Train Engine Rule: ಯಾವುದೇ ನಿಲ್ದಾಣ ಬಂದರೂ ಸಹ ರೈಲಿನ ಇಂಜಿನ್ ಬಂದ್ ಆಗುವುದಿಲ್ಲ ಯಾಕೆ ಗೊತ್ತಾ? ಕಾರಣ ಕೇಳಿದ್ರೆ ಶಾಕ್ ಆಗ್ತೀರ

Train Engine Rule: ರೈಲ್ವೇ ಏಕೆ ಹೀಗೆ ಮಾಡುತ್ತದೆ ಎಂಬ ರಹಸ್ಯವನ್ನು ತಿಳಿದುಕೊಳ್ಳಲು ಜನರು ಸಾಮಾನ್ಯವಾಗಿ ಕುತೂಹಲದಿಂದ ಕೂಡಿರುತ್ತಾರೆ. ಕಾರಣವನ್ನು ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ತಿಳಿದರೆ ನೀವೂ ಶಾಕ್ ಆಗುವುದು ಖಂಡಿತ. ಇತರ ವಾಹನಗಳಂತೆ ರೈಲಿನ ಎಂಜಿನ್ ಅನ್ನು ಎಂದಿಗೂ ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ.

Written by - Bhavishya Shetty | Last Updated : Feb 11, 2023, 06:42 AM IST
    • ನಿಲ್ದಾಣದಲ್ಲಿ ಹೆಚ್ಚು ಹೊತ್ತು ನಿಂತಾಗ ಅದರ ಇಂಜಿನ್ ಕೂಡ ಸ್ವಿಚ್ ಆಫ್ ಮಾಡಬೇಕು ಅಲ್ಲವೇ?
    • ಎಷ್ಟೇ ನಿಲ್ದಾಣಗಳು ಬಂದರೂ ರೈಲಿನ ಇಂಜಿನ್ ಸ್ವಿಚ್ ಆಫ್ ಆಗುವುದಿಲ್ಲ
    • ಹೆಚ್ಚು ಹೊತ್ತು ನಿಂತರೂ ಲೊಕೊ ಪೈಲಟ್ ಇಂಜಿನ್ ಆನ್ ಮಾಡಿರುತ್ತಾನೆ.
Train Engine Rule: ಯಾವುದೇ ನಿಲ್ದಾಣ ಬಂದರೂ ಸಹ ರೈಲಿನ ಇಂಜಿನ್ ಬಂದ್ ಆಗುವುದಿಲ್ಲ ಯಾಕೆ ಗೊತ್ತಾ? ಕಾರಣ ಕೇಳಿದ್ರೆ ಶಾಕ್ ಆಗ್ತೀರ title=
train engine

Train Engine Rule: ಪ್ರಯಾಣದ ವೇಳೆ ಎಲ್ಲೋ ನಿಲ್ಲಿಸುವಾಗ ಬಸ್, ಕಾರು, ಬೈಕ್‌ಗಳ ಎಂಜಿನ್‌ ಆಫ್ ಆಗಿರುತ್ತದೆ. ಅದೇ ರೀತಿ ರೈಲು ನಿಲ್ದಾಣದಲ್ಲಿ ಹೆಚ್ಚು ಹೊತ್ತು ನಿಂತಾಗ ಅದರ ಇಂಜಿನ್ ಕೂಡ ಸ್ವಿಚ್ ಆಫ್ ಮಾಡಬೇಕು ಅಲ್ಲವೇ? ಆದರೆ ಅದು ಆಗುವುದಿಲ್ಲ. ತಲುಪಬೇಕಾದ ಸ್ಥಳವನ್ನು ತಲುಪುವಾಗ ಎಷ್ಟೇ ನಿಲ್ದಾಣಗಳು ಬಂದರೂ ರೈಲಿನ ಇಂಜಿನ್ ಸ್ವಿಚ್ ಆಫ್ ಆಗುವುದಿಲ್ಲ. ರೈಲು ಖಾಲಿಯಾಗಿದ್ದರೂ ಸಹ ದೊಡ್ಡ ನಿಲ್ದಾಣಗಳಲ್ಲಿಯೂ ರೈಲುಗಳ ಎಂಜಿನ್ ಆನ್ ಆಗಿರುವುದನ್ನು ನೀವು ಹಲವಾರು ಬಾರಿ ನೋಡಿರಬೇಕು.

ಇದನ್ನೂ ಓದಿ: Funny Video: ಆಂಟಿಗೆ ಪ್ರೊಪೋಸ್ ಮಾಡಿದ ಪೋರ! ಕನಸಲ್ಲೂ ಊಹಿಸದ ಉತ್ತರ ಕೊಟ್ಟ ಮಹಿಳೆ

ರೈಲ್ವೇ ಏಕೆ ಹೀಗೆ ಮಾಡುತ್ತದೆ ಎಂಬ ರಹಸ್ಯವನ್ನು ತಿಳಿದುಕೊಳ್ಳಲು ಜನರು ಸಾಮಾನ್ಯವಾಗಿ ಕುತೂಹಲದಿಂದ ಕೂಡಿರುತ್ತಾರೆ. ಕಾರಣವನ್ನು ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ತಿಳಿದರೆ ನೀವೂ ಶಾಕ್ ಆಗುವುದು ಖಂಡಿತ. ಇತರ ವಾಹನಗಳಂತೆ ರೈಲಿನ ಎಂಜಿನ್ ಅನ್ನು ಎಂದಿಗೂ ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ. ವಾಸ್ತವವಾಗಿ ಡೀಸೆಲ್ ಎಂಜಿನ್ ಅನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲು ಸಾಧ್ಯವಾಗದ ರೀತಿಯಲ್ಲಿ ನಿರ್ಮಿಸಲಾಗಿದೆ.

ಡೀಸೆಲ್ ಎಂಜಿನ್ ತಂತ್ರಜ್ಞಾನವನ್ನು ಬಹಳ ಸಂಕೀರ್ಣವೆಂದು ಪರಿಗಣಿಸಲಾಗಿದೆ. ರೈಲು ನಿಲ್ದಾಣದಲ್ಲಿ ಸ್ವಲ್ಪ ಸಮಯ ಅಥವಾ ಹೆಚ್ಚು ಹೊತ್ತು ನಿಂತರೂ ಲೊಕೊ ಪೈಲಟ್ ಇಂಜಿನ್ ಆನ್ ಮಾಡಿರುತ್ತಾನೆ. ರೈಲು ನಿಲ್ಲಿಸಿದಾಗ, ಆ ಸಮಯದಲ್ಲಿ ರೈಲ್ವೇ ಇಂಜಿನ್ ಬ್ರೇಕ್ ಒತ್ತಡವನ್ನು ಕಳೆದುಕೊಳ್ಳುತ್ತದೆ. ಆಗ ರೈಲು ನಿಂತಾಗ ಸೀಟಿಯಂತಹ ಸದ್ದು ಕೇಳಿಸುತ್ತದೆ. ಬ್ರೇಕ್ ಒತ್ತಡವನ್ನು ಬಿಡುಗಡೆ ಮಾಡಲಾಗಿದೆ ಎಂದು ಇದು ಸೂಚಿಸುತ್ತದೆ. ಆಗ ಈ ಒತ್ತಡವೂ ನಿರ್ಮಾಣವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ.

ಪ್ರತಿ ನಿಲ್ದಾಣದಲ್ಲಿ ರೈಲಿನ ಇಂಜಿನ್ ನಿಲ್ಲಿಸಿದರೆ, ಬ್ರೇಕ್ ಒತ್ತಡವನ್ನು ನಿರ್ಮಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ನಿಲ್ಲಿಸಿದ ನಂತರ ಎಂಜಿನ್ ಅನ್ನು ಮತ್ತೆ ಪ್ರಾರಂಭಿಸುವುದು ತುಂಬಾ ಕಷ್ಟ. ವಾಸ್ತವವಾಗಿ, ರೈಲಿನ ಎಂಜಿನ್ ಅನ್ನು ನಿಲ್ಲಿಸಲು ಮತ್ತು ಅದನ್ನು ಮತ್ತೆ ಪ್ರಾರಂಭಿಸಲು 20 ನಿಮಿಷಗಳವರೆಗೆ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಫೆಬ್ರುವರಿ 14 ರ ಗೋವು ಅಪ್ಪುಗೆ ನಿರ್ಧಾರ ವಾಪಸ್ ಪಡೆದ ಕೇಂದ್ರ

ಒಂದು ಪ್ರಮುಖ ವಿಷಯವೆಂದರೆ ರೈಲ್ವೇ ಎಂಜಿನ್ ಅನ್ನು ಸ್ಥಗಿತಗೊಳಿಸುವುದರಿಂದ, ಇಂಜಿನ್ ವ್ಯವಸ್ಥೆಯೂ

ವಿಫಲಗೊಳ್ಳುವ ಅಪಾಯವಿದೆ. ಏಕೆಂದರೆ ಡೀಸೆಲ್ ಎಂಜಿನ್‌ನಲ್ಲಿ ಬ್ಯಾಟರಿಯನ್ನು ಅಳವಡಿಸಲಾಗಿದೆ, ಅದು ರೈಲಿನ ಎಂಜಿನ್ ಅನ್ನು ಪ್ರಾರಂಭಿಸಿದಾಗ ಮಾತ್ರ ಚಾರ್ಜ್ ಆಗುತ್ತದೆ. ಈ ಕಾರಣಕ್ಕಾಗಿಯೇ ಯಾವುದೇ ನಿಲ್ದಾಣದಲ್ಲಿ ರೈಲ್ವೆಯ ಇಂಜಿನ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News