇಟಿ ಮಾಡಿಲ್ಲ, ಜನರನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿಲ್ಲ, ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದರು.

ವಿಧಾಸೌಧದಲ್ಲಿ ಮಾತಾನ್ನಾಡಿದ ಇವರು, ಸುಮಲತಾಗೆ ಯಾವುದೇ ರಾಜಕೀಯ ಪಕ್ಷಗಳು ಅಕ್ಕರೆ ತೋರುತ್ತಿಲ್ಲ.ಬಿಜೆಪಿ ಸೇರಲು ಅನೇಕ‌ ಕಂಡಿಷನ್ ಹಾಕಿದ್ರು ಅವರು‌ ಒಲವು ತೋರುತ್ತಿಲ್ಲ.ಕಾಂಗ್ರೆಸ್‌ ನಾಯಕರ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ,ಈಗ ಚೆಲುವರಾಯಸ್ವಾಮಿ ಕೂಡ ವಿರೋಧ ಮಾಡ್ತಿದ್ದಾರೆ.ಜನಸ್ಪಂದನೆ ಕಳೆದುಕೊಂಡ ಮೇಲೆ ಯಾರೂ ಆಹ್ವಾನ ನೀಡುತ್ತಿಲ್ಲ, ಎಂದು ಹೇಳಿದರು.

ಇದನ್ನೂ ಓದಿ : Viral Video : ಇದ್ದಕ್ಕಿದ್ದಂತೆ ವಾಹನದ ಮೇಲೆ ಆನೆ ದಾಳಿ.! ಬಡಪಾಯಿ ಚಾಲಕನ ಪಾಡು ನೋಡಿ..

ಅಶೋಕ್ ಮಂಡ್ಯ ಜಿಲ್ಲಾ ಉಸ್ತುವಾರಿ ಬದಲಾವಣೆ:

ಸಚಿವ ಆರ್ ಅಶೋಕ್ ಅವರ ಮಂಡ್ಯ ಉಸ್ತುವಾರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಇವರು, ಮೊದಲು ನಾರಾಯಣ್ ಗೌಡ್ರ ಇದ್ರು ಮತ್ತೆ ಆರ್ ಅಶೋಕ್ ಗೆ ಕೊಟ್ಟಿದ್ರು.ಈಗ ಅವರ ಮೇಲೆ ಅಪನಂಬಿಕೆ ಇಟ್ಟು ಕೊಂಡು ತೆಗೆದಿದ್ದಾರೆ.ಬಿಜೆಪಿಯಲ್ಲಿ ಅವರ ನಾಯಕರ ಮೇಲೆ ನಂಬಿಕೆಯಿಲ್ಲದಂತೆ ಆಗಿದೆ, ಎಂದರು.

ಕುಟುಂಬ ರಾಜಕಾರಣ ಅಮಿತ್ ಶಾ ಹೇಳಿಕೆ:

ಜೆಡಿಎಸ್ ಕುಟುಂಬ ರಾಜಕಾರಣ ಎಂಬ ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ,ಈಗಾ ಸ್ಪಷ್ಟವಾಗುತ್ತಿದೆ ಜೆಡಿಎಸ್ ಪಕ್ಷದ ಹವಾ ಅಮಿತ್ ಶಾ ವರೆಗೂ ತಲುಪಿದೆ.ಯಾರು ಕೂಡಾ ಬ್ಯಾಕ್ ಡೋರ್ ಯಿಂದ ಬಂದಂತವರು ಅಲ್ಲಾ .ಎಲ್ಲರೂ ಸ್ವಂತ ಶಕ್ತಿಯಿಂದ ಸ್ಪರ್ದೆ ಮಾಡಿ ಬಂದವರು.ಬಿಜೆಪಿಯಿಲ್ಲೂ ಕುಟುಂಬದ ರಾಜಕಾರಣ ಇದೆ, ಯಡಿಯೂರಪ್ಪ,ಅವರ ಮಗ ಇಬ್ಬರು ರಾಜಕಾರಣದಲ್ಲಿದ್ದಾರೆ.ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಸರಿಯಿಲ್ಲ.ಜನರು ಪ್ರಾದೇಶಿಕ ಪಕ್ಷ ಬೆಂಬಲಿಸುತ್ತಿದ್ದಾರೆ, ಎಂದರು.

ಇದನ್ನೂ ಓದಿ : ಅಪ್ಪು ಕನಸಿನ ಕೂಸು 'ಗಂಧದಗುಡಿ' ಬಗ್ಗೆ ಪತ್ನಿ ಅಶ್ವಿನಿ ಪುನೀತ್ ಜೊತೆ ಮಾತನಾಡಿದ ಪ್ರಧಾನಿ ಮೋದಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News